AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲು ಬೇಗ ಬಿಳಿಯಾಗುವುದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು!

ಅಕಾಲಿಕವಾಗಿ ಕೂದಲು ಬಿಳಿಯಾಗುವುದು ವಯಸ್ಸಿಗೆ ಸಂಬಂಧಪಟ್ಟಿದ್ದಲ್ಲ. ಕೆಲವೊಮ್ಮೆ ಇದು ಪೋಷಕಾಂಶಗಳ ಕೊರತೆ ಅಥವಾ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಆದ್ದರಿಂದ ಸ್ವಯಂ ಔಷಧಿ ಅಥವಾ ವೈಜ್ಞಾನಿಕ ಆಧಾರವಿಲ್ಲದ ಉತ್ಪನ್ನಗಳನ್ನು ಬಳಸುವುದಕ್ಕಿಂತ ಚರ್ಮರೋಗ ತಜ್ಞರ ಸಲಹೆ ಪಡೆದು ಮೂಲ ಕಾರಣವನ್ನು ಪತ್ತೆಹಚ್ಚುವುದು ಉತ್ತಮ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಕೂದಲು ಬೇಗ ಬಿಳಿಯಾಗುವುದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು!
Premature Grey HairImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 05, 2026 | 8:20 PM

Share

ಮುಖ್ಯಾಂಶಗಳು

  • ಬಿಳಿ ಕೂದಲು ಮತ್ತೆ ಕಪ್ಪಾಗುತ್ತದೆಯೇ? ತಜ್ಞರು ನೀಡಿರುವ ಉತ್ತರ ಇಲ್ಲಿದೆ
  • ಅಕಾಲಿಕವಾಗಿ ಕೂದಲು ಬಿಳಿಯಾಗುವುದಕ್ಕೆ ಕಾರಣವೇನು?
  • ಕೂದಲಿನ ಆರೋಗ್ಯ ಕಾಪಾಡಲು ಸೇವನೆ ಮಾಡಬೇಕಾದ ಆಹಾರಗಳು

ಇತ್ತೀಚಿನ ದಿನಗಳಲ್ಲಿ 20ರಿಂದ 30 ವರ್ಷದ ಯುವಕರಲ್ಲಿ ಬೇಗ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚುತ್ತಿದೆ. ಹಿಂದೆ ವಯಸ್ಸಾದ ಬಳಿಕ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಯುವಜನರಲ್ಲಿಯೇ ಸಾಮಾನ್ಯವಾಗಿದೆ. ಒತ್ತಡ, ಅಸಮತೋಲಿತ ಆಹಾರ, ವಿಟಮಿನ್ ಕೊರತೆ, ಮಾಲಿನ್ಯ ಹಾಗೂ ಜೀವನಶೈಲಿಯ ಬದಲಾವಣೆಗಳು ಇದರ ಪ್ರಮುಖ ಕಾರಣಗಳಾಗಿವೆ. ಹಾಗಾದರೆ ಒಮ್ಮೆ ಬಿಳಿಯಾದ ಕೂದಲು ಮತ್ತೆ ಸಹಜವಾಗಿ ಕಪ್ಪಾಗಬಹುದೇ, ಈ ಬಗ್ಗೆ ಚರ್ಮರೋಗ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಅಕಾಲಿಕವಾಗಿ ಕೂದಲು ಬಿಳಿಯಾಗಲು ಕಾರಣವೇನು?

ಚರ್ಮರೋಗ ತಜ್ಞೆ ಡಾ. ಅರ್ಜು ಪಹ್ವಾ ಅವರ ಪ್ರಕಾರ, ಕೂದಲಿಗೆ ಅದರ ಸಹಜ ಬಣ್ಣವನ್ನು ನೀಡುವುದು ಮೆಲನಿನ್ (Melanin) ಎಂಬ ವರ್ಣದ್ರವ್ಯ. ಈ ಮೆಲನಿನ್ ಉತ್ಪಾದನೆ ಕಡಿಮೆಯಾದಾಗ ಅಥವಾ ನಿಂತಾಗ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಇದಕ್ಕೆ ಪ್ರಮುಖ ಕಾರಣಗಳು:

  • ಅನುವಂಶಿಕತೆ (Genetics)
  • ವಿಟಮಿನ್ ಬಿ12 ಕೊರತೆ
  • ವಿಟಮಿನ್ ಡಿ ಕೊರತೆ
  • ಐರನ್ ಕೊರತೆ
  • ಕಾಪರ್ ಮತ್ತು ಫೋಲೇಟ್ ಕೊರತೆ
  • ದೀರ್ಘಕಾಲದ ಮಾನಸಿಕ ಒತ್ತಡ
  • ಧೂಮಪಾನ
  • ವಾಯು ಮಾಲಿನ್ಯ
  • ಆಕ್ಸಿಡೇಟಿವ್ ಸ್ಟ್ರೆಸ್

ಆರೋಗ್ಯ ಸಮಸ್ಯೆಗಳಿಂದಲೂ ಕೂಡ ಕೂದಲು ಬೇಗ ಬಿಳಿಯಾಗಬಹುದು:

  • ಥೈರಾಯ್ಡ್ ಸಮಸ್ಯೆಗಳು
  • ವಿಟಿಲಿಗೋ
  • ಅಲೋಪೇಶಿಯಾ ಏರಿಯಾಟಾ
  • ಆಟೋಇಮ್ಯೂನ್ ಕಾಯಿಲೆಗಳು
  • ದೀರ್ಘಕಾಲದ ಪೋಷಕಾಂಶಗಳ ಕೊರತೆ

ಆದ್ದರಿಂದ ಅಕಾಲಿಕವಾಗಿ ಕೂದಲು ಬಿಳಿಯಾಗಲು ಆರಂಭವಾದರೆ ಅದರ ಮೂಲ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ.

ಇದನ್ನೂ ಓದಿ: ಉಗುರಿನ ಈ ಬಿಳಿ ಗುರುತು ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ?

ಬಿಳಿಯಾದ ಕೂದಲು ಮತ್ತೆ ಕಪ್ಪಾಗುತ್ತದೆಯೇ?

ತಜ್ಞರ ಪ್ರಕಾರ, ಇದಕ್ಕೆ ಒಂದೇ ಉತ್ತರ ಇರುವುದಿಲ್ಲ. ಪೋಷಕಾಂಶಗಳ ಕೊರತೆ ಅಥವಾ ಚಿಕಿತ್ಸೆ ಸಾಧ್ಯವಿರುವ ಆರೋಗ್ಯ ಸಮಸ್ಯೆಯಿಂದ ಕೂದಲು ಬಿಳಿಯಾಗಿದ್ದರೆ, ಸರಿಯಾದ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರದಿಂದ ಕೆಲವರಲ್ಲಿ ಹೊಸದಾಗಿ ಬೆಳೆಯುವ ಕೂದಲಿನಲ್ಲಿ ಮತ್ತೆ ವರ್ಣದ್ರವ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ವಯಸ್ಸು ಅಥವಾ ಅನುವಂಶಿಕ ಕಾರಣದಿಂದ ಬಿಳಿಯಾದ ಕೂದಲು ಮತ್ತೆ ಸಂಪೂರ್ಣ ಕಪ್ಪಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಟ್ಟ ಚಿಕಿತ್ಸೆ ಇಲ್ಲ.

ಕೂದಲಿನ ಆರೋಗ್ಯ ಕಾಪಾಡಲು ಸೇವನೆ ಮಾಡಬೇಕಾದ ಆಹಾರಗಳು:

  • ಮೊಟ್ಟೆ
  • ಹಾಲು ಮತ್ತು ಹಾಲಿನ ಉತ್ಪನ್ನಗಳು
  • ಹಸಿರು ಎಲೆ ತರಕಾರಿಗಳು
  • ಬಾದಾಮಿ, ವಾಲ್ನಟ್
  • ಎಳ್ಳು
  • ಬೀನ್ಸ್ ಮತ್ತು ಬೇಳೆಕಾಳುಗಳು
  • ಮೀನು
  • ನೆಲ್ಲಿಕಾಯಿ
  • ಕಿತ್ತಳೆ, ಸೀಬೆಹಣ್ಣು ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ BJP ಟೀಕೆಗೆ ಹರಿಪ್ರಸಾದ್ ಕೌಂಟರ್​​
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ರಾಜೀನಾಮೆ ವಾಪಸ್ ಪಡೆದ ಯಶವಂತರಾಯಗೌಡ ಪಾಟೀಲ್
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ