AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಹಬ್ಬದಂದೇ ದಿನೇಶ್ ಕಾರ್ತಿಕ್ ಮನೆಗೆ ಪುಟ್ಟ ದೇವತೆಯ ಆಗಮನ

Dinesh Karthik daughter: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ ಯುಗಾದಿಯಂದು ಪುತ್ರಿ ರಹಾಳನ್ನು ಸ್ವಾಗತಿಸಿದ್ದಾರೆ. ಈ ಸಿಹಿ ಸುದ್ದಿಯನ್ನು ದಿನೇಶ್ ಕಾರ್ತಿಕ್ ಸ್ವತಃ ಹಂಚಿಕೊಂಡಿದ್ದಾರೆ. ಆರ್ ಸಿಬಿ ಕೋಚ್ ಆಗಿರುವ ಕಾರ್ತಿಕ್, ಕುಟುಂಬಕ್ಕೆ ಹೊಸ ಸದಸ್ಯೆ ಸೇರ್ಪಡೆಯಾದ ಸಂತಸದಲ್ಲಿದ್ದಾರೆ. ಈ ಹಿಂದೆ ಅವಳಿ ಗಂಡು ಮಕ್ಕಳಿಗೆ ತಂದೆಯಾಗಿದ್ದ ಡಿಕೆ, ಇದೀಗ ಮಗಳ ಆಗಮನದಿಂದ ಕುಟುಂಬ ಸಂಪೂರ್ಣವಾಗಿದೆ.

ಯುಗಾದಿ ಹಬ್ಬದಂದೇ ದಿನೇಶ್ ಕಾರ್ತಿಕ್ ಮನೆಗೆ ಪುಟ್ಟ ದೇವತೆಯ ಆಗಮನ
Dinesh Karthik
ಪೃಥ್ವಿಶಂಕರ
|

Updated on:Mar 19, 2026 | 3:11 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಮನೆಗೆ ಯುಗಾದಿ ಹಬ್ಬದಂದೇ ಪುಟ್ಟ ದೇವತೆಯ ಆಗಮನವಾಗಿದೆ. ದಿನೇಶ್ ಕಾರ್ತಿಕ್ ಅವರ ಮಡದಿ ದೀಪಿಕಾ ಪಳ್ಳಿಕಲ್ (Deepika Pallikal) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮಗಳ ಹೆಸರನ್ನು ಬಹಿರಂಗಪಡಿಸಿರುವ ಕಾರ್ತಿಕ್, ಪುಟ್ಟ ಕಂದಮ್ಮನಿಗೆ ‘ರಾಹ’ (Raaha) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

ಮೇಲೆ ಹೇಳಿದಂತೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್ ಕಾರ್ತಿಕ್, ಕೆಲವು ದಿನಗಳ ಹಿಂದೆ ತಂಡದೊಂದಿಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆರ್​ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ದಿನೇಶ್ ಕಾರ್ತಿಕ್ ಯುವ ಆಟಗಾರರಿಗೆ ಬ್ಯಾಟಿಂಗ್ ಟಿಪ್ಸ್ ನೀಡುತ್ತಿರುವುದನ್ನು ಕಾಣಬಹುದು. ಅಂದರೆ ಮಗುವಿನ ನಿರೀಕ್ಷೆಯ ನಡುವೆಯೂ ತಮ್ಮ ಕರ್ತವ್ಯ ಮರೆಯದ ಕಾರ್ತಿಕ್, ಆರ್​ಸಿಬಿಯ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಗಳ ಆಗಮನದಿಂದಾಗಿ ಕಾರ್ತಿಕ್, ಕುಟುಂಬದೊಂದಿಗೆ ಇದ್ದು, ಆ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.

View this post on Instagram

A post shared by Dinesh Karthik (@dk00019)

ಎರಡನೇ ಬಾರಿಗೆ ತಂದೆಯಾದ ಡಿಕೆ

ಎಲ್ಲರಿಗೂ ತಿಳಿದಿರುವಂತೆ ಇದು ದಿನೇಶ್ ಕಾರ್ತಿಕ್ ಅವರ ಎರಡನೇ ಮದುವೆ. ಮೊದಲ ಮಡದಿ ದಿನೇಶ್ ಕಾರ್ತಿಕ್​​ಗೆ ವಿಚ್ಛೇದನ ನೀಡಿ, ಟೀಂ ಇಂಡಿಯಾದ ಮಾಜಿ ಆಟಗಾರ ಮುರುಳಿ ವಿಜಯ್ ಅವರನ್ನು ಮದುವೆಯಾಗಿದ್ದರು. ಅದಾದ ಬಳಿಕ ದಿನೇಶ್ ಕಾರ್ತಿಕ್ ಭಾರತದ ಹೆಸರಾಂತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ 2013 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಈ ಜೋಡಿ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು. ಆಗಸ್ಟ್ 18 ರಂದು ಕ್ರಿಶ್ಚಿಯನ್ ವಿಧಿಗಳ ಪ್ರಕಾರ ಮತ್ತು ಆಗಸ್ಟ್ 20 ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆ ನೆರವೇರಿತ್ತು. 2021 ರಲ್ಲಿ, ದಂಪತಿಗೆ ಜಿಯಾನ್ ಮತ್ತು ಕಬೀರ್ ಎಂಬ ಅವಳಿ ಗಂಡು ಮಕ್ಕಳು ಜನಿಸಿದ್ದರು. ಈಗ, ಮಗಳ ಆಗಮನವು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ.

RCB: ವಿವಾದದ ನಡುವೆ ಗುಟ್ಟಾಗಿ ಸಪ್ತಪದಿ ತುಳಿದ ಆರ್‌ಸಿಬಿ ವೇಗಿ ಯಶ್ ದಯಾಳ್

ಆರ್​ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕಾರ್ತಿಕ್

ದೀಪಿಕಾ ಪಳ್ಳಿಕಲ್ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಾರ್ತಿಕ್ ಅವರ ಕ್ರಿಕೆಟ್ ವೃತ್ತಿಜೀವನ ಯಾವಾಗಲೂ ಸುದ್ದಿಯಲ್ಲಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವರ್ಷಗಳ ಕಾಲ ಆಡಿದ್ದ ಕಾರ್ತಿಕ್ ಫಿನಿಷರ್ ಆಗಿ ಹೆಸರುವಾಸಿಯಾಗಿದ್ದರು. ನಿವೃತ್ತಿಯ ನಂತರ ಇದೇ ಆರ್​ಸಿಬಿ ತಂಡದ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಂಡಿದ್ದ ಕಾರ್ತಿಕ್ 2025 ರ ಐಪಿಎಲ್​ನಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉಳಿದಂತೆ ಕಾರ್ತಿಕ್ ಟೀಮ್ ಇಂಡಿಯಾ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದು, 3,463 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Thu, 19 March 26

Follow Us