AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಒಂದಾದ ‘ಪೊಗರು’ ಜೋಡಿ, ಈ ಬಾರಿ ‘ವಸುದೈವ ಕುಟುಂಬಕಂ’

ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ಅವರು ನಿರ್ಮಿಸುತ್ತಿರುವ, ಬಿ.ಎಸ್ ಸುಧೀಂದ್ರ ಅವರ ಸಹ ನಿರ್ಮಾಪಕರಾಗಿರುವ ಹಾಗೂ ನಂದ ಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ‘ಪೊಗರು’ ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ನಂದ ಕಿಶೋರ್ ಅವರು ನಂದ ಸುಧೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಮತ್ತೆ ಒಂದಾದ ‘ಪೊಗರು’ ಜೋಡಿ, ಈ ಬಾರಿ ‘ವಸುದೈವ ಕುಟುಂಬಕಂ’
Dhruva Sarja Nanda Kishore
ಮಂಜುನಾಥ ಸಿ.
|

Updated on: Oct 06, 2026 | 2:55 PM

Share

ಮುಖ್ಯಾಂಶಗಳು

  • ಧ್ರುವ ಸರ್ಜಾ ಹುಟ್ಟುಹಬ್ಬ ಇಂದು (ಅಕ್ಟೋಬರ್ 6)
  • ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ.
  • ನಂದ ಕಿಶೋರ್ ಜೊತೆಗೆ ಹೊಸ ಸಿನಿಮಾ ಘೋಷಿಸಿದ್ದಾರೆ ಧ್ರುವ ಸರ್ಜಾ

ಇಂದು (ಅಕ್ಟೋಬರ್ 06) ನಟ ಧ್ರುವ ಸರ್ಜಾ ಹುಟ್ಟುಹಬ್ಬ. ಅಭಿಮಾನಿಗಳು ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯಳನ್ನು ಕೋರಿದ್ದಾರೆ. ಹುಟ್ಟುಹಬ್ಬದ ದಿನ ಕೆಲ ಹೊಸ ಸಿನಿಮಾಗಳನ್ನು ಧ್ರುವ ಸರ್ಜಾ ಘೋಷಿಸಿದ್ದಾರೆ. ಧ್ರುವ ಸರ್ಜಾ ಅವರ ಹಿಟ್ ಸಿನಿಮಾ ‘ಪೊಗರು’ ನಿರ್ದೇಶನ ಮಾಡಿದ್ದ ನಂದ ಕಿಶೋರ್ ಅವರು ಇದೀ ಧ್ರುವ ಸರ್ಜಾ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದು, ಸಿನಿಮಾಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುತ್ತಿರುವಂತೆ ಇದೊಂದು ಕೌಟುಂಬಿಕ ಡ್ರಾಮಾ ಕತೆ ಹೊಂದಿರುವ ಸಿನಿಮಾ ಆಗಿದೆ.

ಮೈರಾ ಕ್ರಿಯೇಷನ್ಸ್ ಲಾಂಛನದಲ್ಲಿ ಹರೀಶ್ ಪೆದ್ದಿ ಅವರು ನಿರ್ಮಿಸುತ್ತಿರುವ, ಬಿ.ಎಸ್ ಸುಧೀಂದ್ರ ಅವರ ಸಹ ನಿರ್ಮಾಪಕರಾಗಿರುವ ಹಾಗೂ ನಂದ ಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ವಸುದೈವ ಕುಟುಂಬಕಂ’ ಎಂದು ಹೆಸರಿಡಲಾಗಿದೆ. ‘ಪೊಗರು’ ಚಿತ್ರದ ನಂತರ ಧ್ರುವ ಸರ್ಜಾ ಹಾಗೂ ನಂದ ಕಿಶೋರ್ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ನಂದ ಕಿಶೋರ್ ಅವರು ನಂದ ಸುಧೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

‘ವಸುದೈವ ಕುಟುಂಬಕಂ’, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿರುತ್ತದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿರುವ ‘ವಸುದೈವ ಕುಟುಂಬಕಂ’ ಚಿತ್ರದಲ್ಲಿ ಹೆಸರಾಂತ ಹಾಗೂ ಅನುಭವಿ ಕಲಾವಿದರ ಬಹುದೊಡ್ಡ ತಾರಾಬಳಗವಿರಲಿದೆ‌‌.

ಇದನ್ನೂ ಓದಿ:ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ

ಧ್ರುವ ಸರ್ಜಾ ಅವರು ‘ಕೆಮಿಸ್ಟ್ರಿ’ ಹೆಸರಿನ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಇದೇ ದಿನ ಮಾಡಿದ್ದಾರೆ. ಸಿನಿಮಾನಲ್ಲಿ ಸಭಾ ನಟೇಶ್ ನಾಯಕಿ. ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಧ್ರುವ ಸರ್ಜಾ ಹಾಗೂ ನಂದ ಸುಧೀರ್ ಅವರು ‘ಪೊಗರು’ ಸಿನಿಮಾಕ್ಕೆ ಒಂದಾಗಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಆ ಸಿನಿಮಾದ ಹಾಡುಗಳು ಸಹ ದೊಡ್ಡ ಹಿಟ್ ಆಗಿದ್ದವು. ಆ ಸಿನಿಮಾನಲ್ಲಿ ರಶ್ಮಿಕಾ, ನಾಯಕಿಯಾಗಿ ನಟಿಸಿದ್ದರು. ಮತ್ತೊಮ್ಮೆ ‘ಪೊಗರು’ ಮ್ಯಾಜಿಕ್ ರೀಕ್ರಿಯೇಟ್ ಮಾಡುತ್ತಾರಾ ನಂದ ಸುಧೀರ್ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್