AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಕಟೌಟ್, ಬಿಜಿಎಂ... ಸಿನಿಮಾ ಸ್ಟೈಲ್​ನಲ್ಲಿ ಸಂಜು ಸ್ಯಾಮ್ಸನ್ ಆಗಮನ

VIDEO: ಕಟೌಟ್, ಬಿಜಿಎಂ… ಸಿನಿಮಾ ಸ್ಟೈಲ್​ನಲ್ಲಿ ಸಂಜು ಸ್ಯಾಮ್ಸನ್ ಆಗಮನ

ಝಾಹಿರ್ ಯೂಸುಫ್
|

Updated on:Nov 19, 2025 | 11:32 AM

Share

IPL 2026 Sanju Samson: ಜೈಲರ್ ಮೂವಿ ಬಿಜಿಎಂ, ಕಟೌಟ್​ನೊಂದಿಗೆ ರಾರಾಜಿಸಿರುವ ಈ ವಿಡಿಯೋ ತುಣುಕಿನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಹ ಬಳಸಲಾಗಿದೆ. ಇದೀಗ ಸಂಜು ಸ್ಯಾಮ್ಸನ್ ಅವರ ಸಿಎಸ್​ಕೆ ಎಂಟ್ರಿಯ ವಿಡಿಯೋದೊಂದಿಗೆ ಐಪಿಎಲ್ 2026 ರಲ್ಲೂ ಅವರು 11 ನಂಬರ್​ನ ಜೆರ್ಸಿ ಧರಿಸಿ ಕಣಕ್ಕಿಳಿಯುವುದು ಖಚಿತವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸಂಜು ಸ್ಯಾಮ್ಸನ್ ಧರಿಸಲಿರುವ ಜೆರ್ಸಿ ನಂಬರ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ಅನಾವರಣಗೊಳಿಸಿದೆ. ಅದು ಕೂಡ ಥೇಟ್ ಸಿನಿಮಾ ಸ್ಟೈಲ್​ನಲ್ಲಿ. ಐಪಿಎಲ್​ 2026 ರಿಟೈನ್ ಪ್ರಕ್ರಿಯೆಗೂ ಮು್ನ್ನ ಸಿಎಸ್​ಕೆ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿಕೊಂಡಿತ್ತು.

ಸ್ವಾಪ್ ಡೀಲ್​ನಲ್ಲಿ ನಡೆದ ಈ ಟ್ರೇಡಿಂಗ್​ನಲ್ಲಿ ಸಿಎಸ್​ಕೆ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿದ್ದರು. ಅದರಂತೆ ಮುಂಬರುವ ಐಪಿಎಲ್​ನಲ್ಲಿ ಸ್ಯಾಮ್ಸನ್ ಯೆಲ್ಲೋ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಜೆರ್ಸಿ ಅನಾವರಣದ ವಿಡಿಯೋವೊಂದನ್ನು ಸಿಎಸ್​ಕೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಂಜು ಸ್ಯಾಮ್ಸನ್ ಅವರ ಆಪ್ತನಾಗಿರುವ ಮಲಯಾಳಂ ಚಿತ್ರನಟ/ನಿರ್ದೇಶಕ ಬೆಸಿಲ್ ಜೋಸೆಫ್ ಕೂಡ ಕಾಣಿಸಿಕೊಂಡಿದ್ದಾರೆ.

ಜೈಲರ್ ಮೂವಿ ಬಿಜಿಎಂ, ಕಟೌಟ್​ನೊಂದಿಗೆ ರಾರಾಜಿಸಿರುವ ಈ ವಿಡಿಯೋ ತುಣುಕಿನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಹ ಬಳಸಲಾಗಿದೆ. ಇದೀಗ ಸಂಜು ಸ್ಯಾಮ್ಸನ್ ಅವರ ಸಿಎಸ್​ಕೆ ಎಂಟ್ರಿಯ ವಿಡಿಯೋದೊಂದಿಗೆ ಐಪಿಎಲ್ 2026 ರಲ್ಲೂ ಅವರು 11 ನಂಬರ್​ನ ಜೆರ್ಸಿ ಧರಿಸಿ ಕಣಕ್ಕಿಳಿಯುವುದು ಖಚಿತವಾಗಿದೆ.

 

Published on: Nov 19, 2025 11:31 AM