AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರವರೆಗೆ ಟ್ಯಾರಿಫ್ ಹಾಕಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುವ ಕಾಯ್ದೆಗೆ ಅನುಮೋದನೆ ಸಿಕ್ಕಿದೆ. ರಷ್ಯಾದಿಂದ ಚೀನಾ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿದೆ. ಭಾರತ ಎರಡನೇ ಸ್ಥಾನ ಪಡೆಯುತ್ತದೆ. ಭಾರತದ ಮೇಲೆ ಎಷ್ಟು ಟ್ಯಾರಿಫ್ ಹಾಕಬೇಕು ಎಂಬುದು ಟ್ರಂಪ್ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ.

ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ
ನರೇಂದ್ರ ಮೋದಿ, ಟ್ರಂಪ್ ಅವರ ಭೇಟಿಯ ಫೈಲ್ ಚಿತ್ರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2026 | 12:23 PM

Share

ನವದೆಹಲಿ, ಸೆಪ್ಟೆಂಬರ್ 17: ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಗರಿಷ್ಠ 100% ರಷ್ಟು ಆಮದು ಸುಂಕ (Tariff) విಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡುವ ಕಾಯ್ದೆಗೆ (Lindsey O. Graham Sanctioning Russia and Iran Act of 2026) ಅಮೆರಿಕದ ಜನಪ್ರತಿನಿಧಿಗಳ ಸಭೆ (US House of Representatives) ಅನುಮೋದನೆ ನೀಡಿದೆ. ಈ ಮಸೂದೆಯು ರಷ್ಯಾದಿಂದ ಇಂಧನ ಖರೀದಿಸುವ ದೇಶಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಚೀನಾ ಮತ್ತು ಭಾರತ ಹಾಗೂ ಇತರ ಕೆಲ ದೇಶಗಳಿಗೆ ಟ್ಯಾರಿಫ್ ಹಾಗೂ ಇತರ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ಟ್ರಂಪ್​ಗೆ ಕಾನೂನು ಅಧಿಕಾರ ಸಿಗಲಿದೆ.

ಈ ಕಾಯ್ದೆಯು ಭಾರತ, ಚೀನಾ ಮತ್ತಿತರ ದೇಶಗಳ ಮೇಲೆ ಶೇ. 100 ಟ್ಯಾರಿಫ್ ಹಾಕುವ ಅಧಿಕಾರವನ್ನು ಟ್ರಂಪ್​ಗೆ ನೀಡುತ್ತದೆ. ಒಂದು ವೇಳೆ ಭಾರತದ ಸರಕುಗಳ ಮೇಲೆ ಅಮೆರಿಕ ನೂರಕ್ಕೆ ನೂರು ಸುಂಕ ವಿಧಿಸಿದ್ದೇ ಆದಲ್ಲಿ ದೇಶದ ರಫ್ತು ವಲಯಕ್ಕೆ ಹಿನ್ನಡೆಯಂತೂ ಆಗುತ್ತದೆ.

ಅಮೆರಿಕ ದೇಶವು ಭಾರತಕ್ಕೆ ಅತಿದೊಡ್ಡ ರಫ್ತು ಮಾರುಕಟ್ಟೆ ಎನಿಸಿರುವುದರಿಂದ ಹೆಚ್ಚೇ ಹಿನ್ನಡೆ ಆಗುತ್ತದೆ. ಈಗಲೂ ಭಾರತದ ಸರಕುಗಳು ಅಧಿಕ ಟ್ಯಾರಿಫ್ ಹೊಂದಿವೆ. ಆದರೂ ಕೂಡ ಭಾರತದ ರಫ್ತು ಸೆಕ್ಟರ್ ಉತ್ತಮ ಬೆಳವಣಿಗೆ ಕಾಣುತ್ತಿದೆ. ಶೇ. 100 ಟ್ಯಾರಿಫ್ ಎಂದರೆ ಅದನ್ನು ಸಂಭಾಳಿಸುವುದು ಬಹುತೇಕ ಅಸಾಧ್ಯವೇ. ಭಾರತದ ರಫ್ತುದಾರರು ತಮ್ಮ ಲಾಭದ ಮಾರ್ಜಿನ್ ಕಡಿಮೆ ಮಾಡಿಕೊಳ್ಳಬೇಕು, ಅಮೆರಿಕದ ಆಮದುದಾರರು ಕೂಡ ಲಾಭದ ಮಾರ್ಜಿನ್ ಕಡಿಮೆ ಮಾಡಬೇಕು, ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಇದು ಬಹಳ ಕ್ಲಿಷ್ಟಕರ ಸ್ಥಿತಿ.

ಇದನ್ನೂ ಓದಿ: ಅಮೆರಿಕದ ಶೇ.100 ಸುಂಕ ಬೆದರಿಕೆಗೆ ಭಾರತದ ಖಡಕ್ ಪ್ರತ್ಯುತ್ತರ: 140 ಕೋಟಿ ಜನರ ಇಂಧನ ಭದ್ರತೆ ನಮಗೆ ಮೊದಲ ಆದ್ಯತೆ

ಅಮೆರಿಕ ಈ ಕಾಯ್ದೆ ತರುತ್ತಿರುವುದು ಯಾಕೆ?

ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ತನ್ನ ತೈಲ ಮಾರಾಟದ ಆದಾಯವನ್ನೇ ಬಳಸಿಕೊಳ್ಳುತ್ತಿದ್ದು, ರಷ್ಯಾದ ಆರ್ಥಿಕ ಮೂಲಕ್ಕೆ ತಡೆ ಒಡ್ಡುವುದು ಮತ್ತು ‘ಶ್ಯಾಡೋ ಫ್ಲೀಟ್’ (ಸಂಕಷ್ಟ ತಪ್ಪಿಸಿ ತೈಲ ಸಾಗಿಸುವ ಹಡಗುಗಳು) ಕಾರ್ಯಾಚರಣೆಯನ್ನು ತಡೆಯುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ರಷ್ಯಾದಿಂದ ಯಾವ ದೇಶವೂ ತೈಲ ಖರೀದಿಸುವ ದುಸ್ಸಾಹಸಕ್ಕೆ ಕೈಹಾಕದಿರಲಿ ಎನ್ನುವುದು ಕಾಯ್ದೆಯ ಇಂಗಿತ. ಅಂತಿಮವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ದೇಶಕ್ಕೆ ಎಷ್ಟು ಟ್ಯಾರಿಫ್ ಹಾಕಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ಭಾರತಕ್ಕೆ ನೇರ ಪರಿಣಾಮ: ಉಕ್ರೇನ್ ಯುದ್ಧದ ನಂತರ ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರಿ ಪ್ರಮಾಣದ ತೈಲ ಖರೀದಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಕಾಯ್ದೆಯು ಜಾರಿಗೆ ಬಂದರೆ, ಅಮೆರಿಕಕ್ಕೆ ರಫ್ತಾಗುವ ಭಾರತೀಯ ಸರಕುಗಳ ಮೇಲೆ ತೀವ್ರ ತೆರಿಗೆ ಹೊರೆ ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮ ಉದ್ಘಾಟನೆ; ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳ ಸಮಾಗಮ

ಅಮೆರಿಕದ ರಾಜಕೀಯ ಭಿನ್ನಾಭಿಪ್ರಾಯ

ಡೆಮಾಕ್ರಟಿಕ್ ಪಕ್ಷದ ಪ್ರಮುಖ ನಾಯಕರು ಈ ಸುಂಕ ಅಧಿಕಾರವನ್ನು ವಿರೋಧಿಸಿದ್ದಾರೆ. “ಈ ಅಧಿಕಾರದಿಂದ ಅಮೆರಿಕದಲ್ಲೇ ಹಣದುಬ್ಬರ ಹೆಚ್ಚಾಗಬಹುದು ಮತ್ತು ಅಧ್ಯಕ್ಷರು ಈ ಸುಂಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಹುದು” ಎಂದು ಎಚ್ಚರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಬಹುಪಾಲು ಸದಸ್ಯರು ಈ ಕಾಯ್ದೆಗೆ ಬೆಂಬಲ ನೀಡಿದ್ದಾರೆ. ಡೆಮಾಕ್ರಾಟ್​ನಲ್ಲಿ ಭಿನ್ನಾಭಿಪ್ರಾಯಗಳಿವೆ.

ಭಾರತ ಸರ್ಕಾರದ ಪ್ರತಿಕ್ರಿಯೆ: ಕಾಯ್ದೆಯ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, “ದೇಶದ 140 ಕೋಟಿ ಜನರ ಇಂಧನ ಭದ್ರತೆ ನಮಗೆ ಪ್ರಥಮ ಆದ್ಯತೆ. ರಷ್ಯಾದಿಂದ ತೈಲ ಖರೀದಿ ರಾಷ್ಟ್ರೀಯ ಹಿತಾಸಕ್ತಿಗೆ ಒಳಪಟ್ಟಿದ್ದು, ಭಾರತೀಯ ಉದ್ಯಮ ಹಾಗೂ ವ್ಯಾಪಾರ ಹಿತರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ” ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ
ಪುರಿಯಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ
ಪುರಿಯಲ್ಲಿ ಸುದರ್ಶನ್ ಪಟ್ನಾಯಕ್ ಕೈಯಲ್ಲಿ ಅರಳಿದ ಮೋದಿ ಮರಳು ಕಲಾಕೃತಿ
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಧಾರವಾಡ: ₹50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ