AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್!

ಬೆಂಗಳೂರಿನಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್!

ಸುಷ್ಮಾ ಚಕ್ರೆ
|

Updated on: Sep 16, 2026 | 11:04 PM

Share

ಭಾರತ ರತ್ನ ಎಂ. ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಂತ ಭಾವುಕರಾದ ಘಟನೆ ನಡೆಯಿತು. ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರು ನಡೆಸಿಕೊಟ್ಟ ಸಂಗೀತ ಕಚೇರಿಯನ್ನು ಆಲಿಸುತ್ತಿದ್ದ ವೇಳೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಬಳಿಕ, ತಾವೇ ಎದ್ದು ಹೋಗಿ ಆ ಇಬ್ಬರು ಗಾಯಕಿಯರನ್ನು ಅಭಿನಂದಿಸಿದರು.

ಬೆಂಗಳೂರು, ಸೆಪ್ಟೆಂಬರ್ 16: ಕರ್ನಾಟಕ ಸಂಗೀತ ಕ್ಷೇತ್ರದ ದಂತಕಥೆ, ಭಾರತ ರತ್ನ ಎಂ. ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅತ್ಯಂತ ಭಾವುಕರಾದ ಘಟನೆ ನಡೆಯಿತು. ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಮರಿಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಅವರು ನಡೆಸಿಕೊಟ್ಟ ಸಂಗೀತ ಕಚೇರಿಯನ್ನು ಆಲಿಸುತ್ತಿದ್ದ ವೇಳೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಬಳಿಕ, ತಾವೇ ಎದ್ದು ಹೋಗಿ ಆ ಇಬ್ಬರು ಗಾಯಕಿಯರನ್ನು ಅಭಿನಂದಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, “ಕರ್ನಾಟಕ ಸಂಗೀತ ಪದ್ಧತಿಯ ಮೂಲ ಜೀವಕೋಶವೇ ಭಕ್ತಿ. ಭಾರತದ ವಿವಿಧ ಭಾಷೆಗಳು ಮತ್ತು ಸಾಂಸ್ಕೃತಿಕ ಧಾರೆಗಳನ್ನು ಒಂದೆಡೆ ಜೋಡಿಸುವ ಅದ್ಭುತ ಶಕ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಗಾಯನಕ್ಕಿತ್ತು” ಎಂದು ಬಣ್ಣಿಸಿದರು. ಮಹಾತ್ಮ ಗಾಂಧೀಜಿಯವರಿಗಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಹರಿ ತುಮ್ ಹರೋ’ ಭಜನೆಯ ಸನ್ನಿವೇಶವನ್ನು ಸ್ಮರಿಸಿದ ಸಚಿವೆ ನಿರ್ಮಲಾ ಸೀತಾರಾಮನ್ “ಆ ಭಜನೆಯ ಸರಿಯಾದ ಉಚ್ಚಾರಣೆಯನ್ನು ಕಲಿಯಲು ಸುಬ್ಬುಲಕ್ಷ್ಮಿ ಅವರು ಇಡೀ ರಾತ್ರಿ ಶ್ರಮಿಸಿದ್ದರು. ಗಾಂಧೀಜಿ ಕೂಡ ಸುಬ್ಬುಲಕ್ಷ್ಮಿ ಅವರ ಕಂಠದಲ್ಲಿ ಈ ಭಜನೆಯನ್ನು ಕೇಳಲು ಬಯಸುತ್ತಿದ್ದರು” ಎಂದು ಹೇಳಿದರು.

 

ಇನ್ನಷ್ಟು ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us