AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷನ್ ಕಾರ್ಡ್ ವಿಚಾರಕ್ಕೆ ತಮ್ಮನಿಗೆ ಅಣ್ಣನೇ ಚಾಕು ಹಾಕಿದ್ನಾ? ಒಡವಟ್ಟಿದವರ ದ್ವೇಷದ ಹಿಂದಿರುವ ಕಥೆ ಇಲ್ಲಿದೆ

ಹಾಸನದಲ್ಲಿ ಅಣ್ಣ-ತಮ್ಮಂದಿರ ನಡುವಿನ ಆಸ್ತಿ ಹಾಗೂ ರೇಷನ್ ಕಾರ್ಡ್ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನು ಮಾರಾಟದ ಹಣ ಹಂಚಿಕೆ ಹಾಗೂ ಪಡಿತರ ಚೀಟಿ ಕೇಳಿದ್ದಕ್ಕೆ ಅಣ್ಣ, ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಅಣ್ಣ ಮತ್ತು ಆತನ ಪತ್ನಿ ಜೈಲು ಪಾಲಾಗಿದ್ದಾರೆ.

ರೇಷನ್ ಕಾರ್ಡ್ ವಿಚಾರಕ್ಕೆ ತಮ್ಮನಿಗೆ ಅಣ್ಣನೇ ಚಾಕು ಹಾಕಿದ್ನಾ? ಒಡವಟ್ಟಿದವರ ದ್ವೇಷದ ಹಿಂದಿರುವ ಕಥೆ ಇಲ್ಲಿದೆ
ಅಣ್ಣ, ತಮ್ಮ Image Credit source: tv9 kannada
ಮಂಜುನಾಥ ಕೆಬಿ
| Edited By: |

Updated on: Sep 28, 2026 | 8:09 PM

Share

ಹಾಸನ, ಸೆಪ್ಟೆಂಬರ್​​ 28: ಅವರಿಬ್ಬರು ಒಡಹುಟ್ಟಿದವರು. ಸಾಕಷ್ಟು ಜಮೀನಿದ್ದರೂ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಗೊಂದಲದಿಂದ ಒಂದಷ್ಟು ಜಮೀನು ಮಾರಾಟ ಮಾಡಿ ಹಣ ಹಂಚಿಕೊಳ್ಳುವ ಮಾತುಕತೆ ಮಾಡಿಕೊಂಡಿದ್ದರು. ಆದರೆ ಜಮೀನು ಮಾರಾಟ ಮಾಡಿ ತಿಂಗಳೇ ಕಳೆದರೂ ಅಣ್ಣ, ಮಾತ್ರ ತಮ್ಮನ ಪಾಲು ಕೊಟ್ಟಿರಲಿಲ್ಲ. ಹಣ ಕೇಳಿದರೆ ‘ನೀನು ನಿನ್ನ ಹೆಂಡತಿನಾ ಬಿಟ್ಟು ಬಾ, ಆಗ ಹಣ ಕೊಡುತ್ತೇನೆ’ ಎಂದು ಕುಂಟು ನೆಪ ಹೇಳುತ್ತಿದ್ದನಂತೆ. ಜಮೀನು, ಆಸ್ತಿ ಯಾವುದರ ಬಗ್ಗೆಯೂ ಸರಿಯಾಗಿ ವ್ಯವಹಾರ ಮಾಡುತ್ತಿಲ್ಲ ಎಂದು ತಮ್ಮ ಕೋಪಗೊಂಡಿದ್ದ. ಸೆ. 24ರಂದು ರೇಷನ್ ಕಾರ್ಡ್ ಕೇಳಲು ಹೋಗಿದ್ದ ತಮ್ಮನ ಮೇಲೆ ಅಣ್ಣ ಚಾಕು ಇರಿದಿದ್ದಾನೆ. ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ತಮ್ಮ ಬಳಿಕ ಸಾವನ್ನಪ್ಪಿದ್ದಾನೆ. ಜೀವ ತೆಗೆದ ಅಣ್ಣ ಹಾಗೂ ಪತ್ನಿ ಜೈಲು ಸೇರಿದ್ದಾರೆ.

ನಡೆದಿದ್ದೇನು?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿರುವ ಈ ಭೀಕರ ಹತ್ಯೆ ಕೇಸ್ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಪಡೆಯುವ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ದೇವರಾಜ್ ಹಾಗೂ ರಘು (35) ಸಹೋದರರು ಇಬ್ಬರಿಗೂ ಮದುವೆಯಾಗಿದ್ದು, ಬೇರೆ ಬೆರೆ ವಾಸವಾಗಿದ್ದಾರೆ.

ಇದನ್ನೂ ಓದಿ: ಹಾವೇರಿ: ಆಸ್ತಿ ಜಗಳಕ್ಕೆ ಬಲಿಯಾದ ತಾಯಿ-ಮಗ; ಮಾರಕಾಸ್ತ್ರಗಳಿಂದ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು

ರಘು ಪತ್ನಿ ಕಡೆಯವರು ಹೇಳುವ ಪ್ರಕಾರ ಸಹೋದರರಿಗೆ ಏಳರಿಂದ ಎಂಟು ಎಕರೆ ಜಮೀನು ಇದೆ ಅಂತೆ. ಇದರಲ್ಲಿ ಮೂರು ಎಕರೆ ಭೂಮಿಯನ್ನ ಮಾರಾಟ ಮಾಡಿದ್ದ ಅಣ್ಣ ದೇವರಾಜ್, ಸುಮಾರು 87 ಲಕ್ಷ ರೂ ಹಣವನ್ನ ಒಬ್ಬನ್ನೇ ಇಟ್ಟುಕೊಂಡಿದ್ದನಂತೆ. ರಘು ಹೋಗಿ ಹಣ ಕೇಳಿದರೆ, ‘ನೀನು ಅಂಗವಿಕಲೆಯನ್ನ ಮದುವೆ ಆಗಿದ್ದಿಯಾ, ಅವಳಿಗೆ ಮಕ್ಕಳು ಆಗಿಲ್ಲ. ನಿನಗೆ ಆಸ್ತಿ ಏಕೆ? ಅವಳನ್ನ ಬಿಟ್ಟು ಬಾ ಆಗ ಕೊಡುತ್ತೇನೆ. ಎಂದು ಸಬೂಬು ಹೇಳಿ ಕಳಿಸುತ್ತಿದ್ದನಂತೆ. ಇದರಿಂದ ಕೋಪಗೊಂಡಿದ್ದ ರಘು, ಅಣ್ಣನ್ನೊಂದಿಗೆ ಜಗಳ ಮಾಡಿದ್ದ.

ಮನಸೋ ಇಚ್ಛೆ ತಮ್ಮನಿಗೆ ಚಾಕು ಇರಿದ ಅಣ್ಣ

ಈ ಹಿಂದೆಯೂ ಒಮ್ಮೆ ದಾಳಿ ಮಾಡಿದ್ದ ದೇವರಾಜ್ ಮೇಲೆ ಕೊಲೆ ಯತ್ನ ಕೇಸ್ ದಾಖಲಾಗಿತ್ತಂತೆ. ಸೆಪ್ಟೆಂಬರ್ 24ರಂದು ಅಣ್ಣ, ತಮ್ಮನ ಹೆಸರು ಒಂದೇ ಬಿಪಿಎಲ್ ಕಾರ್ಡ್​ನಲ್ಲಿ ಇದ್ದ ಕಾರಣ ಒಂದು ತಿಂಗಳ ಅಣ್ಣ ರೇಷನ್ ಪಡೆದುಕೊಂಡರೆ, ಇನ್ನೊಂದು ತಿಂಗಳು ತಮ್ಮ ಪಡೆಯುತ್ತಿದ್ದ. ಸೆಪ್ಟೆಂಬರ್ ತಿಂಗಳು ರಘು ಸರದಿಯಾಗಿದ್ದರಿಂದ ಕಾರ್ಡ್ ಕೇಳಲು ಹೋದಾಗ ಜಗಳವಾಗಿದೆ. ಪರಸ್ಪರ ಕಿತ್ತಾಡಿಕೊಂಡ ಸಹೋದರರು ಬೀದಿಗೆ ಬಂದು ಹೊಡೆದಾಟಕ್ಕಿಳಿದಿದ್ದರು. ಮನೆಯಿಂದ ಚಾಕು ತಂದ ದೇವರಾಜ್, ಮನಸೋ ಇಚ್ಛೆ ತಮ್ಮನ ಮೇಲೆ ಅಟ್ಯಾಕ್ ಮಾಡಿದ್ದ. ರಕ್ತದ ಮಡುವಿನಲ್ಲಿ ಬಿದ್ದವನನ್ನು ಕೂಡಲೇ ಬೆಲೂರು ತಾಲೂಕಾಸ್ಪತ್ರೆಗೆ ದಾಖಲು ಮಾಡಿ ನಂತರ ಹಾಸನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಇಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದಿ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ರಘು ಕೊನೆಯುಸಿರೆಳೆದ್ದಾನೆ.

LIVE TV

ಇತ್ತ ಮನೆಯಲ್ಲೂ ಹೆಂಡತಿ ಜೊತೆಗೆ ಜಗಳ

ಆಟೋ ಚಾಲಕನಾಗಿದ್ದ ರಘು, ಬೇಲೂರಿನ ಕೋಮಲಮಣಿ ಎನ್ನುವವರನ್ನ ಮದುವೆಯಾಗಿದ್ದ. ಪತ್ನಿ ವಿಶೇಷಚೇತನ ಮಹಿಳೆಯಾಗಿದ್ದ ಕಾರಣ ತಾನೂ ಒಂದಷ್ಟು ದುಡಿಮೆ ಮಾಡಿ ಮನೆ ಕಟ್ಟಿಕೊಳ್ಳಬೇಕು ಎಂದು ತನ್ನ ಪಾಲಿಗೆ ಬರಬೇಕಿದ್ದ ಸೈಟ್ ಕೇಳಿದರೂ ದೇವರಾಜ್ ಕೊಟ್ಟಿರಲಿಲ್ಲ. ಜಮೀನು ಮಾರಾಟ ಮಾಡಿದರೂ ಬಂದ ಹಣವನ್ನ ಯಾರಿಗೂ ಕೊಟ್ಟಿರಲಿಲ್ಲ. ಇನ್ನು ದೇವರಾಜ್​​ ಮೊದಲ ಹೆಂಡತಿಯನ್ನ ಬಿಟ್ಟು ಎರಡನೇ ಮದುವೆ ಮಾಡಿಕೊಂಡಿದ್ದಾನೆ. ರಘುಗೆ ಮದುವೆಯಾಗಿ ಎಂಟು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಆಸ್ತಿ ಬೇಕು ಎಂದರೆ ಅವಳನ್ನು ಬಿಟ್ಟು ಬಾ ಎಂದಿದ್ದ ಅಣ್ಣನ ಮೇಲಿನ ಸಿಟ್ಟಿಗೆ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದ ರಘು, ಇತ್ತ ಮನೆಯಲ್ಲೂ ನೆಮ್ಮದಿ ಕಳೆದುಕೊಂಡಿದ್ದ.

ಇದನ್ನೂ ಓದಿ: ಬೆಂಗಳೂರು: ಸಂಪಿಗೆಹಳ್ಳಿ ಸೈಟ್‌ನಲ್ಲಿ ಮಹಿಳೆಯ ಶವ ಪತ್ತೆ ಕೇಸ್; ಪೊಲೀಸರು ಪ್ರಕರಣ ಭೇದಿಸಿದ್ದೇ ಒಂದು ರೋಚಕ ಕಥೆ!

ಆಸ್ತಿ ಮಾರಾಟ ಮಾಡಿ ಬಂದ ಲಕ್ಷ ಲಕ್ಷ ಹಣ ಮತ್ತು ಕೋಟ್ಯಂತರ ರೂ ಬೆಲೆಬಾಳುವ ಜಮೀನು ಎಲ್ಲವನ್ನು ತಮ್ಮನಿಗೆ ಪಾಲು ಕೊಡಬೇಕಿತ್ತು. ಈ ನಡುವೆ ಸಹೋದರಿಯರು ಕೂಡ ಆಸ್ತಿಯಲ್ಲಿ ಪಾಲುಗಾಗಿ ಕೇಸ್ ಹಾಕಿದ್ದರಂತೆ. ಎಲ್ಲರಿಗೂ ಪಾಲು ಕೊಟ್ಟರೆ ತನಗೇನು ಉಳಿಯುತ್ತೆ ಎಂದು ಒಳಗೊಳಗೆ ಲೆಕ್ಕಾಚಾರ ಮಾಡಿದ್ದ ಅಣ್ಣ, ಕಡೆಗೆ ತಮ್ಮನನ್ನು ಕೊಲೆ ಮಾಡಿದ್ದಾನೆ. ಘಟನೆ ನಡೆದ ದಿನವೇ ದೇವರಾಜ್​ನ ಬಂಧನವಾಗಿದ್ದು, ಆತನ ಪತ್ನಿ ಗೀತಾಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​