AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಯಲ್ಲಿ ಒಂದು ವಿಷಯ ಬಹಳ ಕೆಟ್ಟದಾಗಿತ್ತು: ಓಂ ಪ್ರಕಾಶ್ ರಾವ್

ಓಂ ಪ್ರಕಾಶ್ ರಾವ್ ಅವರು ಬಿಗ್​​ಬಾಸ್ ಮನೆಯಲ್ಲಿ ಮೊದಲ ವಾರ ಪ್ರೇಕ್ಷಕರ ಗಮನ ಸೆಳೆದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ತಮ್ಮ ಅದ್ಭುತ ಡೈಲಾಗ್​​ಗಳಿಂದ ಅವರು ಪ್ರೇಕ್ಷಕರಿಗೆ ಹತ್ತಿರ ಆಗುತ್ತಿದ್ದರು. ಆದರೆ ಹಠಾತ್ತನೆ ಅವರು ಅನಾರೋಗ್ಯದ ಕಾರಣಕ್ಕೆ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರಬಂದ ಬಳಿಕ ಬಿಗ್​​ಬಾಸ್ ಮನೆಯಲ್ಲಿ ತಮಗೆ ಇಷ್ಟವಾಗದ ಒಂದು ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ.

ಬಿಗ್​​ಬಾಸ್ ಮನೆಯಲ್ಲಿ ಒಂದು ವಿಷಯ ಬಹಳ ಕೆಟ್ಟದಾಗಿತ್ತು: ಓಂ ಪ್ರಕಾಶ್ ರಾವ್
Om Prakash Rao
ಮಂಜುನಾಥ ಸಿ.
|

Updated on: Sep 15, 2026 | 10:13 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13 ಇಂದ ಓಂ ಪ್ರಕಾಶ್ ರಾವ್
  • ಓಂ ಪ್ರಕಾಶ್ ರಾವ್ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.
  • ಬಿಗ್​​ಬಾಸ್ ಮನೆಯ ಊಟ ಅವರಿಗೆ ಹಿಡಿಸಲಿಲ್ಲವಂತೆ

ಬಿಗ್​​ಬಾಸ್ ಕನ್ನಡ ಸೀಸನ್ 13ರಿಂದ ಸ್ಪರ್ಧಿ ಓಂ ಪ್ರಕಾಶ್ ರಾವ್ ಹೊರಗೆ ಬಂದಿದ್ದಾರೆ. ಮೊದಲ ವೀಕೆಂಡ್​​ನಲ್ಲಿ ಪ್ರಥಮಾ ಪ್ರಸಾದ್ ಅವರು ಎವಿಕ್ಟ್ ಆಗಿದ್ದರು. ಆದರೆ ಅದಾದ ಮರುದಿನವೇ ಓಂ ಪ್ರಕಾಶ್ ರಾವ್ ಅವರು ಹಠಾತ್ತನೆ ಬಿಗ್​​ಬಾಸ್ ಮನೆಯಿಂದ ಹೊರ ಬಂದರು. ಅಸಲಿಗೆ ಓಂ ಪ್ರಕಾಶ್ ರಾವ್ ಅವರು ಬಿಗ್​​ಬಾಸ್ ಮನೆಯಲ್ಲಿ ಮೊದಲ ವಾರ ಪ್ರೇಕ್ಷಕರ ಗಮನ ಸೆಳೆದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ತಮ್ಮ ಅದ್ಭುತ ಡೈಲಾಗ್​​ಗಳಿಂದ ಅವರು ಪ್ರೇಕ್ಷಕರಿಗೆ ಹತ್ತಿರ ಆಗುತ್ತಿದ್ದರು. ಆದರೆ ಹಠಾತ್ತನೆ ಅವರು ಅನಾರೋಗ್ಯದ ಕಾರಣಕ್ಕೆ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

ಓಂ ಪ್ರಕಾಶ್ ರಾವ್ ಅವರಿಗೆ ಅನಾರೋಗ್ಯ ಉಂಟಾಗಿರುವ ಕಾರಣ ಅವರನ್ನು ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಮನೆಯಿಂದ ಹೊರಗೆ ಬಂದು ಆಸ್ಪತ್ರೆಗೆ ದಾಖಲಾಗಿರುವ ಓಂ ಪ್ರಕಾಶ್ ರಾವ್ ಅವರು ಟಿವಿ9ಗೆ ವಿಶೇಷ ಸಂದರ್ಶನ ನೀಡಿದ್ದು, ತಾವು ಹೊರಗೆ ಬಂದಿದ್ದಕ್ಕೆ ಕಾರಣ, ತಮ್ಮ ಆರೋಗ್ಯದ ಸ್ಥಿತಿ, ಬಿಗ್​​ಬಾಸ್ ಮನೆ ಪರಿಸ್ಥಿತಿ, ಅಲ್ಲಿ ತಮಗೆ ಎದುರಾದ ಸಮಸ್ಯೆ, ಮನೆಯ ಇತರ ಸದಸ್ಯರು, ಇತರೆ ಸದಸ್ಯರ ವ್ಯಕ್ತಿತ್ವ, ವರ್ತನೆ ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಅದರಲ್ಲೂ ಬಿಗ್​​ಬಾಸ್ ನಲ್ಲಿ ತಮಗೆ ಬಹಳ ಬೇಸರ ತಂದ ವಿಷಯವನ್ನು ಸಹ ಅವರು ಹೇಳಿದ್ದಾರೆ.

‘ಬಿಗ್​​ಬಾಸ್​ ಮನೆ ಬಹಳ ಚೆನ್ನಾಗಿದೆ. ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ. ಎಲ್ಲ ವಿಷಯದಲ್ಲೂ ಬಹಳ ಕೇರ್ ತೆಗೆದುಕೊಂಡರು ಆದರೆ ಒಂದು ವಿಚಾರ ನನಗೆ ತುಂಬಾ ಬೇಜಾರಾಯ್ತು, ಬಹಳ ಸಿಟ್ಟು ಸಹ ತರಿಸಿತು’ ಎಂದರು ಓಂ ಪ್ರಕಾಶ್ ರಾವ್. ‘ಊಟದ ವಿಷಯ ಸರಿಯಿಲ್ಲ. ಬರೀ ಅನ್ನ, ಅನ್ನ. ನನ್ನಂಥಹಾ ಅನಾರೋಗ್ಯ ಇದ್ದವರು ಹೇಗಿರಬೇಕು. ನಾನು ಬಿಗ್​​ಬಾಸ್​​ಗೆ ಹೋಗುವ ಮುಂಚೆಯೇ ನನಗೆ ಶುಗರ್ ಇರುವುದಾಗಿ, ಬಿಪಿ ಇರುವುದಾಗಿ ವರದಿಗಳನ್ನು ಕೊಟ್ಟಿದ್ದೆ. ಆದರೂ ಊಟದ ಬಗ್ಗೆ ಯಾವುದೇ ಕೇರ್ ಅವರು ತೆಗೆದುಕೊಳ್ಳಲಿಲ್ಲ. ಇದು ನನಗೆ ಬಹಳ ಬೇಸರ ಆಯ್ತು’ ಎಂದಿದ್ದಾರೆ ಓಂ ಪ್ರಕಾಶ್ ರಾವ್.

ಇದನ್ನೂ ಓದಿ:ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ

‘ನಾನು ಮೊದಲೇ ಹೇಳಿದ್ದೆ ಆದರೂ ಸಹ ಊಟದ ವಿಷಯದಲ್ಲಿ ಕೇರ್ ತೆಗೆದುಕೊಳ್ಳಲಿಲ್ಲ. ಅನಾರೋಗ್ಯ ಇದ್ದವರಿಗಾದರೂ ಬೇರೆ ವ್ಯವಸ್ಥೆ ಮಾಡಬಹುದಾಗಿತ್ತು. ಅದು ನನಗೆ ಸ್ವಲ್ಪವೂ ಸರಿ ಬರಲಿಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಯಾರು ಜವಾಬ್ದಾರಿ’ ಎಂದು ತುಸು ಖಾರವಾಗಿಯೇ ನುಡಿದರು ಓಂ ಪ್ರಕಾಶ್ ರಾವ್.

ಓಂ ಪ್ರಕಾಶ್ ರಾವ್ ಅವರಿಗೆ ಕಾಲು ಊತ ಮತ್ತು ನೋವು ವಿಪರೀತ ಕಾಡಿತ್ತಂತೆ. ಬಿಗ್​​ ಬಾಸ್​​ನವರು ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಚೆಕ್ ಮಾಡಿದಾಗ ಅವರ ಶುಗರ್ ಮತ್ತು ಬಿಪಿ ಬಹಳ ಏರಿದ್ದು ಗೊತ್ತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ