AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone Offer: ಐಫೋನ್ 18 ರಿಲೀಸ್ ಬೆನ್ನಲ್ಲೇ ಐಫೋನ್ 17 ಪ್ರೊ, ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ

ಹೊಸ ಐಫೋನ್ 18 ಪ್ರೊ ಸರಣಿ ಬಿಡುಗಡೆಯಾದ ಬೆನ್ನಲ್ಲೇ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮೇಲೆ ಕ್ರೋಮಾ ವಿಶೇಷ ಆಫರ್ ಘೋಷಿಸಿದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್, ಹಳೆಯ ಐಫೋನ್ ವಿನಿಮಯ ಹಾಗೂ ಎಕ್ಸ್‌ಚೇಂಜ್ ಬೋನಸ್ ಸೇರಿಸಿಕೊಂಡರೆ ಐಫೋನ್ 17 ಪ್ರೊ ₹69,990 ಮತ್ತು ಪ್ರೊ ಮ್ಯಾಕ್ಸ್ ₹74,990ರ ಪರಿಣಾಮಕಾರಿ ಬೆಲೆಗೆ ಸಿಗಬಹುದು.

iPhone Offer: ಐಫೋನ್ 18 ರಿಲೀಸ್ ಬೆನ್ನಲ್ಲೇ ಐಫೋನ್ 17 ಪ್ರೊ, ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ
Iphone 17 Pro And Pro Max
ಮಾಲಾಶ್ರೀ ಅಂಚನ್​
| Edited By: |

Updated on: Sep 14, 2026 | 12:36 PM

Share

ಮುಖ್ಯಾಂಶಗಳು

  • ಐಫೋನ್ 17 ಪ್ರೊ ₹69,990ಕ್ಕೆ ಸಿಗುತ್ತಿದೆಯೇ?
  • ಐಫೋನ್ 17 ಪ್ರೊ ಮ್ಯಾಕ್ಸ್ ಮೇಲೆ ಭರ್ಜರಿ ಆಫರ್
  • ಕ್ರೋಮಾ ಆಫರ್ ಪಡೆಯಲು ಈ ಷರತ್ತುಗಳು ಅನ್ವಯಿಸುತ್ತದೆ

ಆ್ಯಪಲ್‌ ಹೊಸ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಿಂದಿನ ತಲೆಮಾರಿನ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಾಗಿವೆ. ಕ್ರೋಮಾ ಈ ಎರಡೂ ಮಾದರಿಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದ್ದು, ಕೆಲವು ಷರತ್ತುಗಳನ್ನು ಪೂರೈಸಿದರೆ ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಆಫರ್‌ಗಳು ಸೆಪ್ಟೆಂಬರ್ 15ರಿಂದ ಆರಂಭವಾಗಲಿವೆ.

ಐಫೋನ್ 17 ಪ್ರೊನ 256GB ಮಾದರಿಯನ್ನು ಆಫರ್‌ಗಳನ್ನೆಲ್ಲ ಬಳಸಿಕೊಂಡರೆ ₹69,990ರ ಬೆಲೆಗೆ ಖರೀದಿಸಬಹುದು. 512GB ಮಾದರಿಯ ಪರಿಣಾಮಕಾರಿ ಬೆಲೆ 88,49ರ ರೂ. ಆದರೆ ಈ ಬೆಲೆ ನೇರವಾಗಿ ನೀಡಲಾಗುವ ರಿಯಾಯಿತಿ ಅಲ್ಲ. ಬ್ಯಾಂಕ್ ಕ್ಯಾಶ್‌ಬ್ಯಾಕ್‌, ಹಳೆಯ ಐಫೋನ್ ವಿನಿಮಯ ಹಾಗೂ ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ಹಲವು ಪ್ರಯೋಜನಗಳನ್ನು ಒಟ್ಟಿಗೆ ಬಳಸಿದಾಗ ಈ ಬೆಲೆ ಲಭ್ಯವಾಗುತ್ತದೆ.

ಈ ಆಫರ್ ಪಡೆಯಲು ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೂಲಕ ರೂ. 4,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರ ಜತೆಗೆ ಹಳೆಯ ಐಫೋನ್ 15 ಪ್ರೊ ಅನ್ನು ವಿನಿಮಯ ಮಾಡಿದರೆ ಅದರ ಮಾದರಿ ಮತ್ತು ಸ್ಥಿತಿಯನ್ನು ಆಧರಿಸಿ ಗರಿಷ್ಠ 44,500ರವರೆಗೆ ವಿನಿಮಯ ಮೌಲ್ಯ ಸಿಗಬಹುದು. ಇದಕ್ಕೆ ಹೆಚ್ಚುವರಿಯಾಗಿ ರೂ. 12,000 ಎಕ್ಸ್‌ಚೇಂಜ್ ಬೋನಸ್ ಕೂಡ ಲಭ್ಯವಿದೆ. ಹೀಗಾಗಿ ಎಲ್ಲಾ ಪ್ರಯೋಜನಗಳನ್ನು ಸೇರಿಸಿದಾಗ ಐಫೋನ್ 17 ಪ್ರೊನ ಬೆಲೆ ರೂ. 69,990ಕ್ಕೆ ಇಳಿಯುತ್ತದೆ.

ಕ್ರೋಮಾ ವೆಬ್‌ಸೈಟ್‌ನಲ್ಲಿ ಐಫೋನ್ 17 ಪ್ರೊನ 256GB ಮಾದರಿ ₹1,26,490 ಮತ್ತು 512GB ಮಾದರಿ ₹1,45,990ರ ಬೆಲೆಗೆ ಪಟ್ಟಿಯಾಗಿದೆ. ವೆಬ್‌ಸೈಟ್‌ನ ಬೆಲೆಯಲ್ಲಿ ಕೇವಲ ಅನ್ವಯವಾಗುವ ಕ್ಯಾಶ್‌ಬ್ಯಾಕ್ ಅನ್ನು ಪರಿಗಣಿಸಲಾಗಿದೆ.

iPhone Duo Price: ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ಡ್ಯುಯೊ ಬೆಲೆ 1 ಲಕ್ಷ ಹೆಚ್ಚೇಕೆ?

ಇನ್ನು ಐಫೋನ್ 17 ಪ್ರೊ ಮ್ಯಾಕ್ಸ್ ಕೂಡ ಈ ಆಫರ್‌ನ ಭಾಗವಾಗಿದೆ. ಇದರ 256GB ಮಾದರಿಯನ್ನು ಅಂಗಡಿಗಳಲ್ಲಿನ ಆಫರ್‌ಗಳ ಮೂಲಕ 74,990ರ ಪರಿಣಾಮಕಾರಿ ಬೆಲೆಗೆ ಖರೀದಿಸಬಹುದು. 512GB ಮಾದರಿಯ ಪರಿಣಾಮಕಾರಿ ಬೆಲೆ 94,990. ಈ ಬೆಲೆ ಪಡೆಯಲು ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 4,000 ಕ್ಯಾಶ್‌ಬ್ಯಾಕ್‌, ಹಳೆಯ ಐಫೋನ್ 15 ಪ್ರೊ ಮ್ಯಾಕ್ಸ್ ವಿನಿಮಯ ಮತ್ತು 12,000 ಎಕ್ಸ್‌ಚೇಂಜ್ ಬೋನಸ್ ಪಡೆಯಬೇಕಾಗುತ್ತದೆ.

ಐಫೋನ್ 15 ಪ್ರೊ ಮ್ಯಾಕ್ಸ್ ವಿನಿಮಯ ಮಾಡಿದಾಗ ಅದರ ಮಾದರಿ ಮತ್ತು ಸ್ಥಿತಿಯನ್ನು ಆಧರಿಸಿ ಗರಿಷ್ಠ 53,000ರವರೆಗೆ ವಿನಿಮಯ ಮೌಲ್ಯ ಸಿಗಬಹುದು. ಹೀಗಾಗಿ ಎಲ್ಲ ಪ್ರಯೋಜನಗಳನ್ನು ಒಟ್ಟಿಗೆ ಬಳಸಿದಾಗ ಐಫೋನ್ 17 ಪ್ರೊ ಮ್ಯಾಕ್ಸ್​ನ ಬೆಲೆ ₹74,990ಕ್ಕೆ ಇಳಿಯುತ್ತದೆ.

ಒಟ್ಟಿನಲ್ಲಿ, ಹೊಸ ಐಫೋನ್ 18 ಪ್ರೊ ಸರಣಿಯ ಬಿಡುಗಡೆ ನಂತರ ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಖರೀದಿಸಲು ಬಯಸುವವರಿಗೆ ಕ್ರೋಮಾದ ಈ ಆಫರ್‌ ಗಮನ ಸೆಳೆಯುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us