AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಪರೇಷನ್ ಡ್ರೀಮ್ ಥಿಯೇಟರ್’ ಸೇರಿದ ನಟಿ ಪ್ರಿಯಾಂಕಾ

666 Operation Dream theater: ಪೋಸ್ಟರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಮೂಡಿಸಿದೆ. ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.

‘ಆಪರೇಷನ್ ಡ್ರೀಮ್ ಥಿಯೇಟರ್’ ಸೇರಿದ ನಟಿ ಪ್ರಿಯಾಂಕಾ
Priyanka Mohan
ಮಂಜುನಾಥ ಸಿ.
|

Updated on:Dec 27, 2025 | 1:00 PM

Share

ಸಪ್ತ ಸಾಗರದಾಚೆ ಎಲ್ಲೊ’ (Sapta Sagaradache Ello) ಸಿನಿಮಾ ಮೂಲಕ ಭಾರಿ ಭರವಸೆ ಮೂಡಿರುವ ನಿರ್ದೇಶಕ ಹೇಮಂತ್ ರಾವ್ ಅವರು ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದ್ಬುತ ಪ್ರೇಮಕತೆ ನೀಡಿದ ಬಳಿಕ ಒಮ್ಮೆಲೆ ಜಾನರ್ ಬದಲಾಯಿಸಿರುವ ಹೇಮಂತ್ ರಾವ್, ಈಗ ಥ್ರಿಲ್ಲರ್ ಕತೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಕೆಲವು ಪೊಸ್ಟರ್​​ಗಳು ಈಗಾಗಲೇ ಬಿಡುಗಡೆ ಆಗಿದ್ದು, ಪೋಸ್ಟರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಸಿನಿಮಾ ಮೂಡಿಸಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಕ್ಕೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಎಂಟ್ರಿ ನೀಡಿದ್ದಾರೆ. ನಿರ್ದೇಶಕ ಹೇಮಂತ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಮೋಹನ್ ಅವರ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಅವ್ಯವಸ್ಥೆಯ ನಡುವೆ ಹಾರುವ ಚಿಟ್ಟೆ’ ಎಂದು ನಟಿ ಪ್ರಿಯಾಂಕಾ ಪಾತ್ರವನ್ನು ಹೇಮಂತ್ ರಾವ್ ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್​​ನಲ್ಲಿ ಪ್ರಿಯಾಂಕಾ ಮೋಹನ್ ಬಲು ಸುಂದರವಾಗಿ ಕಾಣುತ್ತಿದ್ದಾರೆ. ಅವರ ಪೋಷಾಕು, ಸ್ಟೈಲ್ ಎಲ್ಲವೂ 80ರ ದಶಕದ ಯುವತಿಯನ್ನು ನೆನಪಿಸುತ್ತಿದೆ.

ಅಂದಹಾಗೆ ‘‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಕತೆ ನಡೆಯುವುದೇ 70-80ರ ದಶಕದಲ್ಲಿ. ಡಾಲಿ ಧನಂಜಯ್ ಹಾಗೂ ಶಿವಣ್ಣ ಅವರ ಪೋಸ್ಟರ್​​ಗಳು ಇದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಇದೀಗ ಪ್ರಿಯಾಂಕಾ ಮೋಹನ್ ಪೋಸ್ಟರ್ ಸಹ ಇದನ್ನೇ ಧ್ವನಿಸುತ್ತಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಮೋಹನ್, ಡಾಲಿ ಧನಂಜಯ್ ಪಾತ್ರದ ಜೋಡಿ ಎಂದು ಊಹಿಸಬಹುದಾಗಿದೆ.

ಇದನ್ನೂ ಓದಿ:ಹೇಮಂತ್ ರಾವ್ ಸಿನಿಮಾನಲ್ಲಿ ಡಾಲಿ ಧನಂಜಯ್, ಭೈರವನ ಪಾಠ ಏನಾಯ್ತು?

ಪ್ರಿಯಾಂಕಾ ಮೋಹನ್ ಬೆಂಗಳೂರಿನ ಯುವತಿ. ಕನ್ನಡದ ‘ಒಂದು ಕಥೆ ಹೇಳ್ಲಾ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬಂದವು. ನಾನಿ ಜೊತೆ ‘ನಾನಿಸ್ ಗ್ಯಾಂಗ್ ಲೀಡರ್’, ‘ಸರಿಪೋದಾ ಶನಿವಾರಂ’, ಧನುಶ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಪವನ್ ಕಲ್ಯಾಣ್ ಜೊತೆಗೆ ‘ಓಜಿ’ ಇನ್ನೂ ಹಲವಾರು ಪರಭಾಷೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.

2019 ರಲ್ಲಿ ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಪ್ರಿಯಾಂಕಾ ಮರಳುತ್ತಿರುವುದು ‘ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಮೂಲಕವೇ. ಈ ನಡುವೆ ಅವರು ಯಾವ ಕನ್ನಡ ಸಿನಿಮಾನಲ್ಲಿಯೂ ನಟಿಸಿರಲಿಲ್ಲ. ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಿಸಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Sat, 27 December 25