AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಪ್ರೀ ರಿಲೀಸ್: ತೆಲುಗು ನೆಲದಲ್ಲಿ ಯಶ್ ಅಬ್ಬರ

Toxic pre release event: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಇವೆಂಟ್ ಹೈದರಾಬಾದ್​​ನಲ್ಲಿ ಇಂದು (ಆಗಸ್ಟ್ 22) ಆಯೋಜನೆ ಮಾಡಲಾಗಿತ್ತು. ಯಶ್ ಅವರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ತೆಲುಗು ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತೆಲುಗು ರಾಜ್ಯಗಳಲ್ಲಿ ಯಶ್ ಕ್ರೇಜ್ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು ಇಂದಿನ ಕಾರ್ಯಕ್ರಮ.

‘ಟಾಕ್ಸಿಕ್’ ಪ್ರೀ ರಿಲೀಸ್: ತೆಲುಗು ನೆಲದಲ್ಲಿ ಯಶ್ ಅಬ್ಬರ
Yash In Hyderabad
ಮಂಜುನಾಥ ಸಿ.
|

Updated on: Aug 22, 2026 | 10:55 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಪ್ರೀ ರಿಲೀಸ್ ಇವೆಂಟ್ ಹೈದರಾಬಾದ್​​ನಲ್ಲಿ ನಡೆದಿದೆ.
  • ಯಶ್ ಅವರನ್ನು ಕಾಣಲು ಭಾರಿ ಸಂಖ್ಯೆಯ ಜನ ಇವೆಂಟ್​​ಗೆ ಸೇರಿದ್ದರು.
  • ಇವೆಂಟ್​​ನಲ್ಲಿ ಯಶ್ ಹೇಳಿದ್ದೇನು? ಇಲ್ಲಿದೆ ಮಾಹಿತಿ

ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳು ಬಾಕಿ ಇರುವಾಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್​​ ಹೈದರಾಬಾದ್​​ನಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಆಗಸ್ಟ್ 22 ರಂದು ಹೈದರಾಬಾದ್​​ನ ಮಲ್ಲಾ ರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಯಶ್ ಅವರಿಗೆ ತೆಲುಗು ರಾಜ್ಯಗಳಲ್ಲಿ ಇರುವ ಕ್ರೇಜ್​​ಗೆ ಸಾಕ್ಷಿಯಾಗಿತ್ತು.

ಕನ್ನಡದಲ್ಲಿ ‘ಎಲ್ಲರಿಗೂ ನಮಸ್ಕಾರ’ ಎನ್ನುವ ಮೂಲಕ ಮಾತು ಆರಂಭಿಸಿದ ಯಶ್, ತೆಲುಗು, ಇಂಗ್ಲೀಷ್ ಅಲ್ಲಲ್ಲಿ ಕನ್ನಡ ಬೆರೆಸಿ ಮಾತನಾಡಿದರು. ತೆಲುಗು ಪ್ರೇಕ್ಷಕರು ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಕ್ಕೆ ತೆಲುಗು ಪ್ರೇಕ್ಷಕರು ತೋರಿದ ಪ್ರೀತಿಗೆ ಮೊದಲು ಧನ್ಯವಾದ ಅರ್ಪಿಸಿದ ನಟ ಯಶ್, ತೆಲುಗು ಪ್ರೇಕ್ಷಕರು ಯಾರ ಹಿನ್ನೆಲೆಯೂ ನೋಡದೆ, ಯಾವ ರಾಜಕೀಯಗಳಿಗೂ ಬಗ್ಗದೆ, ಒಳ್ಳೆಯ ಸಿನಿಮಾಗಳಿಗೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದ್ದಾರೆ’ ಎಂದರು.

‘ಎಲ್ಲರೂ ಭಾರತೀಯ ಸಿನಿಮಾಕ್ಕಾಗಿ ಒಗ್ಗೂಡಬೇಕಿದೆ. ಒಳ್ಳೆಯ ಸಿನಿಮಾಗಳನ್ನು ನಿರ್ಮಿಸಬೇಕಿದೆ, ಗೆಲ್ಲಿಸಬೇಕಿದೆ. ಆ ಮೂಲಕ ಭಾರತದ ಚಿತ್ರರಂಗವನ್ನು ವಿಶ್ವ ಚಿತ್ರರಂಗದಲ್ಲಿ ಉತ್ತಮ ಸ್ಥಾನದಲ್ಲಿ ಇರಿಸಬೇಕಿದೆ. ಭಾರತೀಯ ಚಿತ್ರರಂಗದ ಸ್ಥಾನವನ್ನು ಎತ್ತರಿಸಬೇಕಿದೆ. ಅದಕ್ಕೆ ಎಲ್ಲರ ಸಹಕಾರ ಬೇಕಿದೆ. ಎಲ್ಲರ ಪ್ರಯತ್ನ ಬೇಕಿದೆ’ ಎಂದು ಯಶ್ ಹೇಳಿದರು.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದ ಮುಖ್ಯ ಆಕರ್ಷಣೆ ಏನು? ರುಕ್ಮಿಣಿ ವಸಂತ್ ಕೊಟ್ಟರು ಉತ್ತರ

‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ ಯಶ್, ‘ಟಾಕ್ಸಿಕ್’ ಒಂದು ಒರಿಜಿನಲ್ ಆದ ಪ್ರಯತ್ನ. ಅತ್ಯಂತ ಬೋಲ್ಡ್ ಆದ, ಬಹಳ ಉನ್ನತ ಗುರಿಗಳನ್ನು, ಆದರ್ಶನಗಳನ್ನು ಹೊಂದಿರುವ ಸಿನಿಮಾ. ಈ ಹಿಂದಿನ ಎಲ್ಲ ಸಿದ್ಧ ಸೂತ್ರಗಳನ್ನು ಮುರಿದು ಹಾಕುವ ಸಿನಿಮಾ. ಚಿತ್ರಮಂದಿರಗಳಲ್ಲಿ ನೀವು ಈ ಸಿನಿಮಾ ನೋಡಿದರೆ ನಿಮಗೆ ಅಚ್ಚರಿ ಆಗುವಂಥಹಾ ಅನುಭವವನ್ನು ಈ ಸಿನಿಮಾ ನೀಡಲಿದೆ. ಆಗಸ್ಟ್ 26ರಂದು ಯಾರೂ ಮಿಸ್ ಮಾಡದೆ ಸಿನಿಮಾ ನೋಡಿ’ ಎಂದರು.

ದೊಡ್ಡ ಸಂಖ್ಯೆಯಲ್ಲಿ ಯುವಕರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಗಮನಿಸಿದ ನಟ ಯಶ್, ‘ಸಿನಿಮಾವನ್ನು ಬಹಳ ಗಂಭೀರವಾಗಿ ಯಾರೂ ತೆಗೆದುಕೊಳ್ಳಬೇಡಿ. ಸಿನಿಮಾ ಅನ್ನು ನೋಡಿ ಬಳಿಕ ಬಿಟ್ಟುಬಿಡಿ. ನೀವು ಯಾವುದೇ ಕ್ಷೇತ್ರದಲ್ಲಿರಲಿ ದೊಡ್ಡ ಕನಸು ಕಾಣಿ, ಆ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿ. ನಿಮಗೆ ಖಂಡಿತ ಯಶಸ್ಸು ಮತ್ತು ಗೌರವ ಧಕ್ಕಿಯೇ ಧಕ್ಕುತ್ತದೆ’ ಎಂದರು ನಟ ಯಶ್.

ಸಹನಟರುಗಳಾದ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಇನ್ನೂ ಹಲವರನ್ನು ಕೊಂಡಾಡಿದರು. ತೆಲುಗು ರಾಜ್ಯಗಳ ವಿತರಣೆ ಮಾಡಲಿರುವ ದಿಲ್ ರಾಜು ಅವರಿಗೆ ಸಿನಿಮಾದ ನಿರ್ಮಾಪಕ ವೆಂಕಟ್ ಅವರಿಗೂ ಯಶ್ ಧನ್ಯವಾದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ