AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಘಟ್ಟದ ಜೀವ ನದಿಗಳ ರಕ್ಷಣೆಗೆ ಆಗ್ರಹಿಸಿ ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಪಶ್ಚಿಮ ಘಟ್ಟದ ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸಂರಕ್ಷಣೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.  ಪ್ರತಿಭಟನೆಯಲ್ಲಿ ಉತ್ತರ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. 

ಪಶ್ಚಿಮ ಘಟ್ಟದ ಜೀವ ನದಿಗಳ ರಕ್ಷಣೆಗೆ ಆಗ್ರಹಿಸಿ ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಪಶ್ಚಿಮ ಘಟ್ಟದ ಜೀವ ನದಿಗಳ ರಕ್ಷಣೆಗೆ ಆಗ್ರಹಿಸಿ ಅ.10ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆImage Credit source: hiandhelloearth.wordpress.com
ಪ್ರಸನ್ನ ಹೆಗಡೆ
|

Updated on: Sep 26, 2026 | 1:01 PM

Share

ಬೆಂಗಳೂರು, ಸೆಪ್ಟೆಂಬರ್​​ 26: ಪಶ್ಚಿಮ ಘಟ್ಟದ ಪರಿಸರ, ನದಿಗಳು ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮತ್ತು ಸಮುದಾಯಗಳ ಸಹಭಾಗಿತ್ವದಲ್ಲಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದೆ. ಬೆಳಿಗ್ಗೆ 10ರಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ರೈತರು, ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳು, ಕಾರ್ಮಿಕರು, ಯುವಜನರು, ಸಾಮಾಜಿಕ ಹೋರಾಟಗಾರರು ಸೇರಿದಂತೆ ವಿವಿಧ ವರ್ಗಗಳ ಜನರು ಭಾಗವಹಿಸುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸಂರಕ್ಷಣೆ ಪ್ರತಿಭಟನೆಯ ಪ್ರಮುಖ ವಿಷಯವಾಗಿದೆ. ಈ ನದಿಗಳ ಸ್ವಾಭಾವಿಕ ಹರಿವಿಗೆ ಧಕ್ಕೆ ಉಂಟುಮಾಡುವ ಮತ್ತು ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದಾದ ಯೋಜನೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಗಳು, ನದಿ ಮತ್ತು ಕಾಡಿನ ರಕ್ಷಣೆಗೆ ಜನಾಂದೋಲನ ಅಗತ್ಯ ಎಂದು ಅದು ಪ್ರತಿಪಾದಿಸಿವೆ.

ಇದನ್ನೂ ಓದಿ: ಹೊನ್ನಾವರ ಶಾಲೆಯಲ್ಲಿ ಹದಗೆಟ್ಟ ವ್ಯವಸ್ಥೆ: ಕುಡಿಯಲು, ಶೌಚಾಲಯಕ್ಕೆ ಬಾವಿಯಿಂದ ನೀರು ಹೊರುತ್ತಿದ್ದಾರೆ ಪುಟ್ಟ ಮಕ್ಕಳು

ನದಿಗಳೊಂದಿಗೆ ಬೆಸೆದುಕೊಂಡಿರುವ ಜನರ ಬದುಕು

ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳು ಕೇವಲ ನೀರಿನ ಮೂಲಗಳಲ್ಲ. ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಗ್ರಾಮೀಣ ಭಾಗದ ಹಲವು ಆರ್ಥಿಕ ಚಟುವಟಿಕೆಗಳು ನದಿಗಳೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ನದಿಗಳ ಹರಿವು ಮತ್ತು ಪರಿಸರ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳು ಸ್ಥಳೀಯ ಜನರ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಪರಿಸರ ಹೋರಾಟಗಾರರ ವಾದವಾಗಿದೆ. ಪಶ್ಚಿಮ ಘಟ್ಟದ ಕಾಡುಗಳು ಮಳೆ, ನೀರಿನ ಹರಿವು ಮತ್ತು ಜೀವವೈವಿಧ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನದಿ ಹಾಗೂ ಕಾಡಿನ ಸಂರಕ್ಷಣೆಯನ್ನು ಪ್ರತ್ಯೇಕವಾಗಿ ನೋಡುವ ಬದಲು ಸಮಗ್ರ ಪರಿಸರದ ದೃಷ್ಟಿಕೋನದಿಂದ ನೋಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಬೆಂಗಳೂರಿನಲ್ಲಿರುವವರಿಗೂ ಕರೆ

ಪ್ರತಿಭಟನೆಯಲ್ಲಿ ಉತ್ತರ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಸಹಕಾರಿ ಕ್ಷೇತ್ರದ ನಾಯಕರು ತಮ್ಮ ಸಂಘಗಳ ಪದಾಧಿಕಾರಿಗಳು, ಸದಸ್ಯರು ಮತ್ತು ರೈತ ಬಂಧುಗಳು ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಸಹಕಾರಿ ಸದಸ್ಯರ ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ. ರೈತ ಸಂಘಟನೆಗಳು ಹಾಗೂ ರೈತ ನಾಯಕರು ಹಸಿರು ಶಾಲು ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಮಹಿಳಾ ಸಂಘಟನೆಗಳ ಸದಸ್ಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಬಾಂಧವರು ಕುಟುಂಬ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ವಿವಿಧ ಸಮುದಾಯಗಳ ಬೆಂಬಲಕ್ಕೆ ಮನವಿ

ಸಿದ್ಧಿ, ಕುಣಬಿ, ಮರಾಠಿ, ನಾಮಧಾರಿ ನಾಯಕ್, ಈಡಿಗ ಹಾಗೂ ರಾಮಕ್ಷತ್ರಿಯ ಸೇರಿದಂತೆ ವಿವಿಧ ಸಮುದಾಯಗಳ ಬಾಂಧವರಿಗೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ಪಶ್ಚಿಮ ಘಟ್ಟದ ಕಾಡು ಮತ್ತು ನದಿಗಳೊಂದಿಗೆ ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ಸಮುದಾಯಗಳ ಜೀವನೋಪಾಯ, ಸಂಸ್ಕೃತಿ ಹಾಗೂ ಸ್ಥಳೀಯ ಪರಿಸರದ ರಕ್ಷಣೆಯ ದೃಷ್ಟಿಯಿಂದ ಈ ಹೋರಾಟದಲ್ಲಿ ಭಾಗವಹಿಸುವುದು ಅಗತ್ಯ ಎಂದು ಮನವಿ ಮಾಡಲಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಶಿಕ್ಷಣ, ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ನೆಲೆಸಿರುವ ಯುವಜನರು ಅಕ್ಟೋಬರ್ 10ರಂದು ತಮ್ಮ ಹುಟ್ಟೂರು ಹಾಗೂ ಪರಿಸರದ ಪರವಾಗಿ ಧ್ವನಿ ಎತ್ತಲು ಫ್ರೀಡಂ ಪಾರ್ಕ್‌ಗೆ ಆಗಮಿಸಬೇಕು ಎಂದು ಸಂಘಟಕರು ಕೋರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಮೈಸೂರು ದಸರಾ ಸಂಭ್ರಮ: ಗಜಪಡೆಗೆ ಇಂದಿನಿಂದ ಕುಶಾಲತೋಪು ತರಬೇತಿ ಆರಂಭ
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಕೊಪ್ಪಳದ ಗವಿಸಿದ್ದೇಶ್ವರರಿಗೂ ಮೊದಲು ದಸರಾ ಉದ್ಘಾಟಿಸಿದ್ದ ಮಠಾಧೀಶರು ಇವರು!
ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ
ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಅರಣ್ಯ ವೀಕ್ಷಕನ ಮನೆಯಲ್ಲಿಯೇ ಲಕ್ಷಾಂತರ ಮೌಲ್ಯದ ಅಕ್ರಮ ನಾಟ ವಶ!
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
ಇಂದು ಅನಂತ ಹುಣ್ಣಿಮೆಯ ವಿಶೇಷ ದಿನ; ಈ ಎಲ್ಲಾ ರಾಶಿಗಳಿಗೆ ಶುಭ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
'ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ' ಎಂದು ಆಕ್ರೋಶ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಬೆಳೆ ಉಳಿಸಿಕೊಳ್ಳಲು ಪರದಾಟ: ವಿದ್ಯುತ್​ಗಾಗಿ ಅಧಿಕಾರಿಗಳ ಕಾಲಿಗೆ ಬಿದ್ದ ರೈತ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ