AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಡಿ’ ರಿಲೀಸ್ ದಿನಾಂಕ ಘೋಷಣೆ ಮಾಡಿದ ಪ್ರೇಮ್? ಯಾರ ಜೊತೆ ಕ್ಲ್ಯಾಶ್?

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. 2026ರ ಏಪ್ರಿಲ್​​ನಲ್ಲಿ ಈ ಚಿತ್ರ ತೆರೆ ಕಾಣಲಿದೆ. 'ಅಣ್ತಮ್ಮ ಜೋಡೆತ್ತು ಕಣೋ' ಎಂಬ ಹೊಸ ಹಾಡನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇದು ಧ್ರುವ, ರಮೇಶ್ ಅರವಿಂದ್, ಸಂಜಯ್ ದತ್ ಅವರ ರೆಟ್ರೋ ಲುಕ್‌ನಲ್ಲಿ ಸ್ನೇಹದ ಕುರಿತು ಮೂಡಿಬಂದಿದೆ.

‘ಕೆಡಿ’ ರಿಲೀಸ್ ದಿನಾಂಕ ಘೋಷಣೆ ಮಾಡಿದ ಪ್ರೇಮ್? ಯಾರ ಜೊತೆ ಕ್ಲ್ಯಾಶ್?
Kd Movie
ರಾಜೇಶ್ ದುಗ್ಗುಮನೆ
|

Updated on:Dec 26, 2025 | 3:01 PM

Share

ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾ (KD Movie) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳ ಮಧ್ಯೆ ಅವರು ಸೈಲೆಂಟ್ ಆಗಿ ಪ್ರಮೋಷನ್ ಕೂಡ ಆರಂಭಿಸಿದ್ದಾರೆ. ಈಗ ‘ಕೆಡಿ’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ‘ಅಣ್ತಮ್ಮ ಜೋಡೆತ್ತು ಕಣೋ..’ ಹಾಡನ್ನು ಬಿಡುಗಡೆ ಮಾಡಿ ಅದರ ಕೊನೆಯಲ್ಲಿ ರಿಲೀಸ್ ದಿನಾಂಕವನ್ನು ಪ್ರೇಮ್ ರಿವೀಲ್ ಮಾಡಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಹಾಡಿನ ವಿಶೇಷತೆ ಏನು? ಈ ಚಿತ್ರ ಯಾರ ಜೊತೆ ಕ್ಲ್ಯಾಶ್ ಮಾಡಿಕೊಳ್ಳುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

‘ಕೆಡಿ’ ಸಿನಿಮಾ ಸೆಟ್ಟೇರಿ ಸಾಕಷ್ಟು ಸಮಯ ಕಳೆದಿದೆ. ಪ್ರೇಮ್ ಅವರು ಹೆಚ್ಚು ಗಮನ ಹರಿಸಿ, ‘ಕೆಡಿ’ ಶೂಟಿಂಗ್ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಕೂಡ ಸಾಥ್ ನೀಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಧ್ರುವ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ 2026ರ ಏಪ್ರಿಲ್ 30ರಂದು ಪ್ರೇಕ್ಷಕರ ಎದುರು ಬರಲಿದೆ. ‘ಮಾರ್ಟಿನ್’ ಬಳಿಕೆ ತೆರೆಗೆ ಬರುತ್ತಿರುವ ಧ್ರುವ ಸರ್ಜಾ ನಟನೆಯ ಸಿನಿಮಾ ಇದಾಗಿದೆ.

ಮಾರ್ಚ್ ತಿಂಗಳಲ್ಲೇ ಸಾಕಷ್ಟು ದೊಡ್ಡ ಬಜೆಟ್​ ಸಿನಿಮಾಗಳು ರಿಲೀಸ್ ಆಗಲಿವೆ. ಹೀಗಾಗಿ, ಏಪ್ರಿಲ್ ವೇಳೆಗೆ ‘ಕೆಡಿ’ಗೆ ಟಕ್ಕರ್ ಕೊಡಲು ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಆದರೆ, ಐಪಿಎಲ್ ಮ್ಯಾಚ್​​ಗಳು ಸಿನಿಮಾಗೆ ಕೊಂಚ ಸ್ಪರ್ಧೆ ಕೊಡೋ ಸಾಧ್ಯತೆ ಇದೆ. ಶಾಲಾ ಮಕ್ಕಳಿಗೆ ಹಾಲಿಡೇ ಇರುವುದರಿಂದ ಸಿನಿಮಾಗೆ ಸಹಕಾರ ಆಗುವ ಸಾಧ್ಯತೆಯೇ ಹೆಚ್ಚು.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ನೇರ ಪ್ರಶ್ನೆಗೆ ಪ್ರೇಮ್ ಕೊಟ್ಟ ಉತ್ತರ ಏನು?

ಹಾಡಿನ ಬಗ್ಗೆ ಹೇಳೋದಾದರೆ, ‘ಅಣ್ತಮ್ಮ ಜೋಡೆತ್ತು ಕಣೋ’ ಇದು ಹಾಡಿನ ಹೆಸರು. ಈ ಹಾಡನ್ನು ಪ್ರೇಮ್ ಅವರೇ ಹಾಡಿದ್ದಾರೆ. ಬಿಎಸ್ ಮಂಜುನಾಥ್ ಲಿರಿಕ್ಸ್ ಬರೆದಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡಲ್ಲಿ ಧ್ರುವ ಸರ್ಜಾ- ರಮೇಶ್ ಅರವಿಂದ್ ಹಾಗೂ ಧ್ರುವ ಮತ್ತು ಸಂಜಯ್ ದತ್ ಕಾಣಿಸಿಕೊಳ್ಳುತ್ತಾರೆ. ಎಲ್ಲರದ್ದೂ ರೆಟ್ರೋ ಲುಕ್. ಇದು ಗೆಳೆತನದ ಬಗ್ಗೆ ಮೂಡಿ ಬಂದ ಹಾಡಾಗಿದೆ. ಹೊಸ ವರ್ಷದ ಸಂದರ್ಭದಲ್ಲೇ ಹಾಡು ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Fri, 26 December 25