AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI ಪಾವತಿ ಮೇಲಿನ MDR ಶುಲ್ಕ: ನಿರ್ಧಾರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಮೂಲಗಳ ಸ್ಪಷ್ಟನೆ

ಗ್ರಾಹಕರಿಂದ ವ್ಯಾಪಾರಿಗಳಿಗೆ ಮಾಡಲಾಗುವ ಯುಪಿಐ ಪಾವತಿಗೆ ಎಂಡಿಆರ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 15ರಿಂದ ಎಂಡಿಆರ್ ನಿಯಮಗಳು ಜಾರಿಗೆ ಬರಲಿವೆ. ಸರ್ಕಾರದ ನಡೆಯನ್ನು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಆದರೆ, ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಮೂಲಗಳು ಹೇಳುತ್ತಿವೆ.

UPI ಪಾವತಿ ಮೇಲಿನ MDR ಶುಲ್ಕ: ನಿರ್ಧಾರ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಮೂಲಗಳ ಸ್ಪಷ್ಟನೆ
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2026 | 7:02 PM

Share

ನವದೆಹಲಿ, ಸೆಪ್ಟೆಂಬರ್ 16: ಯುಪಿಐ (UPI) ವಹಿವಾಟುಗಳ ಮೇಲೆ ವ್ಯಾಪಾರಿಗಳಿಗೆ (Merchants) ವಿಧಿಸಲು ತೀರ್ಮಾನಿಸಲಾದ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕದ ನಿರ್ಧಾರವನ್ನು ಹಿಂಪಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಸೈಬರ್ ಭದ್ರತೆ ಮತ್ತು ತಂತ್ರಜ್ಞಾನದ ಮೂಲಸೌಕರ್ಯವನ್ನು ಬಲಪಡಿಸಲು ಪ್ರಸ್ತುತ ತರಲಾದ ಈ ತೀರ್ಮಾನವು ಸಾಕಷ್ಟು ಆಲೋಚಿಸಿ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಯುಪಿಐ ವಹಿವಾಟಿಗೆ ಎಂಡಿಆರ್ ಶುಲ್ಕ ವಿಧಿಸುವುದರಿಂದ ಜನರು ಡಿಜಿಟಲ್ ಪೇಮೆಂಟ್ ಬಿಟ್ಟು ಕ್ಯಾಷ್ ಪೇಮೆಂಟ್​ಗೆ ಬರಬಹುದು. ಇದರಿಂದ ಮತ್ತೆ ಕ್ಯಾಷ್ ಎಕನಾಮಿ ಸೃಷ್ಟಿಯಾಗುತ್ತದೆ ಎಂದು ವಿಪಕ್ಷಗಳು ಹಾಗು ಕೆಲ ಉದ್ಯಮಿಗಳು ವಾದಿಸುತ್ತಿದ್ದಾರೆ. ಜನರ ಹಣ ಸುಲಿಗೆ ಮಾಡಲು ಎಂಡಿಆರ್ ತರಲಾಗಿದೆ ಎಂದು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಈ ಹಿನ್ನೆಲೆಯಲ್ಲಿ ಎಂಡಿಆರ್ ಕ್ರಮವನ್ನು ಸರ್ಕಾರ ಹಿಂಪಡೆಯಬಹುದು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದುಂಟು.

ಆದರೆ, ಎಂಡಿಆರ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ (No Rollback) ಎಂಬುದು ಸದ್ಯಕ್ಕೆ ಸರ್ಕಾರದ ಮೂಲಗಳಿಂದ ಬಂದಿರುವ ಮಾಹಿತಿ. ವಿಪಕ್ಷಗಳ ತೀವ್ರ ವಿರೋಧ ಹಾಗೂ ಆಕ್ಷೇಪಣೆಗಳ ನಡುವೆಯೂ, ನಿಯಮಿತ ವಹಿವಾಟುಗಳ ಮೇಲಿನ MDR ಶುಲ್ಕದ ತೀರ್ಮಾನವನ್ನು ಹಿಂಪಡೆಯುವುದಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ.

ಇದನ್ನೂ ಓದಿ: ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕಗಳು ಎಷ್ಟು?

  • ಸಾಮಾನ್ಯ ಗ್ರಾಹಕರಿಗೆ ಪೂರ್ಣ ಉಚಿತ: ಗ್ರಾಹಕರು (Consumers) ಮಾಡುವ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ಗ್ರಾಹಕರಿಗೆ ಯುಪಿಐ ಸಂಪೂರ್ಣ ಉಚಿತವಾಗಿರುತ್ತದೆ.
  • ₹2,000 ಕ್ಕಿಂತ ಹೆಚ್ಚಿನ ವಹಿವಾಟು: ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪಡೆಯುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಗರಿಷ್ಠ 0.4% MDR ಶುಲ್ಕ ಅನ್ವಯಿಸುತ್ತದೆ. ಗರಿಷ್ಠ ಎಂಡಿಆರ್ ಮಿತಿ ₹300 ಇದೆ. ಅಂದರೆ, ₹75,000 ಕ್ಕಿಂತ ಹೆಚ್ಚಿನ ಮೊತ್ತದ ಪೇಮೆಂಟ್​ಗೆ ಸ್ಥಿರವಾದ ₹300 ಎಂಡಿಆರ್ ಇರುತ್ತದೆ.
  • ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ: ತಿಂಗಳಿಗೆ ₹1 ಲಕ್ಷದವರೆಗೆ ಯುಪಿಐ ಕ್ಯೂಆರ್ ಕೋಡ್ ಮೂಲಕ ವಹಿವಾಟು ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ zero-MDR ನಿಯಮ ಮುಂದುವರಿಯಲಿದ್ದು, ಅವರಿಗೆ ಯಾವುದೇ ಶುಲ್ಕವಿರುವುದಿಲ್ಲ.
  • ಅವಶ್ಯಕ ಕ್ಷೇತ್ರಕ್ಕೆ ₹5 ಶುಲ್ಕ: ಯುಟಿಲಿಟಿ ಬಿಲ್​ಗಳ ಪಾವತಿ, ರೈಲ್ವೆ ಟಿಕೆಟ್​ಗೆ ಪಾವತಿ ಇತ್ಯಾದಿ ಅವಶ್ಯಕ ಅಥವಾ ಎಸೆನ್ಷಿಯಲ್ ಸೆಕ್ಟರ್​ಗಳಲ್ಲಿ ₹2,000 ಮೇಲ್ಪಟ್ಟ ಯುಪಿಐ ಪೇಮೆಂಟ್​ಗೆ ನಿಗದಿತ ₹5 ಎಂಡಿಆರ್ ಶುಲ್ಕ ಇರುತ್ತದೆ.
  • ಕ್ಯಾಪಿಟಲ್ ಮಾರ್ಕೆಟ್: ಷೇರು, ಮ್ಯೂಚುವಲ್ ಫಂಡ್ ಖರೀದಿಗೆ ಮಾಡಲಾಗುವ ಯುಪಿಐ ಪೇಮೆಂಟ್​ಗೆ ಶೇ. 0.02 ಅಥವಾ ಗರಿಷ್ಠ ₹300 ಎಂಡಿಆರ್ ಶುಲ್ಕ ಹಾಕಲಾಗುತ್ತದೆ.

ಇದನ್ನೂ ಓದಿ: ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಎಂಡಿಆರ್ ಶುಲ್ಕ ವಿಧಿಸುವ ಕ್ರಮಕ್ಕೆ ಸರ್ಕಾರದ ವಿವರಣೆ

ದಿನೇ ದಿನೇ ಕೋಟ್ಯಂತರ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳಿಗೆ ಅಗತ್ಯವಿರುವ ಸೈಬರ್ ಭದ್ರತೆ (Cybersecurity), ವಂಚನೆ ತಡೆ ವ್ಯವಸ್ಥೆ ಮತ್ತು ತಾಂತ್ರಿಕ ಮೂಲಸೌಕರ್ಯದ ಅಭಿವೃದ್ಧಿಗಾಗಿ ಹಣಕಾಸಿನ ಅಗತ್ಯವಿದೆ. ಕೇವಲ ಸರ್ಕಾರಿ ಅನುದಾನವನ್ನೇ ನಂಬಿ ಸಾಗುವುದು ಅಸಾಧ್ಯವಾದ್ದರಿಂದ ಈ ತೀರ್ಮಾನ ಅಗತ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಎಂಡಿಆರ್ ಶುಲ್ಕದ ಬಗ್ಗೆ ವಿರೋಧ ಪಕ್ಷಗಳ ತಗಾದೆ ಏನು?

“ವ್ಯಾಪಾರಿಗಳ ಮೇಲೆ ಬೀಳುವ ಈ ಶುಲ್ಕದ ಹೊರೆ ಅಂತಿಮವಾಗಿ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಸಾಮಾನ್ಯ ಗ್ರಾಹಕರ ಮೇಲೆಯೇ ಬೀಳಲಿದೆ” ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More