ದರ್ಶನ್ ಪ್ರಾಣಿ ಪ್ರಿಯನಾಗಲು ಕಾರಣವಾದ ಅಂಶವೇನು ಗೊತ್ತೇ?
ನಟ ದರ್ಶನ್ ಅವರ ಬರ್ತ್ಡೇ ಸಂಭ್ರಮದಲ್ಲಿ, ಅವರ ಪ್ರಾಣಿಪ್ರಿಯತೆ ಎದ್ದು ಕಾಣುತ್ತದೆ. ಅರ್ಜುನ ಆನೆ ನಿಧನದ ನೋವಿನಲ್ಲಿ, ದರ್ಶನ್ ಸ್ಮಾರಕಕ್ಕೆ ಕಲ್ಲುಗಳನ್ನು ನೀಡಿದ್ದರು. ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ, ಅಭಿಮಾನಿಗಳಿಗೂ ಪ್ರೇರಣೆ ನೀಡಿದ್ದಾರೆ. ಮೈಸೂರಿನ ಫಾರ್ಮ್ಹೌಸ್ನಲ್ಲಿ ದನ-ಕುದುರೆ ಸಾಕಾಣಿಕೆ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನು ನಿರಂತರವಾಗಿ ಪೋಷಿಸುತ್ತಿದ್ದಾರೆ.

ನಟ ದರ್ಶನ್ (Darshan) ಅವರಿಗೆ ಇಂದು ಬರ್ತ್ಡೇ. ಫೆಬ್ರವರಿ 16ರನ್ನು ಫ್ಯಾನ್ಸ್ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅವರು ಇಲ್ಲ ಎಂಬ ಕೊರಗಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದನ್ನು ಕಾಣಬಹುದು. ನಟ ದರ್ಶನ್ ಪ್ರಾಣಿ ಪ್ರಿಯರು. ಕಾಡಾನೆ ರಕ್ಷಣೆ ವೇಳೆ ಅರ್ಜುನ ಆನೆ ನಿಧನ ಹೊಂದಿದ್ದ ವಿಚಾರ ಗೊತ್ತೇ ಇದೆ. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು ಎನ್ನಬಹುದು.ದರ್ಶನ್ಗೆ ಘಟನೆ ಬೇಸರ ಮೂಡಿಸಿತ್ತು.ದರ್ಶನ್ಗೆ ಪ್ರಾಣಿಗಳ ಬಗ್ಗೆ ಪ್ರೀತಿ ಮೂಡಲು ವಿಶೇಷ ಕಾರಣವೂ ಇದೆ.
ಆನೆ ಮೃತಪಟ್ಟ ಬಳಿಕ ಯಾರೂ ಆ ಬಗ್ಗೆ ಯೋಚಿಸೋದಿಲ್ಲ. ಆದರೆ, ದರ್ಶನ್ ಹಾಗಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಅರ್ಜುನ ಆನೆಗೆ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡಲು ಕಲ್ಲುಗಳನ್ನು ದರ್ಶನ್ ಕಳುಹಿಸಿದ್ದರು. ಇದು ಅವರ ವಿಶಾಲ ಹೃದಯತೆಯನ್ನು ತೋರಿಸುತ್ತದೆ.
ದರ್ಶನ್ಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ ಮತ್ತು ಇದು ಅನೇಕ ಬಾರಿ ಸಾಬೀತಾಗಿದೆ ಎನ್ನಬಹುದು. ಅವರು ನಟನಾ ತರಬೇತಿ ಪಡೆದು ಬಂದ ನಂತರ ಕೆಲ ವರ್ಷ ಅವರು ಮೈಸೂರಿನಲ್ಲೇ ವಾಸ ಇದ್ದರು. ಆಗ ಅವರು ಸಾಕಷ್ಟು ದನಗಳನ್ನು ಸಾಕಿದ್ದರು. ಆಗ ಅವರು ಹಾಲು ಕರೆದು ಮಾರುತ್ತಿದ್ದರು. ಇದರಿಂದ ಅವರ ಬದಕು ಬದಲಾಯಿತು. ನಿತ್ಯದ ಕೂಳಿಗೆ ವ್ಯವಸ್ಥೆ ಆಯಿತು. ಹೀಗಾಗಿ, ಫಾರ್ಮ್ಹೌಸ್ನಲ್ಲಿ ದನಗಳನ್ನು ಸಾಕಿದ್ದಾರೆ.
ದರ್ಶನ್ ಅವರಿಗೆ ಇತರ ಪ್ರಾಣಿಗಳ ಬಗ್ಗೆಯೂ ಪ್ರೀತಿ ಇದೆ. ಅವರು ಮೈಸೂರು ಮೃಗಾಲಯದಲ್ಲಿ ಹುಲಿ ಹಾಗೂ ಇತರ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಕೊವಿಡ್ ಸಮಯದಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಅವರ ಅಭಿಮಾನಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆದಿದ್ದರು.
ಇದನ್ನೂ ಓದಿ: ‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್ಗೆ ವಿಜಯಲಕ್ಷ್ಮೀ ವಿಶ್
ಮೈಸೂರಿನಲ್ಲಿ ದರ್ಶನ್ ಅವರು ಫಾರ್ಮ್ಹೌಸ್ ಇಟ್ಟುಕೊಂಡಿದ್ದಾರೆ. ಅಲ್ಲಿ ಅವರು ದನ, ಕುದುರೆಗಳನ್ನು ಸಾಕಿದ್ದಾರೆ. ದರ್ಶನ್ ಅವರು ಒಂದು ಕುದುರೆ ಸಾಕಿದ್ದು, ದರ್ಶನ್ ಮೇಲೆ ಆ ಕುದುರೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದೆಯಂತೆ. ಈ ಮೊದಲು ಆ ಬಗ್ಗೆ ಅವರು ಹೇಳಿಕೊಂಡಿದ್ದರು ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



