AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​​ಗೆ ಆಯ್ಕೆಯಾದ ಮರಾಠಿ ಸಿನಿಮಾ ‘ಗೋಂಧಳ್’ ಈಗ ಚಿತ್ರಮಂದಿರಕ್ಕೆ

ಸಂತೋಷ್ ದವಾಖರ್ ನಿರ್ದೇಶನ ಮಾಡಿರುವ ‘ಗೋಂಧಳ್’ ಮರಾಠಿ ಸಿನಿಮಾವನ್ನು ಮೂಲ ಭಾಷೆಯ ಜೊತೆಗೆ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ವಿಶೇಷ ಪ್ರೀಮಿಯರ್ ಶೋಗಳನ್ನು ಮುಂಬೈ, ಪುಣೆ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ಆರು ನಗರಗಳಲ್ಲಿ ಮಾತ್ರವೇ ನಡೆಯಲಿದೆ. ಬಹುತೇಕ ಎಲ್ಲ ನಗರಗಳಲ್ಲಿಯೂ ಕೇವಲ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಸಿನಿಮಾದ ಪ್ರದರ್ಶನ ಮಾಡಲಾಗುತ್ತದೆ.

ಆಸ್ಕರ್​​ಗೆ ಆಯ್ಕೆಯಾದ ಮರಾಠಿ ಸಿನಿಮಾ ‘ಗೋಂಧಳ್’ ಈಗ ಚಿತ್ರಮಂದಿರಕ್ಕೆ
Gondhal Movie
ಮಂಜುನಾಥ ಸಿ.
|

Updated on: Oct 02, 2026 | 5:57 PM

Share

ಮುಖ್ಯಾಂಶಗಳು

  • ಭಾರತದಿಂದ ಆಸ್ಕರ್​​ಗೆ ಆಯ್ಕೆ ಆಗಿರುವ ಸಿನಿಮಾ
  • ‘ಗೋಂಧಳ್’ ಮರಾಠಿ ಸಿನಿಮಾದ ಪ್ರದರ್ಶನ
  • ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಸಿನಿಮಾ

ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ ಮರಾಠಿ ಸಿನಿಮಾ ‘ಗೋಂಧಳ್’. ಮನೋವೈಜ್ಞಾನಿಕ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ಈ ಸಿನಿಮಾನಲ್ಲಿ ಗ್ರಾಮೀಣ ಭಾರತದ ಆಚರಣೆಗಳು, ಜನ ಜೀವನಕ್ಕೂ ಮಹತ್ವ ನೀಡಲಾಗಿದೆ. ಸಿನಿಮಾ ಆಸ್ಕರ್​​ಗೆ ಆಯ್ಕೆ ಆದ ಬೆನ್ನಲ್ಲೆ ಆಯ್ದ ಕೆಲ ನಗರಗಳಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಮಾತ್ರವೇ ಪ್ರೀಮಿಯರ್ ಶೋ ಆಯೋಜಿಸಲಾಗುತ್ತಿದ್ದು, ಈ ಶೋಗಳು ಅಕ್ಟೋಬರ್ 9 ರಿಂದ ಪ್ರಾರಂಭ ಆಗಲಿವೆ.

ಸಂತೋಷ್ ದವಾಖರ್ ನಿರ್ದೇಶನ ಮಾಡಿರುವ ‘ಗೋಂಧಳ್’ ಮರಾಠಿ ಸಿನಿಮಾವನ್ನು ಮೂಲ ಭಾಷೆಯ ಜೊತೆಗೆ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ವಿಶೇಷ ಪ್ರೀಮಿಯರ್ ಶೋಗಳನ್ನು ಮುಂಬೈ, ಪುಣೆ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ಆರು ನಗರಗಳಲ್ಲಿ ಮಾತ್ರವೇ ನಡೆಯಲಿದೆ. ಬಹುತೇಕ ಎಲ್ಲ ನಗರಗಳಲ್ಲಿಯೂ ಕೇವಲ ಮಲ್ಟಿಪ್ಲೆಕ್ಸ್​​ಗಳಲ್ಲಿ ಮಾತ್ರವೇ ಸಿನಿಮಾದ ಪ್ರದರ್ಶನ ಮಾಡಲಾಗುತ್ತದೆ.

ಈ ಚಿತ್ರವು ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾದ ‘ಗೊಂಧಳ್’ ಜನಪದ ಆಚರಣೆಯ ಹಿನ್ನೆಲೆಯನ್ನು ಆಧರಿಸಿದೆ. ರಾತ್ರಿ ಪೂರ್ತಿ ನಡೆಯುವ ಈ ಆಚರಣೆಯಲ್ಲಿ ಭಕ್ತಿಗೀತೆಗಳು, ಸಂಗೀತ ಮತ್ತು ನೃತ್ಯಗಳು ಸೇರಿರುತ್ತವೆ. ಈ ಆಳವಾದ ಸಾಂಸ್ಕೃತಿಕ ರೂಪವನ್ನು ಒಂದು ರೋಮಾಂಚಕ ಮನೋವೈಜ್ಞಾನಿಕ ಥ್ರಿಲ್ಲರ್ ಕಥೆಯೊಂದಿಗೆ ಬೆಸೆದು, ಸಂಪ್ರದಾಯ, ಮಾನವ ಭಾವನೆಗಳು ಮತ್ತು ಗುಪ್ತ ಉದ್ವಿಗ್ನತೆಗಳ ಸಂಘರ್ಷವನ್ನು ನಿರ್ದೇಶಕರು ತೆರೆಮೇಲೆ ತಂದಿದ್ದಾರೆ.

ಇದನ್ನೂ ಓದಿ:ಆಸ್ಕರ್​​ಗೆ ಭಾರತದ ಅಧಿಕೃತ ಆಯ್ಕೆ ಮರಾಠಿ ಸಿನಿಮಾ ‘ಗೋಂಧಲ್’: ಏನಿದರ ವಿಶೇಷತೆ?

ಈ ಚಿತ್ರದ ವಿಶೇಷ ಪ್ರದರ್ಶನಗಳ ಕುರಿತು ಮಾತನಾಡಿರುವ ನಿರ್ದೇಶಕ ಸಂತೋಷ್ ದವಾಖರ್, ಇದು ಕೇವಲ ಸಾಮಾನ್ಯ ಪ್ರದರ್ಶನವಲ್ಲ, ಬದಲಿಗೆ ಥಿಯೇಟ್ರಿಕಲ್ ಅನುಭವವನ್ನು ಬಯಸುವ ಪ್ರೇಕ್ಷಕರಿಗೆ ‘ಗೊಂಧಳ್’ ಚಿತ್ರವನ್ನು ಹತ್ತಿರ ತರುವ ಪ್ರಯತ್ನ. ಮಹಾರಾಷ್ಟ್ರದ ಸಾಂಸ್ಕೃತಿಕ ನೆಲದಲ್ಲಿ ಹುಟ್ಟಿದ ಈ ಕಥೆಯ ಧ್ವನಿ ಮತ್ತು ದೃಶ್ಯ ಲೋಕವನ್ನು ಎಲ್ಲರೂ ಒಟ್ಟಾಗಿ ಸಿನೆಮಾ ಮಂದಿರಗಳಲ್ಲಿ ಅನುಭವಿಸಬೇಕು ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಇಶಿತಾ ದೇಶಮುಖ್, ಕಿಶೋರ್ ಕದಮ್ ಮತ್ತು ಯೋಗೇಶ್ ಸೋಹನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿರುವ ಈ ಚಿತ್ರವು ವಿವಿಧ ಉತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಗೋವಾದಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಸಂತೋಷ್ ದವಾಖರ್ ಅವರು ಅತ್ಯುತ್ತಮ ನಿರ್ದೇಶಕರಿಗೆ ನೀಡುವ ‘ಸಿಲ್ವರ್ ಪೀಕಾಕ್’ ಪ್ರಶಸ್ತಿಯನ್ನು ಪಡೆದಿದ್ದರೆ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಫಿಪ್ರೆಸ್ಕಿ’ (FIPRESCI) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More