AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಯೂಟಕ್ಕೆ ಪೂರೈಕೆಯಾಗದ ತೊಗರಿ ಬೇಳೆ: ಯಾದಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಚಿತ್ರಾನ್ನವೇ ಗತಿ!

ಯಾದಗಿರಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಿಗೆ ಕಳೆದ ಒಂದು ತಿಂಗಳಿನಿಂದ ಬಿಸಿಯೂಟಕ್ಕೆ ತೊಗರಿ ಬೇಳೆ ಪೂರೈಕೆಯಾಗದ ಕಾರಣ, ವಿದ್ಯಾರ್ಥಿಗಳಿಗೆ ನಿತ್ಯವೂ ಚಿತ್ರಾನ್ನ ಮತ್ತು ಪಲಾವ್ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಬೇಜವಾಬ್ದಾರಿಗೆ ಪೋಷಕರು ಹಿಡಿಶಾಪ ಹಾಕಿದ್ದು, ಮಕ್ಕಳ ಬಿಸಿಯೂಟಕ್ಕೆ ನೀಡಲೂ ಇವರ ಬಳಿ ಹಣ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಬಿಸಿಯೂಟಕ್ಕೆ ಪೂರೈಕೆಯಾಗದ ತೊಗರಿ ಬೇಳೆ: ಯಾದಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಚಿತ್ರಾನ್ನವೇ ಗತಿ!
ಯಾದಗಿರಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಚಿತ್ರಾನ್ನವೇ ಗತಿ
ಅಮೀನ್​ ಸಾಬ್​
| Edited By: |

Updated on: Nov 27, 2026 | 7:09 AM

Share

ಯಾದಗಿರಿ, ನವೆಂಬರ್​​ 27: ಸರ್ಕಾರಿ ಶಾಲೆಯ ಮಕ್ಕಳು ಅಪೌಷ್ಟಿಕತೆಯಿಂದ‌ ಬಳಲಬಾರದು ಜೊತೆಗೆ ಶಾಲೆಯಿಂದ‌ ದೂರ ಉಳಿಯಬಾರದು ಎನ್ನುವ ಕಾರಣಕ್ಕೆ ಸರ್ಕಾರ‌ ನಿತ್ಯ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ಯೋಜನೆ ಆರಂಭಿಸಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಈ ಯೋಜನೆಗೆ ದುಡ್ಡಿನ‌ ಕೊರತೆ ಉಂಟಟಾಗಿದೆಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ತೊಗರಿ ಬೇಳೆ ಶಾಲೆಗಳಿಗೆ ಸರಬರಾಜೇ ಆಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ನಿತ್ಯವೂ ಚಿತ್ರಾನ್ನ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾದಗಿರಿ ಜಿಲ್ಲೆಯ ಬಹುತೇಕ ಶಾಲೆಗಳಿಗೆ ಕಳೆದ ಒಂದು ತಿಂಗಳಿನಿಂದ ತೊಗರಿ ಬೇಳೆ ಸರಬರಾಜು ಬಂದ್​​ ಆಗಿದ್ದು, ಇದರಿಂದ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ನೀಡಲು ಶಿಕ್ಷಕರು ಹಾಗೂ ಬಿಸಿಯೂಟ ಸಿಬ್ಬಂದಿ ಪರದಾಡುವಂತಾಗಿದೆ. ಕೆಲ ಶಾಲೆಗಳ ಶಿಕ್ಷಕರು ಕಳೆದ ತಿಂಗಳಲ್ಲಿ ಬಳಕೆ ಮಾಡಿ ಉಳಿದ ಬೇಳೆಯನ್ನ ಈಗ ಉಪಯೋಗಿಸಿಕೊಂಡು ಮಕ್ಕಳಿಗೆ ಬೇಳೆ ಸಾರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಹಲವು ಶಾಲೆಗಳಲ್ಲಿ ಬೇಳೆ ದಾಸ್ತಾನು ಇಲ್ಲದ ಕಾರಣಕ್ಕೆ ಮಕ್ಕಳಿಗೆ ಕೇವಲ ಚಿತ್ರಾನ್ನ ಪೂರೈಕೆ ಮಾಡಬೇಕಾಗದ ಅನಿವಾರ್ಯತೆ ಉಂಟಾಗಿದೆ.

ಇದನ್ನೂ ಓದಿ: ಯಲ್ಲಮ್ಮನ ಪಾದುಕೆ ಸರ್ಪ ನುಂಗಿದ ವದಂತಿ: ಭೀಮಾ ನದಿ ಮತ್ತೆ ಕಲುಷಿತ, 25 ಲೋಡ್ ಬಟ್ಟೆ ತೆರವು

ಇನ್ನು ಈ ವಿಚಾರವಾಗಿ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಫಿಲ್ಟರ್ ಬೆಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು, ಶಾಲೆಗೆ ಭೇಟಿ ನೀಡಿದ ವೇಳೆ ಅಡುಗೆ ಸಿಬ್ಬಂದಿ ಮಕ್ಕಳಿಗಾಗಿ ಚಿತ್ರಾನ್ನ ಸಿದ್ದಪಡಿಸುತ್ತಿದ್ದ ದೃಶ್ಯಗಳು ಕಂಡುಬಂದಿವೆ. 1 ರಿಂದ 8ನೇ ತರಗತಿಯವರೆಗಿನ ಮಕ್ಕಳು ಓದುವ ಈ ಶಾಲೆಯಲ್ಲಿ ಹಾಲಿ 114 ಮಂದಿ ವಿದ್ಯಾರ್ಥಿಗಳಿದ್ದಾರೆ. ಹೀಗಿದ್ದರೂ ಈ ಶಾಲೆಗೆ ನವೆಂಬರ್ ತಿಂಗಳಿಗೆ ಬರಬೇಕಾದ ತೊಗರಿ ಬೇಳೆ ಇನ್ನೂ ಪೂರೈಕೆ ಆಗಿಲ್ಲ. ಒಂದೆರಡು ದಿನ ಅಂದ್ರೆ ಹೇಗಾದರೂ ಮ್ಯಾನೇಜ್ ಮಾಡಬಹುದು. ಆದರೆ ಹಲವು ದಿನಗಳಿಂದ ಇದೇ ಸಮಸ್ಯೆ ಇದೆ. ಆ ಕಾರಣಕ್ಕೆ ತರಕಾರಿ ಬಳಕೆ ಮಾಡಿ ಒಂದು ದಿನ ಪಲಾವ್ ಮಾಡಿದರೆ, ಮತ್ತೊಂದು ದಿನ ಚಿತ್ರಾನ್ನ ಮಾಡಿ ಮಕ್ಕಳಿಗೆ ಉಣಬಡಿಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More