AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಅಕ್ಟೋಬರ್ 16ರಿಂದ ಯುಪಿಐ ಪಾವತಿಗಳಿಗೆ ಎಂಡಿಆರ್ ನಿಯಮಗಳು ಜಾರಿಗೆ ಬರುತ್ತವೆ. 2,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ ಪೇಮೆಂಟ್ ಸ್ವೀಕರಿಸುವ ವ್ಯಾಪಾರಿಗಳು ಶೇ. 0.4ರಷ್ಟು ಎಂಡಿಆರ್ ತೆರಬೇಕಾಗುತ್ತದೆ. ಈ ಎಂಡಿಆರ್ ಹಣವು ಗ್ರಾಹಕರ ಬ್ಯಾಂಕ್ ಅಕೌಂಟ್, ವ್ಯಾಪಾರಿಯ ಬ್ಯಾಂಕ್ ಅಕೌಂಟ್, ಪೇಮೆಂಟ್ ಆ್ಯಪ್ ಮತ್ತು ಪಾರ್ಟ್ನರ್ ಬ್ಯಾಂಕ್ ಈ ನಾಲ್ಕು ಭಾಗಗಳಾಗಿ ಹಂಚಿಕೆಯಾಗುತ್ತದೆ.

ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ
ಪೇಟಿಎಂImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 16, 2026 | 4:52 PM

Share

ನವದೆಹಲಿ, ಸೆಪ್ಟೆಂಬರ್ 16: ಕ್ರೆಡಿಟ್ ಕಾರ್ಡ್​ಗೆ ಇರುವ ರೀತಿಯಲ್ಲಿ ಯುಪಿಐಗೂ ಸರ್ಕಾರ ಎಂಡಿಆರ್ ಶುಲ್ಕ ನೀತಿ ಜಾರಿಗೆ ತರುತ್ತಿದೆ. ಅಕ್ಟೋಬರ್ 15ರಿಂದ ಕೆಲ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ಅನ್ವಯ ಆಗಲಿದೆ. ಎನ್​ಪಿಸಿಐ ನಿಗದಿ ಮಾಡಿರುವ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರಿಂದ ವ್ಯಾಪಾರಿಗೆ ಆಗುವ ಯುಪಿಐ ಪಾವತಿಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಇರುತ್ತದೆ. 2,000 ರೂ ಮೇಲ್ಪಟ್ಟ ಪಾವತಿಗೆ ಶೇ. 0.4ರಷ್ಟು ಶುಲ್ಕ ಅನ್ವಯ ಆಗುತ್ತದೆ. ಪೇಮೆಂಟ್ ಸಿಸ್ಟಂಗಳ ರಕ್ಷಣೆ ಮತ್ತು ಬೆಳವಣಿಗೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಎಂಡಿಆರ್ ಶುಲ್ಕ ಯಾರಿಗೆ ಸಿಗುತ್ತದೆ?

  1. ಗ್ರಾಹಕರ ಬ್ಯಾಂಕ್ ಅಕೌಂಟ್: ಶೇ. 40
  2. ಗ್ರಾಹಕರ ಯುಪಿಐ ಆ್ಯಪ್ (TPAP): ಶೇ. 20
  3. ವರ್ತಕರ ಬ್ಯಾಂಕ್ (Acquirer): ಶೇ. 30
  4. ಗ್ರಾಹಕರ ಯುಪಿಐ ಆ್ಯಪ್​ನ ಪಾರ್ಟ್ನರ್ ಬ್ಯಾಂಕ್ (PSP): ಶೇ. 10

ಉದಾಹರಣೆಗೆ, ನೀವು ದಿನಸಿ ಅಂಗಡಿಗೆ ಹೋಗಿ ವ್ಯಾಪಾರ ಮಾಡಿ 10,000 ರೂ ಹಣ ಪಾವತಿಸುತ್ತೀರಿ. ಫೋನ್​ಪೇ ಮೂಲಕ ಹಣ ಪಾವತಿಸುತ್ತೀರಿ. ದಿನಸಿ ಅಂಗಡಿಯಲ್ಲಿ ಗೂಗಲ್ ಪೇ ಸ್ಯಾನರ್ ಇರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಎಚ್​ಡಿಎಫ್​ಸಿ ಇರುತ್ತದೆ, ವ್ಯಾಪಾರಿಯದ್ದು ಎಸ್​ಬಿಐ ಅಕೌಂಟ್ ಆಗಿರುತ್ತದೆ. ಈಗ ಎಂಡಿಆರ್ ಹೇಗೆ ಹಂಚಿಕೆ ಆಗುತ್ತದೆ ಎಂದು ನೋಡೋಣ.

ಇದನ್ನೂ ಓದಿ: ಯುಪಿಐಗೆ ಎಂಡಿಆರ್: ಉಚಿತ ಟ್ರಾನ್ಸಾಕ್ಷನ್​ಗಳ್ಯಾವುವು, ಶುಲ್ಕ ಇರುವಂಥವು ಯಾವುವು? ಇಲ್ಲಿದೆ ಡೀಟೇಲ್ಸ್

ಹತ್ತು ಸಾವಿರ ರೂ ಪಾವತಿಗೆ ಎಂಡಿಆರ್ 40 ರೂ ಆಗುತ್ತದೆ. ಅದು ಮೇಲಿನ ನಿದರ್ಶನದಲ್ಲಿ ಈ ಕೆಳಕಂಡಂತೆ ಹಂಚಿಕೆ ಆಗಬಹುದು:

  1. ಗ್ರಾಹಕರ ಬ್ಯಾಂಕ್ (ಎಚ್​ಡಿಎಫ್​ಸಿ): 16 ರೂ (ಶೇ. 40)
  2. ವರ್ತಕರ ಬ್ಯಾಂಕ್ (ಎಸ್​ಬಿಐ): 12 ರೂ (ಶೇ. 30)
  3. ಫೋನ್​ಪೆ: 8 ರೂ (ಶೇ 20)
  4. ಫೋನ್​ಪೆ ಪಾರ್ಟ್ನರ್ ಬ್ಯಾಂಕ್: 4 ರೂ (ಶೇ. 10)

ಫೋನ್​ಪೆ ಸ್ವತಂತ್ರ ಬ್ಯಾಂಕ್ ಅಲ್ಲವಾಗಿರುವುದರಿಂದ ಅದು ಪೇಮೆಂಟ್ ಪ್ರೋಸಸ್​ಗೆ ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಜೊತೆ ಪಾರ್ಟ್ನರ್​ಶಿಪ್ ಹೊಂದಿರುತ್ತದೆ. ಶೇ. 10 ಎಂಡಿಆರ್ ಆ ಬ್ಯಾಂಕಿಂಗ್ ಪಾರ್ಟ್ನರ್​ಗೆ ಹೋಗುತ್ತದೆ.

ಎಂಡಿಆರ್ ನಿಯಮಗಳು ಪೇಟಿಎಂಗೆ ಹೆಚ್ಚು ನಿರಾಳ ತಂದಿರುವುದು ಯಾಕೆ?

ಪೇಟಿಎಂ ಬ್ಯಾಂಕಿಂಗ್ ಲೈಸೆನ್ಸ್ ಹೊಂದಿಲ್ಲದಿದ್ದರೂ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ ಪಡೆದಿದೆ. ವ್ಯಾಪಾರಿಗಳ ದೊಡ್ಡ ನೆಟ್ವರ್ಕ್ ರೂಪಿಸಿ, ಅದರ ಪೇಮೆಂಟ್ ಅಗ್ರಿಗೇಟರ್ ಪ್ಲಾಟ್​ಫಾರ್ಮ್​ಗೆ ಜೋಡಿಸಿದೆ. ಅದಕ್ಕಾಗಿ ಎಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ ಮತ್ತು ಯೆಸ್ ಬ್ಯಾಂಕ್​ಗಳೊಂದಿಗೆ ಸಹಭಾಗಿತ್ವ ಪಡೆದಿದೆ.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್, ಮತ್ತಷ್ಟು ಸ್ಪಷ್ಟತೆ; 2,000 ರೂ ಮೇಲ್ಪಟ್ಟ ಪಾವತಿಗೆ ಎಷ್ಟಿರುತ್ತೆ ಶುಲ್ಕ? ಇಲ್ಲಿದೆ ಪೂರ್ಣ ವಿವರ

ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದಾಗ ಶೇ. 30ರಷ್ಟು ಎಂಡಿಆರ್ ಶುಲ್ಕವು ಪೇಟಿಎಂಗೆ ಹೋಗುತ್ತದೆ. ಬ್ಯಾಕೆಂಡ್​ನಲ್ಲಿರುವ ಪಾರ್ಟ್ನರ್ ಬ್ಯಾಂಕ್​ಗೆ ಬಹಳ ಸ್ವಲ್ಪ ಶುಲ್ಕವನ್ನು ಪೇಟಿಎಂ ವತಿಯಿಂದ ಸಂದಾಯವಾಗುತ್ತದೆ. ಆದರೆ ಸಿಂಹಪಾಲು ಪೇಟಿಎಂಗೆ ಬರುತ್ತದೆ. ಹಾಗಾಗಿ, ಗ್ರಾಹಕರು ಪೇಟಿಎಂ ಆ್ಯಪ್ ಬಳಸಿ ವ್ಯಾಪಾರಿಯ ಪೇಟಿಎಂ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಿದರೆ ಶೇ. 50ರಷ್ಟು ಎಂಡಿಆರ್ ಶುಲ್ಕವು ಪೇಟಿಎಂಗೆ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಇ-ಕೆವೈಸಿ ನೆಪದಲ್ಲಿ ಹಣ ವಸೂಲಿ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
ಹನೂರಿನ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನರಕಯಾತನೆ
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್