ಧರ್ಮಸ್ಥಳ ಪಿಎಸ್ಐ ಕಿಶೋರ್ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಆರೋಪ, ಬೆಂಗಳೂರಲ್ಲಿ ದೂರು
ಒಮ್ಮೆ ವರ್ಷಾ ಅವರ ಹಣೆಗೆ ಪಿಸ್ಟಲ್ ಇಟ್ಟು ಹೇಳಿದ್ದು ಕೇಳಲಿಲ್ಲ ಅಂದರೆ ಶೂಟ್ ಮಾಡ್ತೀನಿ ಅಂತಲೂ ಪಿಎಸ್ಐ ಕಿಶೋರ್ ತನ್ನ ಪತ್ನಿಯನ್ನು ಬೆದರಿಸಿದ್ದಾರಂತೆ. ವರ್ಷಾ ಅವರು ಹೇಳುವ ಪ್ರಕಾರ ಒಬ್ಬಳೇ ಮಗಳು ನೆಮ್ಮದಿಯಾಗಿರಲಿ ಅಂತ ಅವರ ತಂದೆ ಸಾಕಷ್ಟು ಚಿನ್ನಾಭರಣ, ಕಾರು ಮತ್ತು ಇತರ ವಸ್ತುಗಳನ್ನು ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟಿದ್ದಾರಂತೆ.
ಬೆಂಗಳೂರು, ಮಾರ್ಚ್ 28: ಧರ್ಮಸ್ಥಳದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಗಿರುವ ಕಿಶೋರ್ (PSI Kishore) ವಿರುದ್ಧ ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ಅವರ ಪತ್ನಿ ನೀಡಿರುವ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಕಿಶೋರ್ ಪತ್ನಿ ವರ್ಷಾ ನಮ್ಮ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ್ದು ಪತಿ ಹಾಗೂ ಅವರ ಮನೆಯವರು ವರದಕ್ಷಿಣೆಗಾಗಿ ಒಂದು ವರ್ಷದಿಂದ ಪೀಡಿಸುತ್ತಿರುವುದನ್ನು, ಮಾನಸಿಕ ಕಿರುಕುಳದ ಜೊತೆಗೆ ದೈಹಿಕವಾಗಿ ಹಲ್ಲೆ ಮಾಡಿರುವುದನ್ನು ವಿವರಿಸಿದ್ದಾರೆ. ಕಾರಿಂದ ಶುರುವಾಗಿ, ಟ್ರಾನ್ಸ್ಫರ್ ಗೆ ಹಣ, ಮನೆ ಬಾಡಿಗೆ-ಹೀಗೆ ಎಲ್ಲಾದಕ್ಕೂ ತಂದೆ ಮನೆಯಿಂದ ಹಣ ತರುವಂತೆ ಹೇಳುತ್ತಿದ್ದಾರಂತೆ.
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ