AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ.ನರಸೀಪುರ ಪ್ರಕರಣ: ತಾನೇ ಯೂಟ್ಯೂಬರ್​ಗಳನ್ನು ಕರೆಸಿಕೊಂಡು ವಿಡಿಯೋ ಮಾಡಿಸಿ ಅವರ ವಿರುದ್ಧವೇ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!

ಟಿ.ನರಸೀಪುರ ಪ್ರಕರಣ: ತಾನೇ ಯೂಟ್ಯೂಬರ್​ಗಳನ್ನು ಕರೆಸಿಕೊಂಡು ವಿಡಿಯೋ ಮಾಡಿಸಿ ಅವರ ವಿರುದ್ಧವೇ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!

ರಾಮ್​, ಮೈಸೂರು
| Edited By: |

Updated on: Sep 17, 2026 | 9:56 AM

Share

ಟಿ.ನರಸೀಪುರ ಇನ್ಸ್​ಪೆಕ್ಟರ್ ಧನಂಜಯ್ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ವಿಡಿಯೋ ಚಿತ್ರೀಕರಣ ಮಾಡಲು ಇನ್ಸ್​ಪೆಕ್ಟರ್ ಧನಂಜಯ್ ಅವರೇ ಸೂಚಿಸಿದ್ದರು ಎಂದು ಯೂಟ್ಯೂಬರ್ ಮಂಜು ಆರೋಪಿಸಿದ್ದಾರೆ. ವಿವಾದದ ಬಳಿಕ, ವಿಡಿಯೋ ಎಡಿಟ್ ಮಾಡಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಮಂಜು ವಿರುದ್ಧವೇ ಇನ್ಸ್​ಪೆಕ್ಟರ್ ಧನಂಜಯ್ ಎಫ್‌ಐಆರ್ ದಾಖಲಿಸಿದ್ದಾರೆ.

ಮೈಸೂರು, ಸೆಪ್ಟೆಂಬರ್ 17: ಟಿ.ನರಸೀಪುರ ಇನ್ಸ್​ಪೆಕ್ಟರ್ ಧನಂಜಯ್ ವಿವಾದಿತ ಹೇಳಿಕೆಯ ವಿಡಿಯೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಗಣಪತಿ ಮೆರವಣಿಗೆ ಸಂಬಂಧ ಇನ್ಸ್​ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್ ಆಗಿ ದೊಡ್ಡ ವಿವಾದ ಸೃಷ್ಟಿಸಿತ್ತು. ಈ ವಿಡಿಯೋ ಚಿತ್ರೀಕರಣ ಮಾಡಿದ್ದ ಯೂಟ್ಯೂಬರ್ ಮಂಜು ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ಆದರೆ, ತಮಗೆ ಆಹ್ವಾನ ನೀಡಿದ್ದು ಮತ್ತು ವಿಡಿಯೋ ಚಿತ್ರೀಕರಣಕ್ಕೆ ಸೂಚಿಸಿದ್ದು ಇನ್ಸ್​ಪೆಕ್ಟರ್ ಧನಂಜಯ್ ಅವರೇ ಎಂದು ಮಂಜು ಗಂಭೀರ ಆರೋಪ ಮಾಡಿದ್ದಾರೆ. ಕಾನ್ಸ್​ಟೇಬಲ್ ಯಶ್ವಂತ್ ಮೂಲಕ ತಮ್ಮನ್ನು ಠಾಣೆಗೆ ಕರೆಸಿ, ಗಣಪತಿ ವಿಸರ್ಜನೆ ಸಂಬಂಧ ನಡೆದ ಚರ್ಚೆಗಳನ್ನು ಚಿತ್ರೀಕರಿಸಲು ಹೇಳಿದ್ದರು ಎಂದು ಮಂಜು ಸ್ಪಷ್ಟಪಡಿಸಿದ್ದಾರೆ. ಮಸೀದಿ ವಿಚಾರವೂ ಚರ್ಚೆಗೆ ಬಂದಿತ್ತು. ತಾವು ಅಪ್ಲೋಡ್ ಮಾಡುವಾಗ ಇನ್ಸ್​ಪೆಕ್ಟರ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ, ಅಥವಾ ವಿಡಿಯೋ ಅಪ್ಲೋಡ್ ಮಾಡದಂತೆ ಎಚ್ಚರಿಕೆ ನೀಡಿಲ್ಲ ಎಂದು ಮಂಜು ಹೇಳಿದ್ದಾರೆ.

ಇದೇ ವಿಡಿಯೋ ಆಧಾರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಇನ್ಸ್​ಪೆಕ್ಟರ್ ಧನಂಜಯ್ ಈಗ ತಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ತಮ್ಮ ತಪ್ಪನ್ನು ಮುಚ್ಚಿಹಾಕಲು ಇನ್ಸ್​ಪೆಕ್ಟರ್ ಯತ್ನಿಸುತ್ತಿದ್ದಾರೆ ಎಂದು ಮಂಜು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More