AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಜೊತೆ ಸಂಗೀತ ಕಚೇರಿಗೆ ಹೋಗಿ ತಲೆಕೆರೆದುಕೊಂಡ ಅಭಿಷೇಕ್ ಬಚ್ಚನ್

ನಟ ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯಾ ಜೊತೆ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಚೇರಿಗೆ ತೆರಳಿದ್ದರು. ಅಲ್ಲಿನ ಗಾಯನ ಮತ್ತು ವಾತಾವರಣ ಅಭಿಷೇಕ್ ಅವರಿಗೆ ತುಂಬಾ ಇಷ್ಟವಾಯಿತು. ಹೊಸ ತಲೆಮಾರಿನ ಗಾಯಕರ ಅದ್ಭುತ ಪ್ರತಿಭೆ ಮತ್ತು ಮಗಳ ಸಂಗೀತದ ಆಸಕ್ತಿಯನ್ನು ಅವರು ಸಂದರ್ಶನದಲ್ಲಿ ಮುಕ್ತವಾಗಿ ಮೆಚ್ಚಿಕೊಂಡಿದ್ದಾರೆ.

ಮಗಳ ಜೊತೆ ಸಂಗೀತ ಕಚೇರಿಗೆ ಹೋಗಿ ತಲೆಕೆರೆದುಕೊಂಡ ಅಭಿಷೇಕ್ ಬಚ್ಚನ್
ಆರಾಧ್ಯಾ,ಐಶ್ವರ್ಯಾ,ಅಭಿಷೇಕ್
ರಾಜೇಶ್ ದುಗ್ಗುಮನೆ
|

Updated on: Oct 06, 2026 | 2:51 PM

Share

ಮುಖ್ಯಾಂಶಗಳು

  • ಮಗಳ ಜೊತೆ ಲೈವ್ ಕಾನ್ಸರ್ಟ್ ಅನುಭವ
  • ಪಾಪ್ ಹಾಗೂ ರಾಕ್ ಸಂಗೀತದ ಅಭಿಮಾನಿ ಆರಾಧ್ಯಾ
  • 'ಕಿಂಗ್' ಸಿನಿಮಾದಲ್ಲಿ ಬ್ಯುಸಿಯಾದ ಅಭಿಷೇಕ್

ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಾ ಜೊತೆ ಅರಿಯಾನಾ ಗ್ರಾಂಡೆ ಮ್ಯೂಸಿಕ್ ಕಾನ್ಸರ್ಟ್​ಗೆ ತೆರಳಿದ್ದರು. ಈ ಅನುಭವವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿನ ವಾತಾವರಣ ಅವರನ್ನು ಬೆರಗುಗೊಳಿಸಿದೆ. ಗಾಯಕಿ ಅರಿಯಾನಾ ಧ್ವನಿ ಹಾಗೂ ಅವರ ಗಾಯನ ಶೈಲಿಗೆ ಅಭಿಷೇಕ್ ಮಾರುಹೋಗಿದ್ದಾರೆ.

ತಮ್ಮ ಮಗಳ ಸಂಗೀತ ಪ್ರೀತಿಯ ಬಗ್ಗೆ ಅಭಿಷೇಕ್ ಮುಕ್ತವಾಗಿ ಮಾತನಾಡಿದ್ದಾರೆ. ‘ಆರಾಧ್ಯಾಗೆ ವಿವಿಧ ರೀತಿಯ ಹಾಡುಗಳನ್ನು ಕೇಳುವ ಅಭ್ಯಾಸವಿದೆ. ಟೇಲರ್ ಸ್ವಿಫ್ಟ್ ಮತ್ತು ಒಲಿವಿಯಾ ರೊಡ್ರಿಗೋ ಅವರ ಹಾಡುಗಳನ್ನು ಆಕೆ ಇಷ್ಟಪಡುತ್ತಾಳೆ. ಇದರ ಜೊತೆಗೆ 80ರ ದಶಕದ ಪ್ರಸಿದ್ಧ ಬ್ಯಾಂಡ್‌ಗಳ ಹಾಡುಗಳನ್ನೂ ಆಕೆ ಆಲಿಸುತ್ತಾಳೆ’ ಎಂದಿದ್ದಾರೆ ಅಭಿಷೇಕ್.

ಇತ್ತೀಚೆಗೆ ವಿದೇಶಿ ಪ್ರವಾಸದಲ್ಲಿದ್ದಾಗ ಆರಾಧ್ಯಾ ಪೋಷಕರನ್ನು ಲೈವ್ ಕಾನ್ಸರ್ಟ್‌ಗೆ ಕರೆದೊಯ್ದಿದ್ದರು. ಅಲ್ಲಿ ಅರಿಯಾನಾ ಗ್ರಾಂಡೆ ಅವರ ಅದ್ಭುತ ಗಾಯನ ಪ್ರದರ್ಶನ ನಡೆಯಿತು. ಅಭಿಷೇಕ್ ಅವರಿಗೆ ಅರಿಯಾನಾ ಹಾಡಿದ ಯಾವ ಹಾಡೂ ತಿಳಿದಿರಲಿಲ್ಲ. ಆದರೂ ಅವರ ಧ್ವನಿಯ ಗಾಂಭೀರ್ಯ ಮತ್ತು ಶಕ್ತಿ ಅಭಿಷೇಕ್ ಅವರಿಗೆ ಪ್ರಭಾವ ಬೀರಿದೆ.

ಅಭಿಷೇಕ್ ಅವರಿಗೆ ಭಾರತೀಯ ಹಳೆಯ ಚಲನಚಿತ್ರ ಸಂಗೀತದ ಮೇಲೆ ಹೆಚ್ಚಿನ ಒಲವಿದೆ. ಕಿಶೋರ್ ಕುಮಾರ್, ಆರ್‌ಡಿ ಬರ್ಮನ್ ಮತ್ತು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರ ಸಂಗೀತವನ್ನು ಅವರು ಸದಾ ಕೇಳುತ್ತಾರೆ. ಹೊಸ ತಲೆಮಾರಿನ ಗಾಯಕರೂ ಸಹ ಅತ್ಯುತ್ತಮ ಸಂಗೀತ ನೀಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನೇನು ಹೀರೋಯಿನ್​ ಆಗಿ ನಟಿಸ್ತಿದೀನಾ? ಕೆಣಕಲು ಬಂದವರಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು

ಸಿನಿಮಾ ರಂಗದಲ್ಲಿ ಅಭಿಷೇಕ್ ಬಚ್ಚನ್ ಅವರು ಪ್ರಸ್ತುತ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ಅವರು ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು