AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ

ಧ್ರುವ ಸರ್ಜಾ ಹಾಗೂ ನಿರ್ದೇಶಕ 'ದುನಿಯಾ' ಸೂರಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಸದ್ಯಕ್ಕೆ ನಿಂತುಹೋಗಿದೆ. ಸತತವಾಗಿ ಮುಂದೂಡಲ್ಪಡುತ್ತಿದ್ದ ಈ ಪ್ರಾಜೆಕ್ಟ್‌ನಿಂದ ಹೊರಬರುವ ದೃಢನಿರ್ಧಾರವನ್ನು ಸೂರಿ ತಗೆದುಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಕಾಲ್‌ಶೀಟ್ ಡೇಟ್ಸ್ ಗೊಂದಲ ಹಾಗೂ ಸಮಯದ ಅಭಾವವೇ ಸೂರಿ ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವಾಗಿದೆ.

ಧ್ರುವ ಸರ್ಜಾ ಸಿನಿಮಾದಿಂದ ಹೊರ ಬರುವ ದೃಢನಿರ್ಧಾರ ಮಾಡಿದ ನಿರ್ದೇಶಕ ಸೂರಿ
ಧ್ರುವ ಸರ್ಜಾ
ರಾಜೇಶ್ ದುಗ್ಗುಮನೆ
|

Updated on: Jul 22, 2026 | 2:52 PM

Share

ಮುಖ್ಯಾಂಶಗಳು

  • ಧ್ರುವ ಸಿನಿಮಾದಿಂದ ಸೂರಿ ಎಗ್ಸಿಟ್
  • ಅಭಿಮಾನಿಗಳಿಗೆ ಶಾಕ್ ನೀಡಿದ ನಿರ್ದೇಶಕ
  • ಸ್ಕ್ರಿಪ್ಟ್ ರೆಡಿಯಿದ್ದರೂ ಶೂಟಿಂಗ್ ಹಳಿ ತಪ್ಪಿದ್ದೆಲ್ಲಿ?

ನಿರ್ದೇಶಕ ‘ದುನಿಯಾ’ ಸೂರಿ ಸಿನಿಮಾಗಳಲ್ಲಿ ರಾನೆಸ್ ಜೋರಾಗಿಯೇ ಇರುತ್ತವೆ. ಅವರ ನಿರ್ದೇಶನ, ಡೈಲಾಗ್ ಹೀಗೆ ಎಲ್ಲವೂ ಇಷ್ಟ ಆಗುತ್ತವೆ. ಅವರು ಧ್ರುವ ಸರ್ಜಾ (Dhruva Sarja) ಜೊತೆ ಸಿನಿಮಾ ಮಾಡುತ್ತಾರೆ ಎಂದಾಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ, ಈಗ ಅಭಿಮಾನಿಗಳಿಗೆ ನಿರಾಸೆ ಆಗೋ ಸುದ್ದಿ ಸಿಕ್ಕಿದೆ. ಈ ಚಿತ್ರದಿಂದ ಸೂರಿ ಅವರು ಸದ್ಯಕ್ಕೆ ಹೊರ ಬಂದಿದ್ದಾರೆ. ಅವರು ಈ ದೃಢನಿರ್ಧಾರ ಮಾಡಲು ಕಾರಣ ವಿವರಿಸಿದ್ದಾರೆ.

ಸೂರಿ ಅವರ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರ ನಿರ್ದೇಶನದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅವರು ಇಷ್ಟುದಿನ ಧ್ರುವ ಸರ್ಜಾ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಎಲ್ಲವೂ ರೆಡಿ ಆಗಿತ್ತು. ಈ ಚಿತ್ರವನ್ನು ‘ಕ್ರಿಮಿನಲ್’ ಸಿನಿಮಾಗೆ ಬಂಡವಾಳ ಹೂಡಿರೋ ‘ಗೋಲ್ಡ್​​ಮೈನ್ಸ್​ ಟೆಲಿಫಿಲ್ಮ್ಸ್’ ಅವರೇ ಹಣ ಹಾಕಬೇಕಿತ್ತು. ಶೀಘ್ರದಲ್ಲೇ ತಂಡ ಶೂಟಿಂಗ್ ಮಾಡಲು ಕೂಡ ಪ್ಲ್ಯಾನ್ ಮಾಡಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಎಗ್ಸಿಟ್ ಆಗಿದ್ದಾರೆ.

ಈ ಬಗ್ಗೆ ಸೂರಿ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಸತ್ಯ ಹೆಗಡೆ ಅವರು ನನಗೆ ಧ್ರುವ ಅವರನ್ನು ಭೇಟಿ ಮಾಡಿಸಿದರು. ಆ ಬಳಿಕ ನಾವು ಸ್ಕ್ರಿಪ್ಟ್ ಕೆಲಸ ಆರಂಭಿಸಿದೆವು. ಸ್ಕ್ರಿಪ್ಟ್ ರೆಡಿ ಆಗಿತ್ತು, ಸ್ಕೆಚ್ಚಸ್ ರೆಡಿ ಮಾಡಿಕೊಂಡಿದ್ದೆವು. ಯಾವಾಗ ಶೂಟ್ ಮಾಡಬೇಕು, ಬಜೆಟ್ ಎಷ್ಟು ಎಂಬುದೆಲ್ಲ ಲೆಕ್ಕ ಹಾಕಿದ್ದೆವು. ಆದರೆ, ನಾವು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ’ ಎಂದು ಸೂರಿ ಬೇಸರ ಹೊರಹಾಕಿದ್ದಾರೆ.

‘ಕೆಡಿ ಬಳಿಕ ಧ್ರುವ ಕ್ರಿಮಿನಲ್ ಸಿನಿಮಾದಲ್ಲಿ ಬ್ಯುಸಿ ಆದರು. ಇದು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ಕೇಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಕ್ಕೆ ಹೋಗೋಕೆ ಆಗುತ್ತಿಲ್ಲ. ಹಣ, ಸಮಯ ಎಲ್ಲವೂ ಇಲ್ಲಿ ಹೂಡಿಕೆ ಆಗಿದೆ. ನನ್ನ ತಂಡವನ್ನು ನಾನು ನೋಡಿಕೊಳ್ಳಬೇಕು. ಪ್ರತಿ ಬಾರಿ ಕಾರಣ ನೀಡೋಕೆ ಆಗಲ್ಲ. ಹೀಗಾಗಿ, ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು’ ಎಂದು ಸೂರಿ ಹೇಳಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

‘ಇದು ಧ್ರುವ ಸರ್ಜಾಗಾಗಿಯೇ ಮಾಡಿದ ಕಥೆ. ಅವರ ಜೊತೆ ಈ ಸಿನಿಮಾ ಮಾಡುವ ಆಸೆ ಈಗಲೂ ಇದೆ. ಅವರಿಗೆ ನನ್ನ ಜೊತೆ ಕೆಲಸ ಮಾಡೋ ಹಂಬಲ ಇದೆ. ನಮ್ಮ ಸಿನಿಮಾಗೆ ಮಾತ್ರ ಸಂಪೂರ್ಣ ಸಮಯ ಮೀಸಲಿಡೋ ಅವಕಾಶ ಸಿಕ್ಕರೆ ನಾವು ಈ ಸಿನಿಮಾ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ವಕೀಲರ ಸಂಘದಿಂದ ಭಾರೀ ಪ್ರತಿಭಟನೆ
ಬೆಂಗಳೂರಿನಲ್ಲಿ ವಕೀಲರ ಸಂಘದಿಂದ ಭಾರೀ ಪ್ರತಿಭಟನೆ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ