AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೇನು ಹೀರೋಯಿನ್​ ಆಗಿ ನಟಿಸ್ತಿದೀನಾ? ಕೆಣಕಲು ಬಂದವರಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು

ಅಮಿತಾಭ್ ಬಚ್ಚನ್ ಅವರ ಮಗನಾಗಿದ್ದರೂ, ಅಭಿಷೇಕ್ ಬಚ್ಚನ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಸಿಕ್ಕಿಲ್ಲ ಎಂದು ಸದಾ ಟ್ರೋಲ್ ಮಾಡಲಾಗುತ್ತದೆ. ಸೋಲೋ ಹೀರೋ ಆಗಿ ನಟಿಸದ ಬಗ್ಗೆ ಇತ್ತೀಚೆಗೆ ಬಂದ ಪ್ರಶ್ನೆಗೆ, ‘ನಾನೇನು ಹೀರೋಯಿನ್ ಆಗಿ ನಟಿಸುತ್ತಿದ್ದೇನಾ?’ ಎಂದು ಖಡಕ್ ತಿರುಗೇಟು ನೀಡಿದ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಟ್ರೋಲ್ ಮಾಡುವವರಿಗೆ ಇದು ದಿಟ್ಟ ಉತ್ತರವಾಗಿದೆ.

ನಾನೇನು ಹೀರೋಯಿನ್​ ಆಗಿ ನಟಿಸ್ತಿದೀನಾ? ಕೆಣಕಲು ಬಂದವರಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು
ಅಭಿಷೇಕ್ ಬಚ್ಚನ್
ರಾಜೇಶ್ ದುಗ್ಗುಮನೆ
|

Updated on:Apr 29, 2026 | 9:02 AM

Share

ಅಭಿಷೇಕ್ ಬಚ್ಚನ್ ಅವರನ್ನು ಎಲ್ಲರೂ ಆಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರ ತಂದೆ ಅಮಿತಾಭ್ ಬಚ್ಚನ್ ಅವರ ಲೆಗಸಿ. ಅಷ್ಟು ದೊಡ್ಡ ಸ್ಟಾರ್ ಹೀರೋನ ಮಗನಾದರೂ ಅಭಿಷೇಕ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರ ಈ ಹಿಂದಿನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕೆಣಕಲು ಬಂದವರಿಗೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಅವರು ‘ಗುರು’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯವಾಲ್ಲ. ಅವರು ನಟಿಸುತ್ತಿರುವ ಬಹುತೇಕ ಸಿನಿಮಾಗಳು ಮಲ್ಟಿ ಸ್ಟಾರರ್​ ಚಿತ್ರಗಳು. ಹೀಗಾಗಿ, ಸುದ್ದಿಗೋಷ್ಠಿ ಒಂದರಲ್ಲಿ ಅವರಿಗೆ ಪ್ರಶ್ನೆ ಒಂದು ಎದುರಾಯಿತು.

View this post on Instagram

A post shared by The 50 (@theshovv50)

ಅಭಿಷೇಕ್ ಬಚ್ಚನ್ ಇದ್ದ ವೇದಿಕೆ ಮೇಲೆ ಅಕ್ಷಯ್ ಕುಮಾರ್, ರಿತೇಷ್ ದೇಶ್​​ಮುಖ್ ಮೊದಲಾದವರು ಇದ್ದರು. ಆಗ ರಿಪೋರ್ಟರ್, ‘ನೀವು ಸೋಲೋ ಹೀರೋ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಪ್ರಶ್ನೆ ಅರ್ಥವಾದರೂ ಅಭಿಷೇಕ್ ಬಚ್ಚನ್ ಪ್ರಶ್ನೆ ಅರ್ಥವಾಗಿಲ್ಲ ಎಂದರು. ‘ಮೇಲ್ (ಪುರುಷ) ಲೀಡ್ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಇದು ಅಭಿಷೇಕ್ ಕೋಪ ಹೆಚ್ಚಿಸಿತು. ‘ನಾನೇನು ಈಗ ಹೀರೋಯಿನ್ ಆಗಿ ನಟಿಸುತ್ತಿದ್ದೇನಾ’ ಎಂದು ನೇರವಾಗಿ ಕೇಳಿದರು.

ಇದನ್ನೂ ಓದಿ: ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್

‘ನೀವು ಯಾವ ಅರ್ಥದಲ್ಲಿ ಕೇಳುತ್ತಿದ್ದೀರಿ ಅನ್ನೋದು ನನಗೆ ಗೊತ್ತಾಯ್ತು’ ಎಂದು ಅಭಿಷೇಕ್ ಹೇಳಿದರು. ಇದು ಅವರನ್ನು ಟ್ರೋಲ್ ಮಾಡುವ ರೀತಿಯಲ್ಲಿ ಇತ್ತು. ಇದನ್ನು ಅರಿತುಕೊಂಡ ಅಭಿಷೇಕ್ ಖಡಕ್ ಆಗಿ ಪ್ರತಿಕ್ರಿಯಿಸಿದರು. ಆ ಬಳಿಕ ವರದಿಗಾರ ಕೂಡ ಸೈಲೆಂಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Wed, 29 April 26

Follow Us