AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಹಿಂದೂ ಧರ್ಮಕ್ಕೆ ಹೊಸ ವರ್ಷದ ಆರಂಭ, ಪ್ರಕೃತಿಯ ನೈಜತೆಗೆ ಯುಗಾದಿ ಸಾಕ್ಷಿ

ಯುಗಾದಿ ಹಬ್ಬವು ಬ್ರಹ್ಮಾಂಡವನ್ನು ಸೃಷ್ಟಿಸುವ ಭಗವಾನ್ ಬ್ರಹ್ಮನ ಶ್ರಮವನ್ನು ಸೂಚಿಸುತ್ತದೆ. ದುರ್ಗಾ ದೇವಿಯು ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ ಚೈತ್ರ ನವರಾತ್ರಿಯ ದಿನವಂದು ಆರಂಭವಾಗುತ್ತದೆ ಎನ್ನುವ ಇತಿಹಾಸ ಇದೆ. ಹಬ್ಬವು ಚಾಳಿಗಾಲದ ನಂತರ ವಸಂತಕಾಲದ ಆರಂಭದ ಜೊತೆ ಹವಾಮಾನವನ್ನು ಸೂಚಿಸುವುದಾಗಿದೆ . ಹೊಸ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬ ಇದಾಗಿದೆ ಎಂಬ ಮಾತಿದೆ.

ಇಂದು ಹಿಂದೂ ಧರ್ಮಕ್ಕೆ ಹೊಸ ವರ್ಷದ ಆರಂಭ, ಪ್ರಕೃತಿಯ ನೈಜತೆಗೆ ಯುಗಾದಿ ಸಾಕ್ಷಿ
Digi Tech Desk
| Edited By: |

Updated on: Apr 09, 2024 | 10:17 AM

Share

ಯುಗಾದಿ ಹಬ್ಬವು ಹಿಂದೂಗಳ ಹೊಸ ವರ್ಷದ ಆರಂಭವಾಗಿದೆ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಜನವರಿ 1 ನ್ನು ಹೊಸ ಕ್ಯಾಲೆಂಡರ್ ಅಥವಾ ಕ್ಯಾಲೆಂಡರ್ ಬದಲಾವಣೆ ಎಂದು ಹೇಳಲಾಗುವುದು. ಜನವರಿ 1 ನ್ನು ಕ್ರಿಶ್ಚಿಯನರು, ಮುಸಲ್ಮಾನರು ಮೊದಲಾದವರು ಹೊಸ ವರ್ಷ ಎಂದು ಆಚರಿಸುವರು. ಆದರೆ ಹಿಂದೂ ಭಾಂದವರಿಗೆ ಹೊಸ ವರ್ಷ ಆರಂಭವಾಗುವುದೇ ಯುಗಾದಿಯ ದಿನ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಸಂಭ್ರಮದಿಂದ ಆಚರಿಸುವ ಹಬ್ಬ ಯುಗಾದಿ ಎನ್ನುವ ಪದದಲ್ಲಿ ಯುಗ ಎಂದರೆ ಅವಧಿ, ಆದಿ ಎಂದರೆ ಪ್ರಾರಂಭ ಎನ್ನುವ ಅರ್ಥವನ್ನು ನೀಡುತ್ತದೆ. ಯುಗ ಮತ್ತು ಆದಿ ಎಂಬ ಪದವನ್ನು ಒಟ್ಟುಗೂಡಿಸಿದರೆ ಯುಗಾದಿ ಎಂಬ ಅರ್ಥವನ್ನು ನೀಡುತ್ತದೆ.

ಯುಗಾದಿ ಹಬ್ಬವು ಬ್ರಹ್ಮಾಂಡವನ್ನು ಸೃಷ್ಟಿಸುವ ಭಗವಾನ್ ಬ್ರಹ್ಮನ ಶ್ರಮವನ್ನು ಸೂಚಿಸುತ್ತದೆ. ದುರ್ಗಾ ದೇವಿಯು ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ ಚೈತ್ರ ನವರಾತ್ರಿಯ ದಿನವಂದು ಆರಂಭವಾಗುತ್ತದೆ ಎನ್ನುವ ಇತಿಹಾಸ ಇದೆ. ಹಬ್ಬವು ಚಾಳಿಗಾಲದ ನಂತರ ವಸಂತಕಾಲದ ಆರಂಭದ ಜೊತೆ ಹವಾಮಾನವನ್ನು ಸೂಚಿಸುವುದಾಗಿದೆ . ಹೊಸ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬ ಇದಾಗಿದೆ ಎಂಬ ಮಾತಿದೆ.

ಎಲ್ಲಾ ಹಬ್ಬಗಳಂತೆ ಯುಗಾದಿ ಹಬ್ಬವನ್ನು ಬಹಳ ಸಂಭ್ರಮದಿಂದ ಸಡಗರದಿಂದ ಆಚರಿಸುತ್ತಾರೆ. ಒಂದು ತಿಂಗಳ ಮುಂಚಿತವಾಗಿಯೇ ಹಬ್ಬದ ತಯಾರಿಯನ್ನು ನಡೆಸಿಕೊಳ್ಳುತ್ತಾರೆ. ಹೊಸ – ಹೊಸ ಬಟ್ಟೆಗಳ ಖರೀದಿಸುವಿಕೆ, ದೇವರ ಪೂಜೆಗೆ ಬೇಕಾಗುವ ಸಾಮಾಗ್ರಿ, ಬಗೆ ಬಗೆ ಖಾದ್ಯಗಳಿಗೆ ಖರೀದಿಯನ್ನು ಮಾಡಿ ಕೊಳ್ಳುತ್ತಾರೆ. ಇನ್ನೂ ಹಬ್ಬ ದಿನ ಮನೆಯನ್ನು ಅಂದಗೊಳಿಸುವುದರ ಮನೇಯಂಗಳವನ್ನು ಸೆಗಣಿ ಸಾಸಿ ಸ್ವಚ್ಛಗೊಳಿಸುತ್ತಾರೆ. ಬೆಳಗೆದ್ದು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಮನೆ ಮುಂದೆ ರಂಗೋಲಿ ಬಿಡಿಸಿ, ಮಾವಿನ ಎಲೆಯ ತೋರಣ ಹಾಗೂ ಹೂವಿನಿಂದ ಮನೆಯನ್ನು ಸಿಂಗರಿಸುತ್ತಾರೆ. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹಬ್ಬವನ್ನು ಸಂಪನ್ನಗೊಳಿಸುವರು, ಇನ್ನೂ ಕೆಲವರು ಮನೆಯಲ್ಲಿ ಪೂಜೆಯನ್ನು ಮಾಡಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಹಬ್ಬವನ್ನು ವಿಜೃಂಭಿಸುತ್ತಾರೆ. ಇನ್ನೂ ಕೆಲವರು ಆ ದಿನ ತಿರುಪತಿ ದೇವರಿಗೆ ಮುಡಿಪು ಕಾಣಿಕೆ ಹಾಕುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹೀಗೆ ಪ್ರತಿಯೊಬ್ಬರು ಒಂದೊಂದು ರೀತಿಯ ಆಚರಣೆಯಲ್ಲಿ ಯುಗಾದಿಯನ್ನು ಆಚರಿಸುತ್ತಾರೆ.

ಇದನ್ನೂ ಓದಿ: ಯುಗಾದಿ ಹಬ್ಬದ ದಿನ ಏನು ಮಾಡಬೇಕು, ಮಾಡಬಾರದು?

ಡಾ. ರಾಜ್ ಕುಮಾರ್ ಹಾಗೂ ಲೀಲಾವತಿಯವರ ಅಭಿನಯದ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕ್ಕೆ, ಹೊಸ ಹರುಷಕ್ಕೆ ಹೊಸತು ಹೊಸತು ತರುತ್ತಿದೆ ಎಂಬ ಹಾಡನ್ನು ಬಹಳಷ್ಟು ಕೇಳಿದ್ದೇವೆ. ಅದರಂತೆ ಯುಗಾದಿ ಪ್ರತಿ ವರ್ಷನು ಬರತ್ತೆ ಬೇವು ಬೆಲ್ಲದಂತ ಹೊಸ ಹರುಷವನ್ನು ತರುತ್ತದೆ. ಈ ಹಬ್ಬ ಮನುಷ್ಯರಿಗೆ ಸೀಮಿತವಾಗದೆ, ಪ್ರಕೃತಿಯಲ್ಲೂ ಹೊಸತನವನ್ನು ಕಾಣಬಹುದು. ಪ್ರಕೃತಿಯಲ್ಲಿ ಮರ -ಗಿಡಗಳು ಚಿಗುರೊಡೆಯುವ ಸಂತಸದ ಕ್ಷಣ, ವಸಂತ ಕಾಲ ಬರಬೇಕು ಮಾವು ಚಿಗುರಬೇಕು. ಮಾವು ಚಿಗುರು ಬಿಡುವುದು ವಸಂತ ಮಾಸದಲ್ಲಿ ಎಂದು ಹೇಳಬಹುದು. ಒಂದು ಪದವೇ ಇದೆ ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು, ಕೋಗಿಲೆ ಹಾಡಲೇ ಬೇಕು. ಇದು ವಸಂತಕಾಲದಲ್ಲಿ ಪ್ರಕೃತಿಯ ನೈಜತೆಯನ್ನು ಇಲ್ಲಿ ಹೇಳಲಾಗಿದೆ. ಯುಗಾದಿ ಮರಳಿ ಬರುವಂತೆ ಪ್ರತಿಯೊಬ್ಬರ ಬಾಳಲ್ಲಿ ಸಂತೋಷ, ಸುಖ ಬರಲಿ, ಈ ವರ್ಷ ಹೊಸ ಚಿಂತನೆಗಳೊಂದಿಗೆ ಜೀವನದ ಹೊಸ ಪಯಣ ಆರಂಭವಾಗಲಿ ಎಂದು ಆಶಿಸುತ್ತಾ ಯುಗಾದಿ ಹಬ್ಬದ ಶುಭಾಶಯ

ಧರ್ಮಶ್ರೀ ಧರ್ಮಸ್ಥಳ

ವಿವೇಕಾನಂದ ಕಾಲೇಜು ಪುತ್ತೂರು

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!