AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ ಶೂಟೌಟ್: ಘಟನೆ ನಡೆದ ಹೊಳೆ ದಟ್ಟಿ ಅರಣ್ಯದಿಂದಲೇ ಟಿವಿ9 ವಿಶೇಷ ತನಿಖಾ ವರದಿ

ಚಾಮರಾಜನಗರ ಶೂಟೌಟ್: ಘಟನೆ ನಡೆದ ಹೊಳೆ ದಟ್ಟಿ ಅರಣ್ಯದಿಂದಲೇ ಟಿವಿ9 ವಿಶೇಷ ತನಿಖಾ ವರದಿ

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 23, 2026 | 9:03 AM

Share

ಚಾಮರಾಜನಗರದ ಹೊಳೆ ದಟ್ಟಿ ಅರಣ್ಯದಲ್ಲಿ ಆಗಸ್ಟ್ 15ರಂದು ಜಿಂಕೆ ಬೇಟೆಗಾರರ ಮೇಲೆ ನಡೆದ ಎನ್​ಕೌಂಟರ್​ನ ನಡೆದ ಸ್ಥಳದಿಂದ ಟಿವಿ9 ಗ್ರೌಂಡ್​​ ರಿಪೋರ್ಟ್​​ ಮಾಡಿದೆ. ಅರಣ್ಯ ಸಿಬ್ಬಂದಿ ಗುಂಡಿಗೆ ಕುಮಾರ್, ಆಂಥೋನಿ ಸ್ವಾಮಿ, ಪೀಟರ್ ಎಂಬ ಮೂವರು ಬೇಟೆಗಾರರು ಬಲಿಯಾಗಿದ್ದರು. ಘಟನೆ ಬಳಿಕ ಉದ್ರಿಕ್ತ ಗುಂಪು ಅರಣ್ಯ ಇಲಾಖೆಯ ಆ್ಯಂಟಿ ಪೋಚಿಂಗ್ ಕ್ಯಾಂಪ್ ಅನ್ನು ಧ್ವಂಸಗೊಳಿಸಿತ್ತು.

ಚಾಮರಾಜನಗರ, ಆಗಸ್ಟ್​​ 23: ಹನೂರು ತಾಲೂಕಿನ ಹೊಳೆ ದಟ್ಟಿ ಅರಣ್ಯದಲ್ಲಿ ಆಗಸ್ಟ್ 15ರಂದು ನಡೆದ ಎನ್​ಕೌಂಟರ್ ನಡೆದ ಸ್ಥಳದಿಂದಲೇ ಟಿವಿ9 ಗ್ರೌಂಡ್​​ ರಿಪೋರ್ಟ್​​ ಮಾಡಿದೆ. ಜಿಂಕೆ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಸೂಚಿಸಿದಾಗ, ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬೇಟೆಗಾರರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಉದ್ರಿಕ್ತಗೊಂಡ ಗುಂಪು ಅರಣ್ಯ ಇಲಾಖೆಯ ಆ್ಯಂಟಿ ಪೋಚಿಂಗ್ ಕ್ಯಾಂಪ್ (ಎಪಿಸಿ ಕ್ಯಾಂಪ್) ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಕಿಟಕಿ ಗಾಜುಗಳು, ಪೀಠೋಪಕರಣಗಳು, ಸಮವಸ್ತ್ರ, ವಿದ್ಯುತ್ ಉಪಕರಣಗಳು, ವಾಕಿಟಾಕಿ ಚಾರ್ಜರ್ ಮತ್ತು ಶೆಡ್ ಅನ್ನು ಪುಡಿ ಪುಡಿ ಮಾಡಿದ್ದರೆ. ಈ ಎಲ್ಲ ಘಟನೆಗಳ ಭೀಕರತೆ ಹೇಗಿತ್ತು ಎಂಬುದರ ಬಗ್ಗೆ ಸ್ಥಳದಿಂದ ಪ್ರತ್ಯಕ್ಷ ವರದಿ ಇಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸೂರಜ್ ಪ್ರಸಾದ್ ಎಸ್.ಎನ್
ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More