AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಓವರ್​ನಲ್ಲಿ 22 ರನ್ ಗುರಿ; ಒಂದೇ ಒಂದು ರನ್ ಬಾರಿಸದ ವಿಜಯ್ ಶಂಕರ್

LPL Match 18: ಲಂಕಾ ಪ್ರಿಮೀಯರ್ ಲೀಗ್‌ನ 18ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ತಂಡವು ಕ್ಯಾಂಡಿ ರಾಯಲ್ಸ್ ತಂಡವನ್ನು 21 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿದೆ. 222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್, ವಿಜಯ್ ಶಂಕರ್ ಅವರ ನಿರಾಶಾದಾಯಕ ಕೊನೆಯ ಓವರ್ ಬ್ಯಾಟಿಂಗ್‌ನಿಂದಾಗಿ ಸೋಲು ಕಂಡಿತು. ದಿಲ್ಶನ್ ಮಧುಶಂಕ ಬೌಲಿಂಗ್‌ನಲ್ಲಿ ವಿಜಯ್ ಶಂಕರ್ ಒಂದೂ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ದು ಪಂದ್ಯದ ತಿರುವು.

ಕೊನೆಯ ಓವರ್​ನಲ್ಲಿ 22 ರನ್ ಗುರಿ; ಒಂದೇ ಒಂದು ರನ್ ಬಾರಿಸದ ವಿಜಯ್ ಶಂಕರ್
Vijay Shankar
ಪೃಥ್ವಿಶಂಕರ
|

Updated on: Jul 31, 2026 | 10:55 PM

Share

ಲಂಕಾ ಪ್ರಿಮೀಯರ್ ಲೀಗ್​ನ (Lanka Premier League) 18ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ರಾಯಲ್ಸ್ (Jaffna Kings vs Kandy Royals) ತಂಡಗಳು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಜಾಫ್ನಾ ಕಿಂಗ್ಸ್ 21 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುರಿ ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 200 ರನ್‌ ಕಲೆಹಾಕಲಷ್ಟೇ ಶಕ್ತವಾಗಿ 21 ರನ್​ಗಳಿಂದ ಸೋತಿತು. ಇದು ಪಂದ್ಯದ ಫಲಿತಾಂಶವಾದರೆ ಈ ಪಂದ್ಯದ ಮತ್ತೊಂದು ಹೈಲೇಟ್ಸ್ ಎಂದರೆ, ಕೊನೆಯ ಓವರ್​ನಲ್ಲಿ ಒಂದೇ ಒಂದು ರನ್ ಬಾರಿಸದೆ ಓವರ್​ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಭಾರತದ ವಿಜಯ್ ಶಂಕರ್ ಅವರ ಬ್ಯಾಟಿಂಗ್.

221 ರನ್ ಕಲೆಹಾಕಿದ ಜಾಫ್ನಾ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಕಮಿಲ್ ಮಿಶಾರ ಮತ್ತು ಅವಿಷ್ಕಾ ಫರ್ನಾಂಡೊ ಉತ್ತಮ ಆರಂಭ ನೀಡಿದರು. ಮಿಶಾರ ಕೇವಲ 26 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದರೆ, ಫರ್ನಾಂಡೊ 22 ಎಸೆತಗಳಲ್ಲಿ 36 ರನ್‌ಗಳ ಕಾಣಿಕೆ ನೀಡಿದರು. ನಂತರ ಕ್ರೀಸ್‌ಗೆ ಬಂದ ಚಾಮಿಂದು ವಿಕ್ರಮಸಿಂಘೆ ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳ ಸಹಾಯದಿಂದ 43 ರನ್‌ಗಳ ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದಯ್ಡಾಯ್ ಕೂಡ ಉಪಯುಕ್ತ ರನ್‌ಗಳ ಕೊಡುಗೆ ನೀಡಿದರು. ಇತ್ತ ಕ್ಯಾಂಡಿ ರಾಯಲ್ಸ್ ಪರ ಮೊಯಿನ್ ಅಲಿ ಮತ್ತು ವನಿಂಡು ಹಸರಂಗ ತಲಾ ಎರಡು ವಿಕೆಟ್ ಪಡೆದರು.

ಕ್ಯಾಂಡಿ ರಾಯಲ್ಸ್​ಗೆ ಉತ್ತಮ ಆರಂಭ

222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ಕೂಡ ಉತ್ತಮ ಆರಂಭ ಪಡೆಯಿತು. ಪವನ್ ಸಂದೇಶ್ 21 ಎಸೆತಗಳಲ್ಲಿ 48 ರನ್ ಗಳಿಸಿದರೆ, ಲಹಿರು ಇಗಲಗಮಗೆ 15 ಎಸೆತಗಳಲ್ಲಿ 30 ರನ್​ಗಳ ಇನ್ನಿಂಗ್ಸ್ ಆಡಿದರು. ನಂತರ ವನಿಂದು ಹಸರಂಗ ಮತ್ತು ಶಾಹೀನ್ ಶಾ ಅಫ್ರಿದಿ ತಲಾ 24 ರನ್ ಗಳಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಜಾಫ್ನಾ ಬೌಲರ್‌ಗಳು ನಿಯಮಿತವಾಗಿ ವಿಕೆಟ್ ಪಡೆಯುತ್ತಿದ್ದರೂ, ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರಿಂದ ಪಂದ್ಯ ಕ್ಯಾಂಡಿ ರಾಯಲ್ಸ್ ಪರವಾಗಿ ವಾಲಿತು.

20ನೇ ಓವರ್ ಆರಂಭವಾಗುವುದಕ್ಕೂ ಮುನ್ನ ವಿಜಯ್ ಶಂಕರ್ 15 ಎಸೆತಗಳಲ್ಲಿ 25 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಹೀಗಾಗಿ ಅಂತಿಮ ಓವರ್‌ನಲ್ಲಿ ಕ್ಯಾಂಡಿ ರಾಯಲ್ಸ್ ತಂಡದ ಗೆಲುವಿಗೆ 22 ರನ್‌ಗಳ ಅಗತ್ಯತೆ ಇದ್ದಾಗ ವಿಜಯ್ ಶಂಕರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಓವರ್ ಆರಂಭವಾದ ಬಳಿಕ ಎಲ್ಲರ ನಿರೀಕ್ಷೆ ಹುಸಿಯಾಯಿತು.

20ನೇ ಓವರ್​ನಲ್ಲಿ ವಿಜಯ್ ವಿಫಲ

ಜಾಫ್ನಾ ತಂಡದ ಪರ ಕೊನೆಯ 20 ನೇ ಓವರ್ ಎಸೆಯಲು ದಿಲ್ಶನ್ ಮಧುಶಂಕ ಬಂದರೆ, ಇತ್ತ ಸ್ಟ್ರೈಕ್​ನಲ್ಲಿ ವಿಜಯ್ ಶಂಕರ್ ಇದ್ದರು. ಈ ಪಂದ್ಯವನ್ನು ಕ್ಯಾಂಡಿ ರಾಯಲ್ಸ್ ಗೆಲ್ಲಬೇಕಾದರೆ, ವಿಜಯ್ ಶಂಕರ್ ಕನಿಷ್ಠ ಪಕ್ಷ 3 ಸಿಕ್ಸರ್‌ಗಳನ್ನು ಬಾರಿಸಬೇಕಿತ್ತು. ಆದರೆ ದಿಲ್ಶನ್ ಮಧುಶಂಕ ಎಸೆದ ನಿಖರವಾದ ಯಾರ್ಕರ್​ಗಳ ಮುಂದೆ ವಿಜಯ್ ಶಂಕರ್ ಆಟ ನಡೆಯಲಿಲ್ಲ. ಸತತ 5 ಎಸೆತಗಳು ಡಾಟ್ ಆದವು. ಅಂದರೆ ಈ 5 ಎಸೆತಗಳಲ್ಲಿ ವಿಜಯ್ ಶಂಕರ್​ಗೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಇನ್ನು ಓವರ್‌ನ ಕೊನೆಯ ಎಸೆತದಲ್ಲಿ ರನ್ ಗಳಿಸುವ ಪ್ರಯತ್ನದಲ್ಲಿ ವಿಜಯ್ ಶಂಕರ್ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ, ಮಧುಶಂಕ ಕೊನೆಯ ಓವರ್ ಅನ್ನು ವಿಕೆಟ್ ಮೇಡನ್ ಮಾಡಿ ಜಾಫ್ನಾ ಕಿಂಗ್ಸ್‌ಗೆ ಅಭೂತಪೂರ್ವ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ