ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ

ಸಂತ್ರಸ್ತೆಯ ಸಹೋದರನ ಪ್ರಕಾರ, "2023 ಜನವರಿ 15ರಂದು ತನ್ನ ಸಹೋದರಿಯ ವಿವಾಹ ಕಾನ್ಪುರದ ವ್ಯಕ್ತಿಯೊಂದಿಗೆ ನಡೆದಿದೆ. ಆದರೆ ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಿದ್ದರೂ ಸಹ ಇದೀಗ ಕೆಲ ತಿಂಗಳುಗಳಿಂದ ಹೆಚ್ಚುವರಿಯಾಗಿ 5ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ.

ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು
Follow us
|

Updated on: Jun 03, 2024 | 10:58 AM

ಉತ್ತರ ಪ್ರದೇಶ: ಕಾನ್ಪುರದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತವರು ಮನೆಯಿಂದ 5 ಲಕ್ಷ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪತಿ 5 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ, ಇಲ್ಲದಿದ್ದರೆ ತನ್ನ ಸಹೋದರನೊಂದಿಗೆ ಲೈಂಗಿಕ ಸಂಬಂಧ ಹೊಂದು ಎಂದು ಕೆಲ ತಿಂಗಳುಗಳಿಂದ ಒತ್ತಡ ಹೇರಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಇದೀಗ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಮತ್ತು ಪತಿಯ ತಮ್ಮನ ಮೇಲೆ ಕೇಸು ದಾಖಲಾಗಿದೆ.

ಸಂತ್ರಸ್ತೆಯ ಸಹೋದರನ ಪ್ರಕಾರ, “2023 ಜನವರಿ 15ರಂದು ತನ್ನ ಸಹೋದರಿಯ ವಿವಾಹ ಕಾನ್ಪುರದ ವ್ಯಕ್ತಿಯೊಂದಿಗೆ ನಡೆದಿದೆ. ಆದರೆ ಮದುವೆಯ ಸಮಯದಲ್ಲಿ ವರದಕ್ಷಿಣೆ ನೀಡಿದ್ದರೂ ಸಹ ಇದೀಗ ಕೆಲ ತಿಂಗಳುಗಳಿಂದ ಹೆಚ್ಚುವರಿಯಾಗಿ 5ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ಸಾಧ್ಯವಿಲ್ಲವೆಂದಾದರೆ ತನ್ನ ಸಹೋದರನೊಂದಿಗೆ ಮಲಗು ಎಂದು ಪತಿ ಒತ್ತಾಯಿಸಿದ್ದಾನೆ. ಇದಲ್ಲದೇ ಪತಿ ಮತ್ತು ಆತನ ಸಹೋದರ ಸೇರಿ ಆಕೆಯ ಹೊಟ್ಟೆಗೆ ಒದ್ದ ಕಾರಣ ಮೂರು ತಿಂಗಳ ಹಿಂದೆ ಗರ್ಭಪಾತವಾಗಿದೆ” ಎಂದು ತಿಳಿಸಿದ್ದಾನೆ.

ಇದನ್ನೂ ಓದಿ: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್​​​​ ಹುಡುಗರಿಗೆ ಬಿಗ್​​ ಆಫರ್​

ಇನ್​ಸ್ಪೆಕ್ಟರ್​ ನೌಬಸ್ತಾ ಜೆಪಿ ಪಾಂಡೆ ಪ್ರಕಾರ, ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಕಿರುಕುಳ ಹಲ್ಲೆ,ವರದಕ್ಷಿಣೆ ನಿಷೇದ ಕಾಯ್ದೆಯ ಅಡಿ ಸೆಕ್ಷನ್​​​ 3 ಮತ್ತು 4ರ ಅಡಿ ಎಫ್​​​ ಐ ಆರ್​​​ ದಾಖಲಾಗಿದೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ