AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಕ್ರಿಕೆಟ್ ಲೋಕವೇ ಫಿದಾ!

London Spirit vs MI London: ದಿ ಹಂಡ್ರೆಡ್ ಲೀಗ್​ನ 23ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 160 ರನ್ ಕಲೆಹಾಕಿತು. ಈ ಗುರಿಯನ್ನು ಎಂಐ ಲಂಡನ್ ತಂಡವು 94 ಎಸೆತಗಳಲ್ಲಿ ಚೇಸ್ ಮಾಡುವ ಮೂಲಕ 4 ವಿಕೆಟ್​​ಳ ಭರ್ಜರಿ ಜಯ ಸಾಧಿಸಿದೆ.

ವಿಲ್ ಜಾಕ್ಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಕ್ರಿಕೆಟ್ ಲೋಕವೇ ಫಿದಾ!
Will JacksImage Credit source: Skysports
ಝಾಹಿರ್ ಯೂಸುಫ್
|

Updated on: Aug 08, 2026 | 9:01 AM

Share

ಲಾರ್ಡ್ಸ್ ಮೈದಾನದಲ್ಲಿ ನಡೆದ ಲಂಡನ್ ಸ್ಪಿರಿಟ್ ಮತ್ತು ಎಂಐ ಲಂಡನ್ ನಡುವಿನ ರೋಚಕ ಹೈ-ವೋಲ್ಟೇಜ್ ಪಂದ್ಯವು ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಫೀಲ್ಡಿಂಗ್ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಎಂಐ ಲಂಡನ್ ತಂಡದ ಆಲ್‌ರೌಂಡರ್ ವಿಲ್ ಜಾಕ್ಸ್ ಬೌಂಡರಿ ಗೆರೆಯ ಬಳಿ ಪ್ರದರ್ಶಿಸಿದ ಅಪ್ರತಿಮ ಕೌಶಲ್ಯ ಹಾಗೂ ಚುರುಕುತನಕ್ಕೆ ಈಗ ಇಡೀ ಕ್ರೀಡಾಲೋಕವೇ ತಲೆಬಾಗಿದೆ.

ಪಂದ್ಯದ ದಿಕ್ಕನ್ನೇ ಬದಲಿಸಿದ ಆ ಒಂದು ಕ್ಯಾಚ್!

ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್ ತಂಡದ ಆರಂಭಿಕ ಆಟಗಾರ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಬಿರುಸಿನ ಅರ್ಧಶತಕ ಬಾರಿಸಿ ಎಂಐ ಲಂಡನ್ ತಂಡಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದ್ದರು. ಅಲ್ಲದೆ ಇನ್ನಿಂಗ್ಸ್‌ನ 49ನೇ ಎಸೆತದಲ್ಲಿ ಲೆಗ್-ಸ್ಪಿನ್ನರ್ ನಾಥನ್ ಸೌಥರ್ ಎಸೆತವನ್ನು ಪ್ರಿಟೋರಿಯಸ್ ಲಾಂಗ್-ಆನ್ ಬೌಂಡರಿಯತ್ತ ಜೋರಾಗಿ ಸಿಕ್ಸರ್‌ಗೆಂದು ಅಟ್ಟಿದರು.

ಬೌಂಡರಿ ಲೈನ್‌ನಲ್ಲಿ ನಿಂತಿದ್ದ ವಿಲ್ ಜಾಕ್ಸ್ ಗಾಳಿಯಲ್ಲಿ ಅದ್ಭುತವಾಗಿ ಜಂಪ್ ಮಾಡಿ ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ ತಮ್ಮ ದೇಹದ ಸಮತೋಲನ ತಪ್ಪಿ ಬೌಂಡರಿ ಗೆರೆಯ ಆಚೆಗೆ ಬೀಳುತ್ತಿರುವುದನ್ನು ಅರಿತ ಅವರು, ತಕ್ಷಣವೇ ಸಮಯಪ್ರಜ್ಞೆ ಮೆರೆದು ಚೆಂಡನ್ನು ಮೈದಾನದ ಒಳಕ್ಕೆ ಚೆಂಡನ್ನು ಎಸೆದರು. ಅಷ್ಟಕ್ಕೆ ನಿಲ್ಲದ ಜಾಕ್ಸ್, ತಕ್ಷಣವೇ ಮೈದಾನದ ಒಳಕ್ಕೆ ಬಂದು ಡೈವ್ ಹೊಡೆದು ಎಡಗೈಯಿಂದ ಸಿಂಗಲ್ ಹ್ಯಾಂಡ್ ಮೂಲಕ ಅದ್ಭುತವಾಗಿ ಚೆಂಡನ್ನು ಹಿಡಿದರು.

ವಿಲ್ ಜಾಕ್ಸ್ ಅವರ ಈ ಅಸಾಧಾರಣ ಫೀಲ್ಡಿಂಗ್ ಪ್ರದರ್ಶನವನ್ನು ಕಂಡ ಕ್ರೀಡಾಭಿಮಾನಿಗಳು ಮತ್ತು ಕಾಮೆಂಟೇಟರ್‌ಗಳು ಮೂಕವಿಸ್ಮಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾಚ್‌ನ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದನ್ನು ದಿ ಹಂಡ್ರೆಡ್ ಟೂರ್ನಿಯ “ಕ್ಯಾಚ್ ಆಫ್ ದಿ ಸೀಸನ್” ಎಂದು ಕರೆಯಲಾಗುತ್ತಿದೆ.

ಎಂಐ ಲಂಡನ್‌ಗೆ ಭರ್ಜರಿ ಜಯ:

ಪ್ರಿಟೋರಿಯಸ್ ವಿಕೆಟ್ ಪತನದ ನಂತರ ಲಂಡನ್ ಸ್ಪಿರಿಟ್ ತಂಡವನ್ನು 160 ರನ್‌ಗಳಿಗೆ ನಿಯಂತ್ರಿಸುವಲ್ಲಿ ಎಂಐ ಲಂಡನ್ ಯಶಸ್ವಿಯಾಯಿತು. ಬಳಿಕ ಬ್ಯಾಟಿಂಗ್ ಮಾಡಿದ ಎಮ್‌ಐ ಲಂಡನ್ ತಂಡ, ಸಿಕಂದರ್ ರಾಝ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಿಕೋಲಸ್ ಪೂರನ್ ಅವರ ಸಮಯೋಚಿತ ಆಟದ ನೆರವಿನಿಂದ 6 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಎಂಐ ಲಂಡನ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

Follow Us