Viral Video: ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಬಡಿದ ಸಿಡಿಲು; ಆಘಾತಕಾರಿ ವಿಡಿಯೋ ವೈರಲ್
ಕೆಲವೊಮ್ಮೆ ಪ್ರಾಕೃತಿಕವಾಗಿ ಎದುರಾಗುವ ಆಘಾತಕಾರಿ ಸನ್ನಿವೇಶಗಳು ಜೀವನವನ್ನೇ ಕಸಿದುಕೊಳ್ಳುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಬೀಚ್‌ನಲ್ಲಿ ಖುಷಿಖುಷಿಯಾಗಿ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದಿದೆ. ಈ ಆಘಾತಕಾರಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಳೆಗಾಲದಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಮಿಂಚುಗಳು ಬರುವುದು ಸಾಮಾನ್ಯ. ಆದರೆ ಗಾಳಿ ಮಳೆಯೊಂದಿಗೆ ಬರುವ ಭಯಾನಕ ಗುಡುಗು ಮಿಂಚುಗಳು ಎದೆಯಲ್ಲಿ ನಡುಕ ಹುಟ್ಟಿಸುವುದು ಮಾತ್ರವಲ್ಲದೆ, ಅನೇಕ ಪ್ರಾಣ ಹಾನಿಯನ್ನೂ ಕೂಡಾ ಉಂಟುಮಾಡುತ್ತದೆ. ಹೀಗೆ ಸಿಡಿಲು ಬಡಿದು ಪ್ರಾಣಿ-ಪಕ್ಷಿಗಳು, ಮನುಷ್ಯರು ಸಾವನ್ನಪ್ಪಿದ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದೇ ಭೀಕರ ಘಟನೆಯೊಂದು ನಡೆದಿದ್ದು, ಬೀಚ್‌ನಲ್ಲಿ ಸಂತೋಷವಾಗಿ ಆಟವಾಡುತ್ತಿದ್ದ ಮೂವರ ಮಕ್ಕಳ ಮೇಲೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಈ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ಅಮೇರಿಕಾದಲ್ಲಿ ನಡೆದಿದ್ದು, ಇಲ್ಲಿನ ಪೋರ್ಟೊ ರಿಕೊ ಕಡಲತೀರದಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದಿದ್ದು, ಪರಿಣಾಮ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳಲ್ಲಿ ಒಂದು ಮಗು 7 ವರ್ಷ, ಇನ್ನೊಂದು ಮಗು 10 ವರ್ಷ, ಮೂರನೇ ಮಗು 12 ವರ್ಷ ವಯಸ್ಸಿನದ್ದು ಎಂದು ಗುರುತಿಸಲಾಗಿದೆ. ಈ ಮೂರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದರಲ್ಲಿ 12 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.
NEW: Three American children struck by a lightning bolt on a beach in San Juan, Puerto Rico.
The children, ages 7, 10 and 12 were huddling with each other when a lightning bolt hit the group.
The kids were seen all falling backward at the same time when the bolt hit them.… pic.twitter.com/McCCoyDxgI
— Collin Rugg (@CollinRugg) May 28, 2024
ಇದನ್ನೂ ಓದಿ: ಮುಖೇಶ್ ಅಂಬಾನಿಯ ಕಿರಿಯ ಪುತ್ರನ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ರಾಮೇಶ್ವರಂ ಕೆಫೆ ಫುಡ್
ಈ ಕುರಿತ ವಿಡಿಯೋವನ್ನು @CollinRugg ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕಡಲತೀರದಲ್ಲಿನ ಮರಳಿನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಸಿಡಿಲು ಬಡಿದ ತಕ್ಷಣ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದು, ಪೋಷಕರು ಮಕ್ಕಳ ಈ ಸ್ಥಿತಿಯನ್ನು ಕಂಡು ಗೋಳಾಡಿದ್ದಾರೆ.
ಮೇ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಇಂತಹ ಪ್ರಶ್ಕುಬ್ಧ ಹವಾಮಾನವಿರುವ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕಡಲತೀರದ ಬಳಿ ಕರೆದುಕೊಂಡು ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ