ಕೂದಲು ತುಂಬಾ ಉದುರುತ್ತಿದ್ದರೆ ಶಾಂಪೂ, ಸೀರಮ್ ಬದಲಿಸುವ ಬದಲು ಈ ಒಂದು ಕೊರತೆಯನ್ನು ಸರಿದೂಗಿಸಿಕೊಳ್ಳಿ
ಸಾಮಾನ್ಯವಾಗಿ ಒಮ್ಮೆ ಕೂದಲು ಉದುರಲು ಪ್ರಾರಂಭವಾದ ತಕ್ಷಣ, ಶಾಂಪೂ, ಎಣ್ಣೆ ಅಥವಾ ಸೀರಮ್‌ಗಳನ್ನು ಬದಲಾಯಿಸುತ್ತೇವೆ. ಆದರೆ ನಿಜವಾದ ಸಮಸ್ಯೆ ಸೇವನೆ ಮಾಡುವ ಆಹಾರದಲ್ಲಿರಬಹುದು ಎಂಬುದು ಯಾರೂ ಕೂಡ ಗಮನಿಸುವುದಿಲ್ಲ. ಈ ಆಂತರಿಕ ಪೌಷ್ಟಿಕಾಂಶದ ಕೊರತೆಯನ್ನು ಸರಿಯಾಗಿ ಗುರುತಿಸಿ, ಆಹಾರದ ಮೂಲಕ ಕೂದಲನ್ನು ಮತ್ತೆ ಬಲಪಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ಹಾಗಾದರೆ ಪ್ರೋಟೀನ್ ಕೊರತೆಯಿಂದ ಏನೆಲ್ಲಾ ಆಗುತ್ತದೆ, ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕಾಗುತ್ತದೆ ಮತ್ತು ಕೂದಲು ಉದುರದಂತೆ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೂದಲು (Hair) ಉದುರಲು ಪ್ರಾರಂಭವಾದ ತಕ್ಷಣ, ಶಾಂಪೂ, ಎಣ್ಣೆ ಅಥವಾ ಸೀರಮ್‌ಗಳನ್ನು ಬದಲಾಯಿಸಲಾಗುತ್ತದೆ. ಆದರೆ ನಿಜವಾದ ಸಮಸ್ಯೆ ಪ್ರತಿನಿತ್ಯ ಸೇವನೆ ಮಾಡುತ್ತಿರುವ ಆಹಾರದಿಂದಲೂ ಬರಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೂದಲು ತೆಳುವಾಗಿ ಹೊಳಪು ಕಳೆದುಕೊಳ್ಳುವುದಲ್ಲದೆ, ಉದುರುವುದು ಕೇವಲ ಮಾಲಿನ್ಯದಿಂದ ಮಾತ್ರವಲ್ಲ, ಈ ಸಮಸ್ಯೆಗೆ ಪ್ರೋಟೀನ್ (Protein) ಕೊರತೆಯೂ ಕಾರಣವಾಗಿರಬಹುದು. ದೇಹ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಪಡೆಯದಿದ್ದಾಗ, ಅದು ತನ್ನ ಆದ್ಯತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳಿಗೆ ಪ್ರೋಟೀನ್ ಕಳುಹಿಸಿ, ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಈ ಆಂತರಿಕ ಪೌಷ್ಟಿಕಾಂಶದ ಕೊರತೆಯನ್ನು ಸರಿಯಾಗಿ ಗುರುತಿಸಿ, ಆಹಾರದ ಮೂಲಕ ಕೂದಲನ್ನು ಮತ್ತೆ ಬಲಪಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿದೆ. ಹಾಗಾದರೆ ಪ್ರೋಟೀನ್ ಕೊರತೆಯಿಂದ ಏನೆಲ್ಲಾ ಆಗುತ್ತದೆ, ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕಾಗುತ್ತದೆ ಮತ್ತು ಕೂದಲು ಉದುರದಂತೆ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರೋಟೀನ್ ಕೊರತೆಯಿಂದ ಕೂದಲಿನಲ್ಲಿ ಆಗುವಂತಹ ಬದಲಾವಣೆಗಳು:
- ಕೂದಲು ಬೆಳೆಯುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ.
- ಉಗುರುಗಳು ಸುಲಭವಾಗಿ ಮುರಿಯುತ್ತವೆ.
- ಕೂದಲು ತೆಳುವಾಗುವುದು ನೆತ್ತಿಯ ಮಧ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
- ಕೂದಲು ಹೊಳಪು ಕಳೆದುಕೊಂಡು ಹುಲ್ಲಿನಂತೆ ನಿರ್ಜಿವವಾಗುತ್ತದೆ.
ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಮಾಡಬೇಕು?
ಸಾಮಾನ್ಯವಾಗಿ, ವಯಸ್ಕನು ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಸೇವಿಸಬೇಕು. ಉದಾಹರಣೆಗೆ, 60 ಕೆಜಿ ತೂಕವಿರುವ ವ್ಯಕ್ತಿ ದಿನಕ್ಕೆ 50 ರಿಂದ 60 ಗ್ರಾಂ ಪ್ರೋಟೀನ್ ಸೇವನೆ ಮಾಡಬೇಕು. ಜೊತೆಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ ಅನೇಕರಲ್ಲಿ ಪ್ರೋಟೀನ್ ಕೊರತೆಗೆ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು.
ಇದನ್ನೂ ಓದಿ: 40 ವರ್ಷ ದಾಟಿದ ಮಹಿಳೆಯರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇ ಇದು!
ಕೂದಲಿಗೆ ಉತ್ತಮವಾದ ಪ್ರೋಟೀನ್ ಭರಿತ ಆಹಾರಗಳು:
- ಮೊಟ್ಟೆಗಳು: ಇವು ಪ್ರೋಟೀನ್, ಬಯೋಟಿನ್ ಮತ್ತು ಸಲ್ಫರ್ ಅಂಶಗಳಿಂದ ಸಮೃದ್ಧವಾಗಿವೆ.
- ಪನೀರ್ ಮತ್ತು ಟೋಫು: ಇವು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆಗಳಾಗಿವೆ.
- ದ್ವಿದಳ ಧಾನ್ಯಗಳು: ಪ್ರತಿದಿನ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಅಮೈನೋ ಆಮ್ಲಗಳು ದೊರೆಯುತ್ತವೆ.
- ಮೊಸರು: ಗ್ರೀಕ್ ಮೊಸರು ಸಾಮಾನ್ಯ ಮೊಸರಿಗಿಂತ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ.
- ಮೀನು ಮತ್ತು ಕೋಳಿ: ಇವುಗಳಿಂದ ಸುಲಭವಾಗಿ ಪ್ರೋಟೀನ್ ಅಂಶವನ್ನು ಪಡೆಯಬಹುದು.
ಇಷ್ಟು ಮಾತ್ರವಲ್ಲ, ಈ ವಿಷಯದಲ್ಲಿ ನಿಮ್ಮ ಜೀರ್ಣಶಕ್ತಿಯೂ ಮುಖ್ಯವಾಗುತ್ತದೆ. ಏಕೆಂದರೆ ಪ್ರೊಟೀನ್ ಸೇವನೆ ಮಾಡುವುದು ಮಾತ್ರವಲ್ಲ, ದೇಹದಿಂದ ಅದರ ಹೀರಿಕೊಳ್ಳುವಿಕೆಯೂ ಸಹ ಮುಖ್ಯವಾಗುತ್ತದೆ. ನಿಮಗೆ ಗ್ಯಾಸ್, ಆಮ್ಲೀಯತೆ ಅಥವಾ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ಸೇವಿಸುವ ಪ್ರೋಟೀನ್ ಸರಿಯಾಗಿ ಹೀರಲ್ಪಡದಿರಬಹುದು. ಆದ್ದರಿಂದ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




