AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ

ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ

ರಾಜೇಶ್ ದುಗ್ಗುಮನೆ
|

Updated on: Sep 17, 2026 | 8:34 AM

Share

ಬಿಗ್ ಬಾಸ್ ಮನೆಯಲ್ಲಿ ಅವಿನಾಶ್ ಹಾಗೂ ಮಾಡ್ರನ್ ಮಹಾಕವಿ ಮಂಜು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕಿಚನ್ ಏರಿಯಾದಲ್ಲಿ ಶುರುವಾದ ಆಹಾರ ಮತ್ತು ವ್ಯಕ್ತಿತ್ವದ ವಿಚಾರ, ವೈಯಕ್ತಿಕ ನಿಂದನೆಗೆ ತಿರುಗಿ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಈ ಗಲಾಟೆಗೆ ವಾರಾಂತ್ಯದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಕ್ಲಾಸ್ ತಗೆದುಕೊಳ್ಳಲಿದ್ದಾರೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಸ್ಪರ್ಧಿಗಳಾದ ಅವಿನಾಶ್ ಹಾಗೂ ಮಾಡ್ರನ್ ಮಹಾಕವಿ ಮಂಜು ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಪ್ರೋಮೋದ ಆರಂಭದಲ್ಲಿ ಕಿಚನ್ ಹಾಗೂ ಊಟದ ಮೇಜಿನ ಬಳಿ ನಡೆಯುವ ಸಂಭಾಷಣೆಯಿಂದ ಈ ಗಲಾಟೆ ಉದ್ಭವಿಸಿದೆ. ಆಹಾರ ಮತ್ತು ವ್ಯಕ್ತಿತ್ವದ ಕುರಿತು ನಡೆದ ಮಾತಿನ ಚಕಮಕಿ, ನಂತರ ವೈಯಕ್ತಿಕ ನಿಂದನೆಗೆ ತಿರುಗಿದೆ. ಮಂಜು ಮತ್ತು ಅವಿನಾಶ್ ಪರಸ್ಪರ ಅತಿ ಹತ್ತಿರ ಬಂದು ಕೆರಳಿಸುವಂತೆ ಮಾತನಾಡಿದ್ದು, ಅವಿನಾಶ್ ತಮ್ಮ ಕೈಯಲ್ಲಿರುವ ಬಾಟಲಿಯನ್ನು ಕುಟ್ಟಿದ್ದಾರೆ. ಪ್ರತಿದಿನ ರಂಗೇರುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಈ ಜಗಳ ಯಾವ ಹಂತ ತಲುಪಲಿದೆ ಮತ್ತು ಈ ವಾರದ ‘ಕಿಚ್ಚನ ಪಂಚಾಯಿತಿ’ಯಲ್ಲಿ ಸುದೀಪ್ ಅವರು ಈ ಗಲಾಟೆಗೆ ಹೇಗೆ ಕ್ಲಾಸ್ ತಗೆದುಕೊಳ್ಳಲಿದ್ದಾರೆ ಎಂಬುದನ್ನು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us