AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ಗೆ ಹುಚ್ಚು ಹಿಡಿದಿದೆ ಎಂದುಕೊಂಡಿದ್ದೆ: ದಿಲ್ ರಾಜು ಹೇಳಿದ್ದೇನು?

Toxic movie event: ‘ಟಾಕ್ಸಿಕ್’ ಸಿನಿಮಾ ಅನ್ನು ತೆಲುಗು ರಾಜ್ಯಗಳಲ್ಲಿ ಖ್ಯಾತ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ವಿತರಣೆ ಮಾಡುತ್ತಿದ್ದಾರೆ. ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಸಿನಿಮಾದ ಬಲು ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ದಿಲ್ ರಾಜು ಯಶ್ ಅವರನ್ನು ಕೊಂಡಾಡಿದರು.

ಯಶ್​ಗೆ ಹುಚ್ಚು ಹಿಡಿದಿದೆ ಎಂದುಕೊಂಡಿದ್ದೆ: ದಿಲ್ ರಾಜು ಹೇಳಿದ್ದೇನು?
Dil Raju Yash
ಮಂಜುನಾಥ ಸಿ.
|

Updated on:Aug 23, 2026 | 7:38 AM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾವನ್ನು ದಿಲ್ ರಾಜು ವಿತರಿಸುತ್ತಿದ್ದಾರೆ.
  • ಹೈದರಾಬಾದ್​​ನಲ್ಲಿ ಟಾಕ್ಸಿಕ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ನಡೆದಿದೆ.
  • ದಿಲ್ ರಾಜು, ಯಶ್ ಬಗ್ಗೆ ಆಡಿದ ಮಾತು ಗಮನ ಸೆಳೆದವು

ಟಾಕ್ಸಿಕ್’ (Toxic) ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದ್ದು, ಸಿನಿಮಾವನ್ನು ತೆಲುಗು ರಾಜ್ಯಗಳಲ್ಲಿ ಖ್ಯಾತ ನಿರ್ಮಾಪಕ ಮತ್ತು ವಿತರಕ ದಿಲ್ ರಾಜು ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22 ರಂದು ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನ ಸಾಗರವೇ ತುಂಬಿದ್ದ ಕಾರ್ಯಕ್ರಮದಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಹಲವು ಪ್ರಮುಖರು ವೇದಿಕೆಯಲ್ಲಿ ಮಾತನಾಡಿದರು. ಸಿನಿಮಾ ಅನ್ನು ವಿತರಣೆ ಮಾಡುತ್ತಿರುವ ನಿರ್ಮಾಪಕ ದಿಲ್ ರಾಜು, ಯಶ್ ಬಗ್ಗೆ ಆಡಿದ ಮಾತುಗಳು ವಿಶೇಷವಾಗಿ ಗಮನ ಸೆಳೆದವು.

‘ಕೆಜಿಎಫ್’, ‘ಕೆಜಿಎಫ್ 2’ ಅಂಥಹಾ ಸಿನಿಮಾ ಮಾಡಿದ್ದ ಯಶ್, ಒಮ್ಮೆ ಸಿಕ್ಕಿದಾಗ, ಗೀತೂ ಮೋಹನ್​​ದಾಸ್ ಎಂಬ ನಿರ್ದೇಶಕಿ ಜೊತೆಗೆ ಹೊಸ ಸಿನಿಮಾ ಮಾಡುತ್ತಿದ್ದೀನಿ ಎಂದರು. ‘ಕೆಜಿಎಫ್’, ‘ಕೆಜಿಎಫ್ 2’ ಅಂಥಹಾ ಸಿನಿಮಾಗಳನ್ನು ಮಾಡಿದ ನಟ, ಇನ್ನೂ ದೊಡ್ಡದಾಗಿ ಯೋಚನೆ ಮಾಡುವುದು ಬಿಟ್ಟು, ಹೆಸರೇ ಗೊತ್ತಿಲ್ಲದ ನಿರ್ದೇಶಕಿ ಜೊತೆ ಸಿನಿಮಾ ಮಾಡುತ್ತಿದ್ದೀನಿ ಎಂದಿದ್ದನ್ನು ಕೇಳಿ ನಾವು ಕೆಲವರು ಯಶ್ ಅವರಿಗೇನು ಹುಚ್ಚು ಹಿಡಿದಿದೆಯಾ? ಎಂದುಕೊಂಡಿದ್ದೆವು’ ಎಂದರು ದಿಲ್ ರಾಜು.

‘ಆದರೆ ಯಶ್ ಅವರು ಮುಂಬೈನಲ್ಲಿ ಕೆಲ ತಿಂಗಳುಗಳ ಮುಂಚೆ ‘ಟಾಕ್ಸಿಕ್’ ಸಿನಿಮಾದ ಕೆಲ ದೃಶ್ಯಗಳನ್ನು ತೋರಿಸಿದರು. ಅದನ್ನು ನೋಡಿ ಯಶ್ ಅವರ ವಿಷನ್ ಎಂಥಹದ್ದು ಎಂಬುದು ಗೊತ್ತಾಯ್ತು. ನಾನು ಅಂದೇ ನಿಶ್ಚಯಿಸಿದ್ದೆ, ಈ ಸಿನಿಮಾ ಅನ್ನು ನಾನೇ ವಿತರಣೆ ಮಾಡಬೇಕು ಎಂದು. ಅದೇ ಕಾರಣಕ್ಕೆ ಸಿನಿಮಾದ ವಿತರಣೆ ಒಪ್ಪಂದದ ವಿಚಾರ ಬಂದಾಗ ಮರು ಮಾತನಾಡದೆ ಕೆವಿಎನ್ ಹಾಗೂ ಯಶ್ ಹೇಳಿದ ಮೊತ್ತಕ್ಕೆ ನಾನು ಓಕೆ ಹೇಳಿದೆ’ ಎಂದರು ದಿಲ್ ರಾಜು.

ಇದನ್ನೂ ಓದಿ:ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ

‘ಯಶ್, ಅದ್ಭುತವಾದ ವಿಷನರಿ ನಟ. ಅವರು ಹಾಗೂ ರಾಜಮೌಳಿ ಅವರು ತಮ್ಮ ವಿಷನ್ ಮೂಲಕ ಭಾರತೀಯ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಲ್ಲಿ ಅವರ ಶ್ರಮ, ಅವರ ದೂರಾಲೋಚನೆ, ರಿಸ್ಕ್ ತೆಗೆದುಕೊಳ್ಳುವ ಛಲವೇ ಕಾರಣ’ ಎಂದು ಕೊಂಡಾಡಿದರು.

ಸಿನಿಮಾದ ನಿರ್ಮಾಪಕ ಕೆವಿಎನ್ ಅವರನ್ನು ಕೊಂಡಾಡಿದ ದಿಲ್ ರಾಜು, ‘ನಾನು ಈ ವರೆಗೆ 400ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದೇನೆ. 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಆದರೆ ಪ್ರಸ್ತುತ ದೇಶದ ನಂಬರ್ 1 ನಿರ್ಮಾಪಕ ಎಂದರೆ ಅದು ವೆಂಕಟ್ ಅವರೇ. ಅವರು ಸಿನಿಮಾದ ಮೇಲೆ ಫ್ಯಾಷನ್ ಇರಿಸಿಕೊಂಡು ಬಂದವರು. ಹಲವಾರು ಭಾಷೆಗಳಲ್ಲಿ ಅವರು ದೊಡ್ಡ ದೊಡ್ಡ ನಟರುಗಳೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ’ ಎಂದರು ದಿಲ್ ರಾಜು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 am, Sun, 23 August 26

Follow Us