AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವಿತ್ರಾಗೆ ದೊಡ್ಡ ನಿರಾಸೆ; ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

Pavitra Gowda Bail Plea: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಮಧ್ಯಂತರ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಗಳ ಪರೀಕ್ಷೆ ಕಾರಣ ನೀಡಿ 25 ದಿನಗಳ ಜಾಮೀನು ಕೋರಿದ್ದರು. ಆದರೆ, ಕೋರ್ಟ್‌ನ ನಿರಾಕರಣೆಯಿಂದ ಅವರ ಜೈಲುವಾಸ ಮುಂದುವರಿಯಲಿದೆ.

ಪವಿತ್ರಾಗೆ ದೊಡ್ಡ ನಿರಾಸೆ; ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ
ಪವಿತ್ರಾ
ರಮೇಶ್​ ಎಮ್​.
| Edited By: |

Updated on: Feb 16, 2026 | 1:16 PM

Share

ರೇಣುಕಾ ಸ್ವಾಮಿ (Renukaswamy ) ಕೊಲೆ ಕೇಸ್​​ನಲ್ಲಿ ಎ1 ಆಗಿರೋ ಪವಿತ್ರಾ ಗೌಡ ಅವರು ಜಾಮೀನು ಪಡೆಯಬೇಕು ಎಂದು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈಗ ಮಗಳಿಗೆ ಪರೀಕ್ಷೆ ಸಮೀಪಿಸಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್​​ನಲ್ಲಿ ಕೋರಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಜೈಲುವಾಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪವಿತ್ರಾ ಗೌಡ ಅವರು ದರ್ಶನ್ ಆಪ್ತೆ ಎನಿಸಿಕೊಂಡಿದ್ದರು. ಇಬ್ಬರೂ ಲಿವಿನ್ ರಿಲೇಶನ್​ಶಿಪ್​​ನಲ್ಲಿ ಇದ್ದ ಬಗ್ಗೆ ಚಾರ್ಜ್​ಶಿಟ್​​ನಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಕಿರುಕುಳ ನೀಡಿದ್ದ. ಈ ವಿಷಯ ದರ್ಶನ್ ಕಿವಿಗೂ ಬಿತ್ತು. ಹೀಗಾಗಿ, ಆತನನ್ನು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆ ಶೆಡ್​​ನಲ್ಲಿ ಆತನ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ವೇಳೆ ಪವಿತ್ರಾ ಗೌಡ, ದರ್ಶನ್ ಕೂಡ ಸ್ಥಳದಲ್ಲಿ ಇದ್ದರು ಮತ್ತು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆಗಿದ್ದಾರೆ. ಪವಿತ್ರಾಗೆ ಇರೋದು ಎಂದರೆ ಮಗಳು ಮಾತ್ರ. ಅವಳಿಗೆ ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತ ಜಾಮೀನು ನೀಡಿ ಎಂದು ಕೋರ್ಟ್​ ಅಲ್ಲಿ ಮನವಿ ಮಾಡಿದ್ದರು. ಆದರೆ, ಇದನ್ನು ಕೋರ್ಟ್​ ನಿರಾಕರಿಸಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: ಪವಿತ್ರಾ ಮನೆ ಊಟಕ್ಕೆ ಬ್ರೇಕ್: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದ ಹೈಕೋರ್ಟ್

ಈ ಮೊದಲು ಪವಿತ್ರಾ ಅವರು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಜೈಲು ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದರು. ಕೆಲ ದಿನ ಇದಕ್ಕೆ ಅವಕಾಶ ಇತ್ತು. ನಂತರ ಇದನ್ನು ರದ್ದು ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ