AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ಶುರುವಾಯ್ತಾ ‘ಕರಾವಳಿ’ ವಿವಾದ?

ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ಶುರುವಾಯ್ತಾ ‘ಕರಾವಳಿ’ ವಿವಾದ?

ಮದನ್​ ಕುಮಾರ್​
|

Updated on: Jul 07, 2026 | 9:22 PM

Share

‘ಕರಾವಳಿ’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಟ್ರೇಲರ್​ನಲ್ಲಿ ಪ್ರಜ್ವಲ್ ಧ್ವನಿ ಕೇಳಿಸಿಲ್ಲ. ಸಂಭಾವನೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಪ್ರಜ್ವಲ್ ಡಬ್ಬಿಂಗ್ ಮಾಡಿಲ್ಲವೇ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ನಿರ್ದೇಶಕ, ನಿರ್ಮಾಪಕ ಗುರುದತ್ ಗಾಣಿಗ ನೀಡಿದ ಸ್ಪಷ್ಟನೆ ಇಲ್ಲಿದೆ.

ಪ್ರಜ್ವಲ್ ದೇವರಾಜ್ ಅವರು ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿರುವುದು ಮಾತ್ರವಲ್ಲದೇ ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಅವರು ಡಬ್ಬಿಂಗ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಟ್ರೇಲರ್​ನಲ್ಲಿ ಕೂಡ ಪ್ರಜ್ವಲ್ ಅವರ ಧ್ವನಿ ಕೇಳಿಸಿಲ್ಲ. ಸಂಭಾವನೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಪ್ರಜ್ವಲ್ ಅವರು ಡಬ್ಬಿಂಗ್ ಮಾಡಿಲ್ಲವೇ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ನಿರ್ದೇಶಕ, ನಿರ್ಮಾಪಕ ಗುರುದತ್ ಗಾಣಿಗ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ರೂಪಾಯಿ ಸಂಭಾವನೆ ಮಾತನಾಡಿದ್ದೆವು. ಈಗಾಗಲೇ ಒಂದು ಕೋಟಿ ರೂಪಾಯಿ ಕೊಟ್ಟಿದ್ದೇವೆ. ಇನ್ನೂ 25 ಲಕ್ಷ ರೂಪಾಯಿ ಬಾಕಿ ಇದೆ. ಅದನ್ನು ಕೊಡುತ್ತೇವೆ ಅಂತ ಮಾತನಾಡಿದ್ದೇವೆ. ಅವರು ಕೂಡ ಸರಿ ಅಂತ ಒಪ್ಪಿಕೊಂಡಿದ್ದಾರೆ. ಆದರೆ ಹೊಸ ಸಮಸ್ಯೆ ಯಾಕೆ ಶುರುವಾಗಿದೆ ಎಂಬುದು ಗೊತ್ತಿಲ್ಲ. ಟ್ರೇಲರ್ ಆದಮೇಲೆ ಡಬ್ಬಿಂಗ್ ಮಾಡಿ, ಉಳಿದಿದ್ದನ್ನು ನಾಲ್ಕು ಗೋಡೆ ನಡುವೆ ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತ ಅವರಿಗೆ ಹೇಳಿದ್ದೇವೆ. ಆದರೂ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ’ ಎಂದು ಗುರುದತ್ ಗಾಣಿಗ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us