AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದು, ಅವರಿಗೆ ನ್ಯಾಯಾಲಯದಿಂದ ಸಣ್ಣ ರಿಲೀಫ್ ಸಿಕ್ಕಿದೆ. ಅಮಾನತುಗೊಂಡಿದ್ದ ಅವರ ಗನ್ ಲೈಸೆನ್ಸ್​ಗೆ ಹೈಕೋರ್ಟ್ ಮಾರ್ಚ್ 6ರವರೆಗೆ ಮಧ್ಯಂತರ ತಡೆ ನೀಡಿದೆ. ದರ್ಶನ್ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಾಲಯದ ಈ ಆದೇಶದಿಂದ ನಟನಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ, ಆದರೆ ಅವರು ಇನ್ನೂ ಜೈಲಿನಲ್ಲೇ ಇದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್​​ಗೆ ಕೋರ್ಟ್​​ನಿಂದ ಸಿಕ್ತು ಸಣ್ಣ ರಿಲೀಫ್
ದರ್ಶನ್
Ramesha M
| Edited By: |

Updated on: Feb 23, 2026 | 3:10 PM

Share

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ಅವರು ಒಮ್ಮೆ ಜಾಮೀನು ಪಡೆದಿದ್ದರು. ನಂತರ ಸುಪ್ರೀಂಕೋರ್ಟ್ ಜಾಮೀನನ್ನು ರದ್ದು ಮಾಡಿತ್ತು. ಈಗ ದರ್ಶನ್ ಅವರ ಪರವಾಗಿ ಕೋರ್ಟ್​ ಅಲ್ಲಿ ಆದೇಶ ಒಂದು ಬಂದಿದೆ. ಇದರಿಂದ ಅವರಿಗೆ ಸಣ್ಣ ರಿಲೀಫ್ ಸಿಕ್ಕಿದೆ. ಅಷ್ಟಕ್ಕೂ ದರ್ಶನ್ ಸಲ್ಲಿಕೆ ಮಾಡಿದ್ದ ಅರ್ಜಿ ಏನು? ಕೋರ್ಟ್ ಕೊಟ್ಟ ಆದೇಶ ಏನು? ಆ ಬಗ್ಗೆ ಇಲ್ಲಿದೆ ವಿವರ.

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ A2 ಆಗಿದ್ದಾರೆ. ಅವರಿಗೆ 2024ರಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಸಿಕ್ಕ ಬಳಿಕ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಈ ಗನ್ ಬಳಸಿ ಸಾಕ್ಷಿಗಳಿಗೆ ಬೆದರಿಸಬಹುದೆಂದು ಗನ್ ಲೈಸೆನ್ಸ್ ಅಮಾನತುಪಡಿಸಲಾಗಿತ್ತು. ನಟ ದರ್ಶನ್ ಅವರು ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

‘2008ರಿಂದಲೂ ದರ್ಶನ್ ಲೈಸೆನ್ಸ್ ಇರುವ ಗನ್ ಹೊಂದಿದ್ದಾರೆ. ಜಾಮೀನು ರದ್ದಾದ ಬಳಿಕ ಗನ್ ಸರಂಡರ್ ಮಾಡಲಾಗಿದೆ. ದರ್ಶನ್ ಹೆಸರಿನ ಕಾರಣಕ್ಕೆ ಲೈಸೆನ್ಸ್ ಅಮಾನತುಪಡಿಸಿದ್ದಾರೆ’ ಎಂದು ದರ್ಶನ್ ಪರ ವಕೀಲ ಎಸ್.ಸುನೀಲ್ ಕುಮಾರ್ ವಾದ ಮಾಡಿದರು. ‘ಹೆಸರಿನ ಕಾರಣಕ್ಕಲ್ಲ ಆರೋಪವಿರುವ ಕಾರಣಕ್ಕೆ’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. ಆ ಬಳಿಕ ಗನ್ ಲೈಸೆನ್ಸ್ ಅಮಾನತು ಕ್ರಮಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಮಾರ್ಚ್ 6ರವರೆಗೆ ಮಧ್ಯಂತರ ತಡೆ ಅನ್ವಯ ಆಗಲಿದೆ.

ಇದನ್ನೂ ಓದಿ: ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್

ದರ್ಶನ್ ಅವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಅವರಿಗೆ ಪ್ರಕರಣದಲ್ಲಿ ಸದ್ಯಕ್ಕೆ ಜಾಮೀನು ಸಿಗೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಅವರ ಅಭಿಮಾನಿಗಳು ದರ್ಶನ್​​ ಆಗಮನಕ್ಕೆ ಕಾದಿದ್ದಾರೆ. ಇದರ ಜೊತೆಗೆ ಪ್ರಕರಣದ ವಿಚಾರಣೆ ಕೋರ್ಟ್​​ನಲ್ಲಿ ನಡೆಯುತ್ತಿದ್ದು, ಸಾಕ್ಷಿಗಳ ವಿಚಾರಣೆ ಮಾಡಲಾಗತ್ತಿದೆ. ಅವರು ಜೈಲಿನಿಂದ ಹೊರ ಬಂದರೂ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.