Dhruva Sarja
ಧ್ರುವ ಸರ್ಜಾ ಅವರು 1988ರ ಅಕ್ಟೋಬರ್ 6ರಂದು ಜನಿಸಿದರು. ಕನ್ನಡ ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದವರು. ಜನಪ್ರಿಯ ನಟ-ನಿರ್ದೇಶಕ ಅರ್ಜುನ್ ಸರ್ಜಾ ಅವರ ಸೋದರಳಿಯ ಧ್ರುವ. ಅವರ ಅಣ್ಣ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದಾರೆ. ಸಿನಿಮೀಯ ಪರಂಪರೆ ಚಿಕ್ಕ ವಯಸ್ಸಿನಿಂದಲೇ ಅವರ ಮೇಲೆ ಪ್ರಭಾವ ಬೀರಿತು. 2012ರ ‘ಅದ್ದೂರಿ’ ಅವರ ಮೊದಲ ಸಿನಿಮಾ. ಆ ಬಳಿಕ ಬಹದ್ದೂರ್ (2014), ಭರ್ಜರಿ (2017) ರೀತಿಯ ಸಿನಿಮಾಗಳನ್ನು ನೀಡಿದರು. 2021ರಲ್ಲಿ ಸಹೋದರ ಚಿರಂಜೀವಿಯನ್ನು ಕಳೆದುಕೊಂಡರು. ಧ್ರುವ ಅವರು ತುಂಬಾನೇ ನಿಧಾನಕ್ಕೆ ಸಿನಿಮಾ ಮಾಡುತ್ತಾರೆ. 13 ವರ್ಷಗಳಲ್ಲಿ ಅವರು ಮಾಡಿರೋದು ಕೇವಲ ಐದು ಸಿನಿಮಾ. 2019ರಲ್ಲಿ ಅವರು ಬಾಲ್ಯದ ಗೆಳತಿ ಪ್ರೇರಣಾನ ವಿವಾಹ ಆದರು.
ಧ್ರುವ ಚಿತ್ರಕ್ಕೆ ‘ಕ್ರಿಮಿನಲ್’ ಟೈಟಲ್; ಉತ್ತರ ಕರ್ನಾಟಕ ಸೊಗಡಿನ ಸಿನಿಮಾಗೆ ರಚಿತಾ ನಾಯಕಿ
ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' ಟೈಟಲ್ ಅನಾವರಣಗೊಂಡಿದೆ. ರಚಿತಾ ರಾಮ್ ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ನೈಜ ಘಟನೆ ಆಧರಿಸಿದೆ ಅನ್ನೋದು ವಿಶೇಷ. ಧ್ರುವ 'ಹೋರಿ ಶಿವ' ಪಾತ್ರದಲ್ಲಿ ನಟಿಸಲಿದ್ದಾರೆ.
- Rajesh Duggumane
- Updated on: Nov 19, 2025
- 12:59 pm