AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಇವೆಂಟ್​​ನಲ್ಲಿ ಅವಘಡ, ಎಫ್​​ಐಆರ್ ದಾಖಲಿಸಿದ ಪೊಲೀಸರು

Toxic movie pre release: ನಟ ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಇನ್ನೂ ಹಲವಾರು ಸೆಲೆಬ್ರಿಟಿಗಳು, ಸಚಿವ, ಶಿಕ್ಷಣ ಸಂಸ್ಥೆಗಳ ಮಾಲೀಕ ಮಲ್ಲಾ ರೆಡ್ಡಿ, ನಿರ್ಮಾಪಕ ದಿಲ್ ರಾಜು ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಟ ಯಶ್ ವೇದಿಕೆ ಮೇಲೆ ಮಾತನಾಡುವ ಸಮಯದಲ್ಲಿ ಅವಘಡವೊಂದು ಸಂಭವಿಸಿತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್​​ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

‘ಟಾಕ್ಸಿಕ್’ ಇವೆಂಟ್​​ನಲ್ಲಿ ಅವಘಡ, ಎಫ್​​ಐಆರ್ ದಾಖಲಿಸಿದ ಪೊಲೀಸರು
Toxic Pre Release
ಮಂಜುನಾಥ ಸಿ.
|

Updated on: Aug 23, 2026 | 4:06 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದ ಇವೆಂಟ್ ನಿನ್ನೆ ಹೈದರಾಬಾದ್​​ನಲ್ಲಿ ನಡೆದಿದೆ.
  • ಈ ಇವೆಂಟ್​​ನಲ್ಲಿ ಸಣ್ಣ ಅವಘಡವೊಂದು ಸಂಭವಿಸಿತ್ತು.
  • ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಆಗಸ್ಟ್ 22) ಹೈದರಾಬಾದ್​​ನ ಮಲ್ಲಾ ರೆಡ್ಡಿ ಯೂನಿವರ್ಸಿಟಿಯ ಬೃಹತ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ನಟ ಯಶ್, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಇನ್ನೂ ಹಲವಾರು ಸೆಲೆಬ್ರಿಟಿಗಳು, ಸಚಿವ, ಶಿಕ್ಷಣ ಸಂಸ್ಥೆಗಳ ಮಾಲೀಕ ಮಲ್ಲಾ ರೆಡ್ಡಿ, ನಿರ್ಮಾಪಕ ದಿಲ್ ರಾಜು ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ನಟ ಯಶ್ ವೇದಿಕೆ ಮೇಲೆ ಮಾತನಾಡುವ ಸಮಯದಲ್ಲಿ ಅವಘಡವೊಂದು ಸಂಭವಿಸಿತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್​​ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

ನಿನ್ನೆ ರಾತ್ರಿ ನಡೆದ ‘ಟಾಕ್ಸಿಕ್’ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯ ಜನ ಸೇರಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಯಶ್ ಮಾತನಾಡುವಾಗ ಕೆಲ ಯುವಕರು ಸೌಂಡ್ ಬಾಕ್ಸ್ ಇಡಲು ಹಾಕಲಾಗಿದ್ದ ಕಬ್ಬಿಣದ ಪೈಪುಗಳಿಂದ ಸ್ಟ್ರಕ್ಚರ್ ಒಂದನ್ನು ಏರಿ ಕೂತಿದ್ದರು. ತೂಕಕ್ಕೆ ಸೌಂಡ್ ಬಾಕ್ಸ್ ಕೆಳಗೆ ಬಿತ್ತು, ಅದರ ಜೊತೆಗೆ ಪೈಪುಗಳಿಂದ ಮಾಡಿದ ಸ್ಟ್ರಕ್ಚರ್ ಸಹ ಕೆಳಗೆ ಬಿದ್ದು, ಸ್ಟ್ರಕ್ಚರ್ ಏರಿದ್ದ ವಿದ್ಯಾರ್ಥಿಗಳು ಸಹ ಬಿದ್ದರು. ಈ ಅವಘಡದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದವು.

ಇದೀಗ ಈ ಘಟನೆಗೆ ಸಂಬಂಧಿಸಿಂತೆ ಸೈಬರಾಬಾದ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಎಫ್​​ಐಆರ್ ಸಹ ದಾಖಲು ಮಾಡಿಕೊಂಡಿದ್ದಾರೆ. ಘಟನೆ ನಡೆದ ಮಲ್ಲಾ ರೆಡ್ಡಿ ಇನ್​​ಸ್ಟಿಟ್ಯೂಟಿನ ಮ್ಯಾನೇಜ್​​ಮೆಂಟ್ ಹಾಗೂ ‘ಟಾಕ್ಸಿಕ್’ ಪ್ರೀ ರಿಲೀಸ್ ಇವೆಂಟ್​​ ಅನ್ನು ಆಯೋಜಿಸಿದ್ದ ಇವೆಂಟ್ ಮ್ಯಾನೇಜ್​​ಮೆಂಟ್ ಸಂಸ್ಥೆಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಯಶ್​ಗೆ ಹುಚ್ಚು ಹಿಡಿದಿದೆ ಎಂದುಕೊಂಡಿದ್ದೆ: ದಿಲ್ ರಾಜು ಹೇಳಿದ್ದೇನು?

ನಿನ್ನೆ ರಾತ್ರಿ ನಡೆದ ಅವಘಡದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ ಆದರೆ ನಾಲ್ವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಸೌಂಡ್ ಬಾಕ್ಸ್ ಬಿದ್ದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದ ಕೂಡಲೇ ಆಂಬುಲೆನ್ಸ್ ಬಂದು ಗಾಯಾಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿವೆ. ಅದೂ ಸಹ ವಿಡಿಯೋಗಳಲ್ಲಿ ದಾಖಲಾಗಿದ್ದು, ವಿಡಿಯೋಗಳು ವೈರಲ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us