ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಹೊಣೆಗಾರಿಕೆ ತಪ್ಪಿನಿಂದ ಮುಕ್ತಾಯವಾಗಲಿದೆ
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಭಾನುವಾರದಂದು ಕಾರ್ಯದ ಅನುಭವ, ಕಾರ್ಯದಲ್ಲಿ ನಾಜೂಕುತನ, ಅಮೂಲ್ಯ ವಸ್ತು ಕಣ್ಮರೆ, ವಿಶ್ವಾಸಘಾತ, ಹೊಣೆಗಾರಿಕೆ, ವೃತ್ತಿಯ ಗೊಂದಲ, ಉದ್ಯೋಗದಲ್ಲಿ ಚಿಂತೆ, ಆದಾಯಕ್ಕೆ ಶ್ರಮ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಸಾಧ್ಯ/ ಶುಭ, ಕರಣ : ಕೌಲವ ಸೂರ್ಯೋದಯ – 06 – 26 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:24 – 17:50, ಯಮಗಂಡ ಕಾಲ 12:08 – 13:33, ಗುಳಿಕ ಕಾಲ 14:59 – 16:24.
ಮೇಷ ರಾಶಿ: ನಿಮ್ಮ ವರ್ತನೆಯನ್ನು ಬೇರೆಯವರ ಮೂಲಕದಿಂದ ತಿದ್ದಿಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಗುಂಪಿನಿಂದ ತಪ್ಪಾಗದಂತೆ ಪರೀಕ್ಷಿಸಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ನಿಮ್ಮ ಮಗನ ಮೇಲೆ ಸಂಪತ್ತಿನ ದೂರುವಿರಿ. ಆಧ್ಯಾತ್ಮಿಕ ಚಿಂತನೆಯಿಂದ ಒಳಗಣ್ಣಿಗೆ ಬಲ. ಕೆಲಸದಲ್ಲಿ ನಿಧಾನವಾದರೂ ಫಲ ಸಂತೋಷಕರ. ಹೇಳಿದ ಕೆಲಸಗಳು ಸಮಯಕ್ಕೆ ಆಗಿಲ್ಲ ಎಂದು ನೌಕರರ ಮೇಲೆ ಕೋಪಗೊಳ್ಳುವಿರಿ.
ವೃಷಭ ರಾಶಿ: ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಕುಟುಂಬದ ಜೊತೆ ಇಂದು ಸಮಯವನ್ನು ಕಳೆಯಲು ಸಾಧ್ಯವಾಗುವುದು. ಸೃಜನಶೀಲತೆಯಿಂದ ನಿಮ್ಮವರಿಗೆ ಅಚ್ಚರಿಯಗುವ ದಿನ. ಹೊಸ ಕಲ್ಪನೆಗಳು ಯಶಸ್ಸಿಗೆ ದಾರಿ. ಸ್ನೇಹಿತರ ಸಹಕಾರ ಲಭಿಸುತ್ತದೆ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.
ಮಿಥುನ ರಾಶಿ: ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಯಾರಾದರೂ ನಿಮಗೆ ಹೊಸ ದಿಕ್ಕನ್ನು ಪರಿಚಯಿಸಬಹುದು. ಇಂದು ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆತುಹೋದೀತು. ಯಾರಿಂದಲಾದರೂ ದೈನ್ಯತೆಯನ್ನು ಪಡೆದುಕೊಳ್ಳುವುದು ಬೇಡ.
ಕರ್ಕಾಟಕ ರಾಶಿ: ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಕಛೇರಿಯಲ್ಲಿ ಎಲ್ಲ ಕೆಲಸಕ್ಕೂ ನಿಮ್ಮನ್ನೇ ದೂಡಬಹುದು. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಾಗಬಹುದು. ಸ್ನೇಹದಲ್ಲಿ ಕಠೋರ ಮಾತುಗಳು ಕೇಳಿಸುವುದು.
ಸಿಂಹ ರಾಶಿ: ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ಎಲ್ಲರ ಜೊತೆ ಬೆರೆಯಬೇಕಾದೀತು. ನೀವು ಅಧಿಕಾರವನ್ನು ದುರುಪಯೋಗದ ಮಾಡಿಕೊಳ್ಳುವಿರಿ. ಮಾತುನ್ನು ಕೇಳಿಸಿಕೊಳ್ಳುವ ಸಮಾಧಾನ ಇರಲಿ. ಕೆಲವು ಸಾಲಬಾಧೆಯಿಂದ ಮುಕ್ತಿ ಸಿಗುವುದು.
ಕನ್ಯಾ ರಾಶಿ: ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವ ದಿನ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನೀವು ಉದ್ಯೋಗವನ್ನು ಬದಲಾಯಿಸಲು ಕಷ್ಟವಾದೀತು. ಮಾನಸಿಕ ಸಮತೋಲನ ಮುಖ್ಯ. ಗೆಳೆಯರ ಜೊತೆಗಿನ ಸಂಭಾಷಣೆಗಳಿಂದ ಹೊಸ ಆಲೋಚನೆ. ಇಂದಿನ ವ್ಯವಹಾರವನ್ನು ಸಂಗಾತಿಗೆ ಬಿಟ್ಟುಕೊಡುವಿರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಿ.
ತುಲಾ ರಾಶಿ: ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಧಾರ್ಮಿಕ ಆಚರಣೆಗೆ ಮನಸ್ಸಿದ್ದರೂ ಸಮಯದ ಅಭಾವದಿಂದ ಸಾಧ್ಯಬಾಗದು. ದುರಭ್ಯಾಸದ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ನಕಾರಾತ್ಮಕ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಮನಸ್ಸು ಭಾರವನ್ನು ಕಳೆದುಕೊಳ್ಳುವುದು.
ವೃಶ್ಚಿಕ ರಾಶಿ: ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನಸಂಚಾರದಿಂದ ಆಯಾಸವಾಗುವುದು. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟ.
ಧನು ರಾಶಿ: ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ಶುಭಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಭಾವನಾತ್ಮಕವಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಿ. ಮನೆಯ ಕೆಲಸಗಳು ಹೆಚ್ಚಾಗುವ ಸೂಚನೆ. ನಿಮ್ಮ ಯಶಸ್ಸನ್ನು ನೀವೇ ಕಾಡಿಕೊಳ್ಳಬೇಕು. ಸಂಗಾತಿಯ ಮಾತನ್ನು ವಿರೋಧಿಸುವಿರಿ. ಸುಲಭವಾಗಿ ಸಿಕ್ಕಿದ್ದನ್ನು ಬಿಟ್ಟುಕೊಡುವಿರಿ.
ಮಕರ ರಾಶಿ: ಕೆಲವು ಘಟನೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬ ಇರುಸುಮುರುಸು. ನಿಮ್ಮ ಕಾರ್ಯಗಳು ಅಂದುಕೊಂಡಂತೆ ಪೂರ್ಣವಾಗುವುದು. ಹಳೆಯ ವಿಚಾರವನ್ನು ಇಂದು ವಿರೋಧಿಗಳು ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುವುದು. ಹೊಸ ವ್ಯಕ್ತಿಗಳ ಸಂಪರ್ಕದಿಂದ ಭವಿಷ್ಯದಲ್ಲಿ ಉಪಕಾರಿಯಾಗಬಹುದು ಎಂಬ ಆಸೆ. ಹೊಸ ಭೂಮಿಯ ಖರೀದಿಗೆ ಆಪ್ತರನ್ನು ಜೊತೆಗೆ ಇಟ್ಟುಕೊಳ್ಳಿ.
ಕುಂಭ ರಾಶಿ: ನಿಮ್ಮ ಪ್ರೀತಿಪಾತ್ರರ ಜೊತೆ ಆಪ್ತವಾದ ಸಮಯವನ್ನು ಕಳೆಯುವಿರಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ಬಂಧುಗಳು ನಿಮ್ಮ ಬಗ್ಗೆ ಹಗುರವಾದ ಭಾವವನ್ನು ಇಟ್ಟುಕೊಳ್ಳುವರು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿ. ಅಪರಿಚಿತರ ಸಹವಾಸವು ಇಂದು ಬೇಡ. ನಿಮ್ಮ ಸಂಪತ್ತು ನಷ್ಟವಾಗಬಹುದು. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು.
ಮೀನ ರಾಶಿ: ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಮನೆಯವರ ಮಾತುಗಳಲ್ಲಿ ಸಹಾನುಭೂತಿ ಅಗತ್ಯ. ಇಂದಿನ ಎಲ್ಲ ಸಂದರ್ಭದಲ್ಲಿಯೂ ಸಕಾರಾತ್ಮಕ ಆಲೋಚನೆ ಇರಲಿ.
ಲೋಹಿತ್ ಹೆಬ್ಬಾರ್-8762924271 (what’s app only)
Published On - 1:05 am, Sun, 29 November 26




