AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ

Akshay Kumar real name: ಸ್ಟಾರ್ ನಟ ಅಕ್ಷಯ್ ಕುಮಾರ್ ವರ್ಷಕ್ಕೆ ಐದು ಆರು ಸಿನಿಮಾಗಳಲ್ಲಿ ಅವರು ನಟಿಸುತ್ತಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಅವರಿಗೆ ದೊಡ್ಡ ಯಶಸ್ಸು ದೊರೆತಿಲ್ಲವಾದರೂ ಅವರಿಗೆ ಬೇಡಿಕೆ ಏನೂ ಕಡಿಮೆ ಆಗಿಲ್ಲ. ಯಾವುದೇ ಗಾಡ್​ಫಾದರ್​​ಗಳಿಲ್ಲದೆ ಚಿತ್ರರಂಗಕ್ಕೆ ಬಂದ ಅಕ್ಷಯ್ ಕುಮಾರ್, ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಅವರ ನಿಜ ಹೆಸರು ಅದಲ್ಲ ಬದಲಿಗೆ ಅವರ ಹೆಸರು ರಾಜೀವ್ ಎಂದಾಗಿತ್ತು. ಆದರೆ ಅದು ಬದಲಾಗಿದ್ದು ಹೇಗೆ ಗೊತ್ತೆ?

ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ
Akshay Kumar
ಮಂಜುನಾಥ ಸಿ.
|

Updated on: Dec 26, 2025 | 6:35 PM

Share

ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್​ನ ಸ್ಟಾರ್ ನಟರುಗಳಲ್ಲಿ ಒಬ್ಬರು. ಈಗಲೂ ಅತ್ಯಂತ ಬ್ಯುಸಿ ಸ್ಟಾರ್ ನಟರೆಂದರು ಅದು ಅಕ್ಷಯ್ ಕುಮಾರ್. ವರ್ಷಕ್ಕೆ ಐದು ಆರು ಸಿನಿಮಾಗಳಲ್ಲಿ ಅವರು ನಟಿಸುತ್ತಾರೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಅವರಿಗೆ ದೊಡ್ಡ ಯಶಸ್ಸು ದೊರೆತಿಲ್ಲವಾದರೂ ಅವರಿಗೆ ಬೇಡಿಕೆ ಏನೂ ಕಡಿಮೆ ಆಗಿಲ್ಲ. ಯಾವುದೇ ಗಾಡ್​ಫಾದರ್​​ಗಳಿಲ್ಲದೆ ಚಿತ್ರರಂಗಕ್ಕೆ ಬಂದ ಅಕ್ಷಯ್ ಕುಮಾರ್, ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಅವರ ನಿಜ ಹೆಸರು ಅದಲ್ಲ ಬದಲಿಗೆ ಅವರ ಹೆಸರು ರಾಜೀವ್ ಎಂದಾಗಿತ್ತು. ಆದರೆ ಅದು ಬದಲಾಗಿದ್ದು ಹೇಗೆ ಗೊತ್ತೆ?

ಬಹುತೇಕರಿಗೆ ಗೊತ್ತಿರುವಂತೆ ಅಕ್ಷಯ್ ಕುಮಾರ್ ಅವರು ಮಾರ್ಷಲ್ ಆರ್ಟ್ಸ್ ಟೀಚರ್ ಆಗಿದ್ದರು. ಸಮರ ಕಲೆಗಳ ಬಗ್ಗೆ ವಿಪರೀತ ಆಸಕ್ತಿ ಇದ್ದ ಅಕ್ಷಯ್, ವಿದ್ಯಾರ್ಥಿಗಳಿಗೆ ಸಮರ ಕಲೆಗಳನ್ನು ಕಲಿಸುತ್ತಿದ್ದರು. ಆಗ ಅವರ ಹೆಸರು ರಾಜೀವ್ ಹರಿ ಓಂ ಭಾಟಿಯಾ ಎಂದಾಗಿತ್ತು. ಅಕ್ಷಯ್ ಅವರಿಗೆ ಒಂದು ಹಿಂದಿ ಸಿನಿಮಾನಲ್ಲಿ ನಟಿಸುವ ಅವಕಾಶ ದೊರೆತಿತು, ಅದು ಬಹಳ ಸಣ್ಣ ಪಾತ್ರ. ಸಿನಿಮಾನಲ್ಲಿ ನಾಯಕಿಗೆ ಅಕ್ಷಯ್ ಸಮರ ಕಲೆ ಕಲಿಸಬೇಕಿತ್ತು.

ಇದನ್ನೂ ಓದಿ:‘ಇದು ಸಮಾಜಕ್ಕೂ ಅಪಾಯಕಾರಿ’; ಅಕ್ಷಯ್ ಕುಮಾರ್ ವಿಡಿಯೋ ಬಗ್ಗೆ ಕೋರ್ಟ್ ಕಳವಳ

ಅದಾಗಲೇ ಸಿನಿಮಾಕ್ಕೆ ಬರುವ ಮನಸ್ಸು ಮಾಡಿದ್ದ ಅಕ್ಷಯ್ ಅವರು ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಬರೋಬ್ಬರಿ ಎಂಟು ಸೆಕೆಂಡುಗಳಷ್ಟೆ ಅವರು ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರ ಅದು. ಸಿನಿಮಾದ ಹೆಸರು ‘ಆಜ್’. ಮಹೇಶ್ ಭಟ್ ಅವರು ಆ ಸಿನಿಮಾದ ನಿರ್ದೇಶಕ. ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿದ್ದು ಆಗಿನ ಸ್ಟಾರ್ ನಟರಲ್ಲಿ ಒಬ್ಬರಾದ ಕುಮಾರ್ ಗೌರವ್. ಆ ಸಿನಿಮಾನಲ್ಲಿ ನಾಯಕನ ಪಾತ್ರ ಹೆಸರು ಅಕ್ಷಯ್ ಎಂದಿತ್ತು.

ಅಕ್ಷಯ್ ಅವರಿಗೆ ಕುಮಾರ್ ಗೌರವ್ ಮೇಲೆ ಅಭಿಮಾನ ಇತ್ತು. ‘ನನಗೆ ಸಿನಿಮಾನಲ್ಲಿ ಬರುವ ಆಸೆ ಇದೆ, ನಾನು ನಟಿಸಿದ ಮೊದಲ ಸಿನಿಮಾನಲ್ಲಿ ನಾಯಕನ ಹೆಸರು ಅಕ್ಷಯ್ ಹಾಗಾಗಿ ನಾನು ಅದೇ ಹೆಸರು ಇಟ್ಟುಕೊಳ್ಳುತ್ತೇನೆ ಎಂದುಕೊಂಡು ತಮ್ಮ ಹೆಸರನ್ನು ತಾವೇ ಅಕ್ಷಯ್ ಎಂದು ಬದಲಾಯಿಸಿಕೊಂಡರಂತೆ ಅಕ್ಷಯ್ ಕುಮಾರ್.

ಅಕ್ಷಯ್ ಕುಮಾರ್ ಪ್ರಸ್ತುತ ‘ವೆಲ್​​ಕಮ್​ ಟು ಜಂಗಲ್’, ‘ಭೂತ್ ಬಂಗ್ಲಾ’, ‘ಹೈವಾನ್’, ‘ಜಾಲಿ ಎಲ್​​ಎಲ್​​ಬಿ 4’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕೆಲ ಸಿನಿಮಾಗಳ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಒಂದು ರಿಯಾಲಿಟಿ ಶೋ ಸಹ ನಡೆಸಿಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'