Viral Video: ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ; ಬಿಸಿಲಿನ ತಾಪದಿಂದ ಕಂದಮ್ಮನನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ತಾಯಿ ಪಾರಿವಾಳ

ಮನುಷ್ಯರಿಗಿಂತ ಮೂಕ ಪ್ರಾಣಿ-ಪಕ್ಷಿಗಳ ಮಾತೃ ವಾತ್ಸಲ್ಯ, ಪ್ರೀತಿ ಕೂಡಾ ಭಿನ್ನವಲ್ಲ. ಮೂಕ ಜೀವಿಗಳು ಸಹ ತಮ್ಮ ಜೀವದ ಹಂಗು ತೊರೆದು ಅಪಾಯಕ್ಕೆ ಸಿಲುಕಿದ ತಮ್ಮ ಕರುಳ ಕುಡಿಯನ್ನು ರಕ್ಷಿಸಿದ ಅನೇಕ ಉದಾಹರಣೆಗಳಿವೆ. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್‌ ಆಗಿದ್ದು, ಬಿಸಿಲ ತಾಪದಿಂದ ಕಂದಮ್ಮನನ್ನು ರಕ್ಷಿಸುವ ಸಲುವಾಗಿ ತಾಯಿ ಪಾರಿವಾಳ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.

Viral Video: ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ; ಬಿಸಿಲಿನ ತಾಪದಿಂದ ಕಂದಮ್ಮನನ್ನು ರಕ್ಷಿಸಲು  ತನ್ನ ಪ್ರಾಣವನ್ನೇ ತ್ಯಾಗ ಮಾಡಿದ  ತಾಯಿ ಪಾರಿವಾಳ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jun 02, 2024 | 4:48 PM

ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಬಲ್ಲಳು. ತನ್ನ ಪ್ರಾಣ ಹೋಗುವ ಸಂದರ್ಭ ಬಂದರೂ ಸರಿ, ಜೀವ ಕೊಟ್ಟಾದರೂ ತನ್ನ ಕರುಳ ಬಳ್ಳಿಯ ರಕ್ಷಣೆ ಮಾಡುತ್ತಾಳೆ. ಹೌದು ತಾಯಿಯು ಮಗುವಿನ ರಕ್ಷಣೆಗಾಗಿ ತನ್ನಿಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಾಳೆ. ಇದೇ ಕಾರಣಕ್ಕೆ ತಾಯಿಯ ಪ್ರೀತಿ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳುವುದು. ಮನುಷ್ಯರಿಗಿಂತ ಮೂಕ ಪ್ರಾಣಿ-ಪಕ್ಷಿಗಳ ಮಾತೃ ವಾತ್ಸಲ್ಯ ಕೂಡಾ ಭಿನ್ನವಲ್ಲ. ಮೂಕ ಜೀವಿಗಳು ಸಹ ತಮ್ಮ ಜೀವದ ಹಂಗು ತೊರೆದು ಅಪಾಯಕ್ಕೆ ಸಿಲುಕಿದ ತಮ್ಮ ಕಂದಮ್ಮನನ್ನು ರಕ್ಷಿಸಿದ ಅದೆಷ್ಟೋ ಉದಾಹರಣೆಗಳಿವೆ. ಹಾಗೆಯೇ ಇಲ್ಲೊಂದು ಪಾರಿವಾಳ ತನ್ನ ಪ್ರಾಣವನ್ನೇ ಕೊಟ್ಟು ಕಂದಮ್ಮನನ್ನು ಬಿಸಿಲ ತಾಪದಿಂದ ರಕ್ಷಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವನ್ನು ಅನಿತಾ ಶರ್ಮಾ (@anita_suresh_sharma) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ವಿಡಿಯೋದಲ್ಲಿ ತಾಯಿ ಪಾರಿವಾಳವು ತನ್ನ ಕಂದಮ್ಮನ್ನು ರೆಕ್ಕೆಯ ಒಳಗೆ ಬಚ್ಚಿಟ್ಟು, ರಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಬಿಸಿಲ ತಾಪದಿಂದ ಕಂದಮ್ಮನನ್ನು ರಕ್ಷಿಸುವ ಸಲುವಾಗಿ ತಾಯಿ ಪಾರಿವಾಳ ತನ್ನ ಜೀವವನ್ನೇ ತ್ಯಾಗ ಮಾಡಿದೆ.

ಇದನ್ನೂ ಓದಿ: ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಬಡಿದ ಸಿಡಿಲು; ಆಘಾತಕಾರಿ ವಿಡಿಯೋ ವೈರಲ್‌

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.7 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಪ್ರಪಂಚದಲ್ಲಿ ತಾಯಿ ಪ್ರೀತಿಗಿಂದ ಮಿಗಿಲಾದುದು ಯಾವುದು ಇಲ್ಲ ಎನ್ನುತ್ತಾ ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ