AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ರನ್​ಗಳ ರೋಚಕ ಹೋರಾಟ: ರಣರೋಚಕ ಪಂದ್ಯದೊಂದಿಗೆ CPL​ ಶುರು

Caribbean Premier League 2026: ಸಿಪಿಎಲ್ 2026ರ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್​ಮೆನ್ ತಂಡವು 20 ಓವರ್​ಗಳಲ್ಲಿ 167 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ ವಿನ್ನಿಂಗ್ ರನ್ ಗಳಿಸಿ ರೋಚಕ ಜಯ ಸಾಧಿಸಿದೆ.

6 ರನ್​ಗಳ ರೋಚಕ ಹೋರಾಟ: ರಣರೋಚಕ ಪಂದ್ಯದೊಂದಿಗೆ CPL​ ಶುರು
Cpl 2026Image Credit source: CPL
ಝಾಹಿರ್ ಯೂಸುಫ್
|

Updated on: Aug 08, 2026 | 12:35 PM

Share

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಗೆ ಚಾಲನೆ ದೊರೆತಿದೆ. ಅದು ಸಹ ರಣರೋಚಕ ಪಂದ್ಯದೊಂದಿಗೆ ಎಂಬುದು ವಿಶೇಷ. ಕಿಂಗ್ಸ್​ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಜಮೈಕಾ ಕಿಂಗ್ಸ್​ಮೆನ್ ಹಾಗೂ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ನಾಯಕ ಫ್ಯಾಬಿಯನ್ ಅಲೆನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್​ಮೆನ್ ತಂಡದ ಪರ ಆರಂಭಿಕ ದಾಂಡಿಗ ರೀಝ ಹೆಂಡ್ರಿಕ್ಸ್ 25 ಎಸೆತಗಳಲ್ಲಿ 42 ರನ್ ಚಚ್ಚಿದರು. ಇನ್ನು ನಾಯಕ ರೋವ್​ಮನ್ ಪೊವೆಲ್ 47 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಜಮೈಕಾ ಕಿಂಗ್ಸ್ ಪಡೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.

168 ರನ್​ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಟಿಮ್ ರಾಬಿನ್ಸನ್ 40 ರನ್ ಬಾರಿಸಿದರೆ, ತಜಿಂದರ್ ದಿಲ್ಲೋನ್ 37 ಎಸೆತಗಳಲ್ಲಿ 62 ರನ್ ಚಚ್ಚಿದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

6 ರನ್​ಗಳ ರೋಚಕ ಹೋರಾಟ:

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು ಬೇಕಿದದ್ದು ಕೇವಲ 6 ರನ್​ಗಳು ಮಾತ್ರ. ಆದರೆ ಅಂತಿಮ ಓವರ್ ಎಸೆದ ಹುನೈನ್ ಶಾ ಪಂದ್ಯವನ್ನು ರೋಚಕದತ್ತ ಕೊಂಡೊಯ್ದರು. ಮಾರಕ ದಾಳಿ ಸಂಘಟಿಸಿದ ಹುನೈನ್ ಮೊದಲೆರಡು ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್​ಗಳು ಮಾತ್ರ.

ಮೂರನೇ ಎಸೆತದಲ್ಲಿ ಜಹ್ಮರ್ ಹ್ಯಾಮಿಲ್ಟನ್ (3) ವಿಕೆಟ್ ಪಡೆದರು. ನಾಲ್ಕನೇ ಎಸೆತದಲ್ಲಿ ಉಸಾಮ ಮಿರ್ (0) ವಿಕೆಟ್ ಕಬಳಿಸಿದರು. ಪರಿಣಾಮ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ 2 ಎಸೆತಗಳಲ್ಲಿ 3 ರನ್​ಗಳು ಬೇಕಿದ್ದವು.

ಐದನೇ ಎಸೆತದಲ್ಲಿ ಹುನೈನ್ ಶಾ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಆದರೆ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಶಮರ್ ಸ್ಪ್ರಿಂಗರ್ 2 ರನ್ ಕಲೆಹಾಕುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ರೋಚಕ ಗೆಲುವು ದಾಖಲಿಸಿತು. ಇತ್ತ ಜಮೈಕಾ ಕಿಂಗ್ಸ್​ಮೆನ್ ತಂಡವು ವಿರೋಚಿತ ಹೋರಾಟದೊಂದಿಗೆ ಕೇವಲ 2 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು.

ಜಮೈಕಾ ಕಿಂಗ್ಸ್​ಮೆನ್ ಪ್ಲೇಯಿಂಗ್ 11 : ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಶಕ್ಕೆರೆ ಪ್ಯಾರಿಸ್ , ಕೀಸಿ ಕಾರ್ಟಿ , ರೋವ್‌ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಹಸನ್ ಖಾನ್ , ಕೀಮೊ ಪಾಲ್ , ಹುನೈನ್ ಶಾ , ವಿಟೆಲ್ ಲಾವೆಸ್ , ಜೀವರ್ ರಾಯಲ್.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು!

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11: ಎವಿನ್ ಲೆವಿಸ್ , ರಹಕೀಮ್ ಕಾರ್ನ್‌ವಾಲ್ , ಟಿಮ್ ರಾಬಿನ್ಸನ್ , ಜಹ್ಮರ್ ಹ್ಯಾಮಿಲ್ಟನ್ (ವಿಕೆಟ್ ಕೀಪರ್ ), ತಜಿಂದರ್ ಧಿಲ್ಲೋನ್ , ಕರೀಮಾ ಗೋರ್ , ಫ್ಯಾಬಿಯನ್ ಅಲೆನ್ (ನಾಯಕ) , ಶಮರ್ ಸ್ಪ್ರಿಂಗರ್ , ಉಸಾಮಾ ಮೀರ್ , ಅಲ್ಜಾರಿ ಜೋಸೆಫ್ , ಜೇಡನ್ ಸೀಲ್ಸ್.

Follow Us
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
: ಕಂದಕಕ್ಕೆ ಉರುಳಿದ ಬಸ್, 7 ಪ್ರಯಾಣಿಕರು ಸಾವು
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಹಾವನೂರು ಬಡಾವಣೆ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ!
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಜೋರಾದ ಖಾತೆ ಹಂಚಿಕೆ ಕಸರತ್ತು: ಸಿದ್ದರಾಮಯ್ಯ ಜೊತೆ ಡಿಕೆಶಿ ಗಂಭೀರ ಚರ್ಚೆ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಮೆಟ್ರೋ ಕಾಮಗಾರಿ ವೇಳೆ ನೆಲಕ್ಕೆ ಬಿದ್ದ ಬೃಹತ್ ಶೀಟ್: ತಪ್ಪಿದ ಭಾರಿ ದುರಂತ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ಕರ್ನಾಟಕ ಎಸ್‌ಐಆರ್ ಅವಧಿ ಆಗಸ್ಟ್ 8ರ ಬದಲು ಆಗಸ್ಟ್ 17ರ ತನಕ ವಿಸ್ತರಣೆ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಬಿಗ್​​ಬಾಸ್​ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ: ಮಾಜಿ ​​ಸ್ಪರ್ಧಿಗಳ ಕೆಲಸವೇನು?
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
ಒಡಿಶಾದಲ್ಲಿ ಕೈಮಗ್ಗದ ಬಟ್ಟೆ ಖರೀದಿಸಿದ ಪ್ರಲ್ಹಾದ್ ಜೋಶಿ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಹೀಗೆಂದರಂತೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ