ಚಿನ್ನ, ವಜ್ರಗಳಿಂದ ಅಲಂಕರಿಸಿದ ಐಷಾರಾಮಿ ಸ್ಮಾರ್ಟ್‌ಫೋನ್‌ಗಳು; ಬೆಲೆ ಬರೋಬ್ಬರಿ 1 ಕೋಟಿವರೆಗೆ!
ಸ್ಮಾರ್ಟ್‌ಫೋನ್‌ಗಳ ಬೆಲೆ ಸಾಮಾನ್ಯವಾಗಿ ಕೆಲವು ಸಾವಿರದಿಂದ ಲಕ್ಷಗಳವರೆಗೆ ಇರುತ್ತದೆ. ಆದರೆ ಐಷಾರಾಮಿ ಫೋನ್‌ಗಳ ಜಗತ್ತಿನಲ್ಲಿ ಬೆಲೆ ಬರೋಬ್ಬರಿ 1 ಕೋಟಿವರೆಗೂ ತಲುಪುತ್ತದೆ. ಚಿನ್ನ, ವಜ್ರ, ಅಪರೂಪದ ಲೆದರ್ ಮತ್ತು ವಿಶೇಷ ವಿನ್ಯಾಸ ಹೊಂದಿರುವ VERTU ಹಾಗೂ Caviar ಫೋನ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಸುಮಾರು 1 ಕೋಟಿ ರೂಪಾಯಿ ವರೆಗಿನ ಸ್ಮಾರ್ಟ್‌ಫೋನ್‌ಗಳು!
- ಇವು ಚಿನ್ನ, ವಜ್ರಗಳಿಂದ ಅಲಂಕರಿಸಿದ ಫೋನ್‌ಗಳು!
- ಇವುಗಳ ಬೆಲೆ ಕೇಳಿದರೆ ನೀವು ಶಾಕ್ ಆಗ್ತೀರಾ!
ಆಪಲ್‌ನ (Apple) ಫೋಲ್ಡಬಲ್ ಐಫೋನ್ ಡ್ಯುಯೊದ ಸುಮಾರು 3 ಲಕ್ಷದ ಆರಂಭಿಕ ಬೆಲೆ ಕೇಳಿದಾಗಲೇ ದುಬಾರಿ ಫೋನ್‌ಗಳ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಐಷಾರಾಮಿ ಸ್ಮಾರ್ಟ್‌ಫೋನ್‌ಗಳ ಜಗತ್ತು ಇದಕ್ಕಿಂತಲೂ ಹಲವು ಪಟ್ಟು ದುಬಾರಿಯಾಗಿದೆ. ಕೆಲವು ವಿಶೇಷ ಸ್ಮಾರ್ಟ್‌ಫೋನ್‌ಗಳ ಬೆಲೆ ಬರೋಬ್ಬರಿ 1 ಕೋಟಿಯವರೆಗೆ ತಲುಪುತ್ತದೆ. ಇವುಗಳಲ್ಲಿ ಚಿನ್ನ, ವಜ್ರ, ಅಪರೂಪದ ಚರ್ಮ ಹಾಗೂ ಕೈಯಿಂದ ಮಾಡಿರುವ ವಿಶೇಷ ವಿನ್ಯಾಸಗಳನ್ನು ಬಳಸಲಾಗುತ್ತದೆ. ಕೆಲವು ಫೋನ್‌ಗಳಲ್ಲಿ ಭದ್ರತೆ, AI ವೈಶಿಷ್ಟ್ಯಗಳು ಮತ್ತು 24×7 ವೈಯಕ್ತಿಕ ಸಹಾಯದಂತಹ ಸೌಲಭ್ಯಗಳೂ ಇವೆ.
VERTU AlphaFold Gold IV ಮತ್ತು Green Diamond
ಸುಮಾರು 95 ಲಕ್ಷ ಬೆಲೆಯ VERTU AlphaFold ತನ್ನ ಐಷಾರಾಮಿ ಫೋಲ್ಡಬಲ್ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಇದರ Gold IV ಮತ್ತು Green Diamond ಆವೃತ್ತಿಗಳಲ್ಲಿ 8.05 ಇಂಚಿನ ಒಳಗಿನ ಫೋಲ್ಡಬಲ್ ಸ್ಕ್ರೀನ್ ಹಾಗೂ 6.53 ಇಂಚಿನ ಹೊರಗಿನ ಡಿಸ್ಪ್ಲೇ ಇದೆ.
ಈ ಫೋನ್‌ನಲ್ಲಿ ಏರೋಸ್ಪೇಸ್ ದರ್ಜೆಯ ವಸ್ತುಗಳು, ಅಪರೂಪದ ಅಲಿಗೇಟರ್ ಲೆದರ್, ಶುದ್ಧ ಚಿನ್ನದ ಅಲಂಕಾರ ಮತ್ತು ಅಪರೂಪದ ಹಸಿರು ವಜ್ರಗಳನ್ನು ಬಳಸಲಾಗಿದೆ. ಫೋನ್‌ನಲ್ಲಿ Hermes Agent AI, A5 Security Chip ಮತ್ತು ಬಹುಹಂತದ ಗೌಪ್ಯತಾ ವ್ಯವಸ್ಥೆ ಇದೆ. ಇದರ ಜತೆಗೆ 65W ವೇಗದ ಚಾರ್ಜಿಂಗ್ ಬೆಂಬಲ ಹಾಗೂ 6,500mAh ಸಾಮರ್ಥ್ಯದ ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನೂ ನೀಡಲಾಗಿದೆ.
Caviar ಐಫೋನ್ 17 ಪ್ರೊ ಮ್ಯಾಕ್ಸ್ Palmette 18K
ಸುಮಾರು 94 ಲಕ್ಷದಿಂದ ಆರಂಭವಾಗುವ Caviar ಐಫೋನ್ 17 ಪ್ರೊ ಮ್ಯಾಕ್ಸ್ Palmette 18K ಮತ್ತೊಂದು ದುಬಾರಿ ಸ್ಮಾರ್ಟ್‌ಫೋನ್. ಈ ಫೋನ್‌ನ ಹಿಂಭಾಗದ ಬಾಡಿ ಬದಲಿಗೆ ಇಲ್ಲಿ 18 ಕ್ಯಾರೆಟ್ ಶುದ್ಧ ಚಿನ್ನವನ್ನು ಬಳಸಲಾಗಿದೆ. ಇದರ ವಿನ್ಯಾಸಕ್ಕೆ ಮಧ್ಯಪ್ರಾಚ್ಯದ ಕಲೆ ಮತ್ತು ಯುಎಇಯ ಖರ್ಜೂರದ ಎಲೆಗಳಿಂದ ಪ್ರೇರಣೆ ಪಡೆಯಲಾಗಿದೆ. ಐಫೋನ್ 17 ಪ್ರೊ ಮ್ಯಾಕ್ಸ್ ಆವೃತ್ತಿಯಲ್ಲಿ 46 ನೈಜ ವಜ್ರಗಳನ್ನು ಕೈಯಿಂದ ಅಳವಡಿಸಲಾಗಿದೆ. ಹಿಂಭಾಗದಲ್ಲಿರುವ ಆಪಲ್ ಲೋಗೋವನ್ನು ಮಾತ್ರ 58 ವಜ್ರಗಳಿಂದ ಅಲಂಕರಿಸಲಾಗಿದೆ. ಈ ವಿಶೇಷ ಆವೃತ್ತಿಯನ್ನು ಜಗತ್ತಿನಾದ್ಯಂತ ಸೀಮಿತ ಸಂಖ್ಯೆಯ ಯೂನಿಟ್‌ಗಳಲ್ಲಿ ಮಾತ್ರ ತಯಾರಿಸಲಾಗಿದೆ.
ಫ್ಲಿಪ್ಕಾರ್ಟ್ನಿಂದ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಘೋಷಣೆ; ಯಾವಾಗ ಆರಂಭ?
VERTU Agent Q
ಸುಮಾರು 21 ಲಕ್ಷ ಬೆಲೆಯ VERTU Agent Q ಫೋನ್‌ನಲ್ಲಿ ಐಷಾರಾಮಿ ವಿನ್ಯಾಸದ ಜತೆಗೆ ಭದ್ರತೆ ಮತ್ತು AI ವೈಶಿಷ್ಟ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಬಾಡಿಯಲ್ಲಿ ಅಪರೂಪದ ಹಿಮಾಲಯನ್ ಅಲಿಗೇಟರ್ ಲೆದರ್ ಬಳಸಲಾಗಿದೆ. ಫೋನ್‌ನಲ್ಲಿ A5 ಸೆಕ್ಯುರಿಟಿ ಚಿಪ್, 10TB ಎನ್‌ಕ್ರಿಪ್ಟ್ ಮಾಡಲಾದ ವೈಯಕ್ತಿಕ ಡೇಟಾ ವಾಲ್ಟ್ ನೀಡಲಾಗಿದೆ. Ruby Key ಮೂಲಕ VERTUನ AI ವ್ಯವಸ್ಥೆಗೆ ಪ್ರವೇಶ ಪಡೆಯಬಹುದು. ಇದರಲ್ಲಿ 200ಕ್ಕೂ ಹೆಚ್ಚು ವಿಶೇಷ AI ಏಜೆಂಟ್‌ಗಳಿವೆ ಎಂದು ಕಂಪನಿ ಹೇಳಿಕೊಂಡಿದೆ.
ಇದರ ಜತೆಗೆ 24 ಗಂಟೆ, ವಾರದ ಏಳು ದಿನವೂ ಲಭ್ಯವಿರುವ ನೈಜ-ಸಮಯದ ಮಾನವ Concierge ಸೇವೆಯೂ ಇದೆ. ಅಂದರೆ ಫೋನ್ ಬಳಕೆದಾರರಿಗೆ ವಿವಿಧ ವೈಯಕ್ತಿಕ ಸೇವೆಗಳಿಗೆ ಸಹಾಯ ಮಾಡುವ ವಿಶೇಷ ಸಹಾಯಕ ವ್ಯವಸ್ಥೆಯನ್ನೂ ನೀಡಲಾಗಿದೆ.
ಸಾಮಾನ್ಯ ಸ್ಮಾರ್ಟ್‌ಫೋನ್‌ಗಳ ಬೆಲೆ ಮುಖ್ಯವಾಗಿ ಅದರ ಪ್ರೊಸೆಸರ್, ಕ್ಯಾಮೆರಾ, ಡಿಸ್ಪ್ಲೇ, ಬ್ಯಾಟರಿ ಮತ್ತು ಇತರ ತಾಂತ್ರಿಕ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ಐಷಾರಾಮಿ ಫೋನ್‌ಗಳ ಬೆಲೆಯಲ್ಲಿ ತಂತ್ರಜ್ಞಾನದ ಜತೆಗೆ ಚಿನ್ನ, ವಜ್ರ, ಅಪರೂಪದ ಚರ್ಮ, ಕೈಯಿಂದ ಮಾಡಿದ ವಿನ್ಯಾಸ, ಸೀಮಿತ ಉತ್ಪಾದನೆ ಮತ್ತು ವಿಶೇಷ ಸೇವೆಗಳಂತಹ ಅಂಶಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳನ್ನು ಕೇವಲ ಸ್ಮಾರ್ಟ್‌ಫೋನ್‌ಗಳಿಗಿಂತ ಐಷಾರಾಮಿ ವಸ್ತುಗಳಾಗಿಯೂ ಪರಿಗಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




