ಅಪರೂಪದ ಸಾಧನೆ, ಆಸ್ಕರ್ ಅಂಗಳ ಸೇರಿದ ನಾಗಾಲ್ಯಾಂಡ್ ಸಿನಿಮಾ ‘ಅಂಗ್’
ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ನಲ್ಲಿ ನಿರ್ಮಾಣ ಆಗಿರುವ ಅತ್ಯಂತ ಕಡಿಮೆ ಬಜೆಟ್ಟಿನ ಆದರೆ ನೆಲ ಮೂಲ ಕತೆ ಹೊಂದಿರುವ ‘ಅಂಗ್’ ಸಿನಿಮಾ ಇದೀಗ ಆಸ್ಕರ್ ಅಂಗಳಕ್ಕೆ ಪ್ರವೇಶಿಸಿದೆ. ಅದೂ ಈ ಸಿನಿಮಾವನ್ನು ಯಾರೂ ಆಯ್ಕೆ ಮಾಡಿದ್ದಾಗಲಿ ಅಥವಾ ಶಿಫಾರಸ್ಸು ಮಾಡಿ ಆಸ್ಕರ್ಗೆ ಕಳಿಸಿದ್ದಾಗಲಿ ಅಲ್ಲ, ಬದಲಿಗೆ ಪ್ರತಿಷ್ಠಿತ ಸಿನಿಮಾ ಉತ್ಸವದಲ್ಲಿ ಪ್ರಶಸ್ತಿ ಗೆದ್ದು ಅರ್ಹತೆಯನ್ನು ಪಡೆದುಕೊಂಡಿದೆ. ಸಿನಿಮಾದ ಕೆಲ ದೃಶ್ಯಗಳು ಇದೀಗ ಆನ್ಲೈನ್ನಲ್ಲಿ ಹರಿದಾಡುತ್ತಿದ್ದು, ಸಿನಿಮಾದ ಗುಣಮಟ್ಟ ನೋಡಿದರೆ ಸಿನಿಮಾಕ್ಕೆ ಆಸ್ಕರ್ ಗೆಲ್ಲುವ ಅರ್ಹತೆ ಇದೆಯೆಂದೇ ಅನಿಸುತ್ತಿದೆ.

ಮುಖ್ಯಾಂಶಗಳು
- ಈಶಾನ್ಯ ರಾಜ್ಯಗಳಲ್ಲಿ ನಿರ್ಮಾಣವಾದ ಸಿನಿಮಾ
- ನಾಗಾ ಭಾಷೆಯ ಸಿನಿಮಾ ‘ಅಂಗ್’
- ನಾಗಾಲ್ಯಾಂಡ್ ಸಿನಿಮಾ ಆಸ್ಕರ್ ಪ್ರವೇಶಿಸಿದೆ.
ಆಸ್ಕರ್ಗೆ ಈ ಬಾರಿ ಭಾರತದಿಂದ ಮರಾಠಿ ಸಿನಿಮಾ ‘ಗೋಂಧಳ್’ ಅನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಹಲವಾರು ಚಿತ್ರರಂಗಗಳಿವೆ ಆದರೆ ಅವುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು ಬಾಲಿವುಡ್, ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳು ಮತ್ತು ಮರಾಠಿ ಚಿತ್ರರಂಗ ಮಾತ್ರ. ಇದೇ ಕಾರಣಕ್ಕೆ ಆಸ್ಕರ್ಗೆ ಸಿನಿಮಾ ಆಯ್ಕೆಯಿಂದ ಹಿಡಿದು ದೇಶದ ಒಳಗೆ ನೀಡಲಾಗುವ ಪ್ರಶಸ್ತಿಗಳಿಗೂ ಇವೇ ಚಿತ್ರರಂಗದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ಈಶಾನ್ಯ ಭಾರತದ ರಾಜ್ಯಗಳನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಮೂಲೆಗುಂಪು ಮಾಡಿರುವು ಗುಟ್ಟೇನೂ ಅಲ್ಲ. ಪ್ರಶಸ್ತಿಗಳಿಗಂತೂ ಅಲ್ಲಿನ ಸಿನಿಮಾಗಳನ್ನು ಪರಿಗಣಿಸಲಾಗುವುದಿಲ್ಲ, ಆದರೆ ಇದೀಗ ಅದೇ ಭಾಗದಲ್ಲಿ ನಿರ್ಮಾಣವಾದ ಸಿನಿಮಾ ಒಂದು ಯಾರ ಸಹಾಯವೂ ಇಲ್ಲದೆ ನೇರವಾಗಿ ಆಸ್ಕರ್ಗೆ ಆಯ್ಕೆ ಆಗಿದೆ.
ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್ನಲ್ಲಿ ನಿರ್ಮಾಣ ಆಗಿರುವ ಅತ್ಯಂತ ಕಡಿಮೆ ಬಜೆಟ್ಟಿನ ಆದರೆ ನೆಲ ಮೂಲ ಕತೆ ಹೊಂದಿರುವ ‘ಅಂಗ್’ ಸಿನಿಮಾ ಇದೀಗ ಆಸ್ಕರ್ ಅಂಗಳಕ್ಕೆ ಪ್ರವೇಶಿಸಿದೆ. ಅದೂ ಈ ಸಿನಿಮಾವನ್ನು ಯಾರೂ ಆಯ್ಕೆ ಮಾಡಿದ್ದಾಗಲಿ ಅಥವಾ ಶಿಫಾರಸ್ಸು ಮಾಡಿ ಆಸ್ಕರ್ಗೆ ಕಳಿಸಿದ್ದಾಗಲಿ ಅಲ್ಲ, ಬದಲಿಗೆ ಪ್ರತಿಷ್ಠಿತ ಸಿನಿಮಾ ಉತ್ಸವದಲ್ಲಿ ಪ್ರಶಸ್ತಿ ಗೆದ್ದು ಅರ್ಹತೆಯನ್ನು ಪಡೆದುಕೊಂಡಿದೆ. ಸಿನಿಮಾದ ಕೆಲ ದೃಶ್ಯಗಳು ಇದೀಗ ಆನ್ಲೈನ್ನಲ್ಲಿ ಹರಿದಾಡುತ್ತಿದ್ದು, ಸಿನಿಮಾದ ಗುಣಮಟ್ಟ ನೋಡಿದರೆ ಸಿನಿಮಾಕ್ಕೆ ಆಸ್ಕರ್ ಗೆಲ್ಲುವ ಅರ್ಹತೆ ಇದೆಯೆಂದೇ ಅನಿಸುತ್ತಿದೆ.
‘ಅಂಗ್’ ಸಿನಿಮಾವನ್ನು ನಾಗಾಲ್ಯಾಂಡ್ನ ಯುವಕ ತೆಜಾ ರಿಯೊ ನಿರ್ದೇಶನ ಮಾಡಿದ್ದಾರೆ. 35 ವರ್ಷ ವಯಸ್ಸಿನ ಈ ನಿರ್ದೇಶಕನ ಐದನೇ ಸಿನಿಮಾ ಇದಾಗಿದೆ. ಎಲ್ಲ ಸಿನಿಮಾಗಳನ್ನು ನಾಗಾ ಭಾಷೆಯಲ್ಲಿಯೇ ನಿರ್ದೇಶಿಸಿದ್ದಾರೆ. ಇವರ ಸಿನಿಮಾಗಳು ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಸಹ ಭಾಜನವಾಗಿವೆ. ಅಂದಹಾಗೆ ಈಗ ನಿರ್ದೇಶಿಸಿರುವ ‘ಅಂಗ್’ ಸಿನಿಮಾ ಪ್ರತಿಷ್ಠಿತ ಟಿಫ್ (TIFF) ನಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದೆ. ಇಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ ಅನ್ನು ನೇರವಾಗಿ ಆಸ್ಕರ್ಗೆ ಕಳಿಸಲಾಗುತ್ತದೆ. ಇದೇ ಕಾರಣಕ್ಕೆ ‘ಅಂಗ್’ ಸಿನಿಮಾ ಆಸ್ಕರ್ಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಆಸ್ಕರ್ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?
‘ಅಂಗ್’ ನಾಗಾ ಸಿನಿಮಾ ಆಗಿದ್ದು 1960ರಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ. ‘ಅಂಗ್’ ಎಂದರೆ ಒಂದು ಹಲ್ಳಿಯ, ಸಮುದಾಯದ ನಾಯಕ. ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿ ಹಾಗೂ ಆ ಹಳ್ಳಿಯ ‘ಅಂಗ್’ ಹಾಗೂ ಅವನ ಮಗನ ಕತೆಯನ್ನು ಸಿನಿಮಾ ಒಳಗೊಂಡಿದೆ. ಬ್ರಿಟೀಷ್ ಮಿಷನರಿಗಳು ಹಳ್ಳಿಗರನ್ನು ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡುತ್ತಿದ್ದಾರೆ, ಮತಾಂತರಗೊಂಡವರು ಹಳ್ಳಿ ಬಿಟ್ಟು ಒಳ್ಳೆಯ ಜೀವನ ಅರಸಿ ಪಟ್ಟಣಗಳ ಕಡೆಗೆ ಹೊರಡುತ್ತಿದ್ದಾರೆ. ಆದರೆ ಹಳ್ಳಿಯ ನಾಯಕ (ಅಂಗ್) ಮತ್ತು ಅವನ ಪುತ್ರ ಮಾತ್ರ ಮಿಷಿನರಿಗಳಿಗೆ ಎದುರಾಗಿ ನಿಂತಿದ್ದಾರೆ ಇದೇ ಸಿನಿಮಾದ ಕತೆ. ಇದೀಗ ಈ ಸಿನಿಮಾ ಆಸ್ಕರ್ನಲ್ಲಿ ಸ್ಪರ್ಧೆಯಲ್ಲಿದೆ.
ಭಾರತದಿಂದ ಅಧಿಕೃತವಾಗಿ ‘ಗೋಂಧಳ್’ ಸಿನಿಮಾ ಆಯ್ಕೆ ಆಗಿದೆ. ಹಾಗಾಗಿ ಈ ಸಿನಿಮಾ ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಸ್ಪರ್ಧೆ ಮಾಡಲಿದೆ. ‘ಅಂಗ್’ ಸಿನಿಮಾ ಸಹ ಬಹುಷಃ ಇದೇ ವಿಭಾಗದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಆದರೆ ಇನ್ನೂ ಖಾತ್ರಿ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ