AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?

Horoscope Today: ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?

ಭಾವನಾ ಹೆಗಡೆ
|

Updated on: Aug 23, 2026 | 6:39 AM

Share

ಡಾ. ಬಸವರಾಜ ಗುರೂಜಿ ಅವರಿಂದ 23-08-2026 ಭಾನುವಾರದ ದಿನ ಭವಿಷ್ಯ. ಈ ದಿನದ ಪಂಚಾಂಗ, ರಾಹುಕಾಲ, ಸಂಕಲ್ಪ ಕಾಲಗಳ ಮಾಹಿತಿ ಹಾಗೂ ಏಕಾದಶಿಯ ಮಹತ್ವವನ್ನು ವಿವರಿಸಿದ್ದಾರೆ. ಅಲ್ಲದೆ, ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳಿಗೆ ಹಣಕಾಸು, ಆರೋಗ್ಯ, ಉದ್ಯೋಗ, ಕುಟುಂಬ ಸಂಬಂಧಗಳಲ್ಲಿ ಆಗುವ ಶುಭ ಮತ್ತು ಅಶುಭ ಫಲಗಳನ್ನು, ಅದೃಷ್ಟ ಸಂಖ್ಯೆ, ಬಣ್ಣ, ದಿಕ್ಕು ಮತ್ತು ಪಠಿಸಬೇಕಾದ ಮಂತ್ರಗಳೊಂದಿಗೆ ತಿಳಿಸಿದ್ದಾರೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 23,ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲ ಪಕ್ಷದ ಏಕಾದಶಿ ತಿಥಿಯಾಗಿರುತ್ತದೆ. ಇಂದು ರಾಹುಕಾಲವು ಸಂಜೆ 5:01 ರಿಂದ 6:35 ತನಕ ಇರಲಿದ್ದು, ಸರ್ವ ಸಿದ್ಧಿ ಮತ್ತು ಸಂಕಲ್ಪ ಕಾಲವು ಬೆಳಗ್ಗೆ 10:48 ರಿಂದ 12:22 ತನಕ ಇರುತ್ತದೆ. ಈ ದಿನ ಪವಿತ್ರ ಏಕಾದಶಿ ಇದ್ದು, ಉಪವಾಸ ಮತ್ತು ಪೂಜೆಗಳು ಗ್ರಹ ದೋಷಗಳು ಹಾಗೂ ಮಾಟ ಮಂತ್ರಗಳಿಂದ ಮುಕ್ತಿ ನೀಡುತ್ತವೆ ಎಂದು ಗುರೂಜಿ ಹೇಳಿದ್ದಾರೆ. ಸೂರ್ಯ ಭಗವಾನರ ಲಹರಿಗಳಿರುವುದರಿಂದ ಆರೋಗ್ಯಕ್ಕೆ ಉತ್ತಮ ದಿನವಾಗಿದೆ.

Follow Us