ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ಆರೋಪ, ಪತ್ನಿ ನೇಣಿಗೆ ಶರಣು! ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ಬಾಳಲ್ಲಿ ಆಗಿದ್ದೇನು?

ಕಾಲೇಜಿಗೆ ಹೋಗೋದು ಬಿಟ್ಟು ತನ್ನ ಪ್ರಿಯಕರನೊಂದಿಗೆ ಸುತ್ತಾಡುತ್ತಿದ್ದ ಆಕೆ, ಕೊನೆಗೆ ಮನೆಯವರ ವಿರೋಧದ ನಡುವೆ ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡಿದ್ದಳು. ಇನ್ನೂ ಮದುವೆಯಾಗಿ ಈಗ ತಾನೆ 8 ತಿಂಗಳು ಆಗಿದೆ. ಆಗಲೇ ಗಂಡನ ಮನೆಯಲ್ಲಿ ನವವಿವಾಹಿತೆ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ಆರೋಪ, ಪತ್ನಿ ನೇಣಿಗೆ ಶರಣು! ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ಬಾಳಲ್ಲಿ ಆಗಿದ್ದೇನು?
ಮೃತ ಯುವತಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 06, 2023 | 7:56 PM

ಚಿಕ್ಕಬಳ್ಳಾಪುರ, ಡಿ.06: ಜಿಲ್ಲೆಯ ಚಿಂತಾಮಣಿ(Chintamani) ನಗರದ ವೆಂಕಟಗಿರಿಕೋಟೆಯ ನಿವಾಸಿಯಾದ ಮುಸ್ಕಾನ್ ತಾಜ್ ಎಂಬುವವರು ತಂದೆ-ತಾಯಿಯನ್ನು ದಿಕ್ಕರಿಸಿ ಪ್ರೇಮ ವಿವಾಹ(Love marriage)ವಾಗಿದ್ದರು. ಫರ್ವೀನ್ ತಾಜ್ ಹಾಗೂ ಜಾಬೀರ್ ದಂಪತಿಗಳ ಎರಡನೇ ಮಗಳಾದ ಮುಸ್ಕಾನ್ ತಾಜ್, ವೆಂಕಟಗಿರಿಕೋಟೆ ಬಡಾವಣೆಯ ನಿವಾಸಿ ಆಜಾಮ್ ಎಂಬ ಯುವಕನ್ನು ಪ್ರೀತಿಸಿ, ಕೊನೆಗೆ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದರು. ಆದ್ರೆ, ಇನ್ನೂ ಮದುವೆಯಾಗಿ ಈಗ ತಾನೆ 8 ತಿಂಗಳ ಆಗಿತ್ತು. ಆಗಲೇ ಗಂಡನ ಮನೆಯಲ್ಲಿ ಮುಸ್ಕಾನ್ ತಾಜ್ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಇನ್ನು ಯುವಕ ಆಜಾಮ್, ಪ್ರೋಗ್ರಾಮ್​ಗಳಲ್ಲಿ ತಮಟೆ ಬಾರಿಸಿ ಜೀವನ ಮಾಡುತ್ತಿದ್ದ. ಇಬ್ಬರು ಹಠಕ್ಕೆ ಬಿದ್ದು ಪ್ರೀತಿ-ಪ್ರೇಮ ಎಂದು ಸುತ್ತಾಡಿದ ಕಾರಣ ತಮ್ಮ ಮಗಳು ಸುಖವಾಗಿರಲೆಂದು ಭಾವಿಸಿದ ಯುವತಿಯ ಪೋಷಕರು, ಮಗಳಿಗೆ ಎಲ್ಲಾ ರೀತಿಯ ಮನೆ ಬಳಕೆ ವಸ್ತುಗಳನ್ನು ನೀಡಿ ಚಿಂತಾಮಣಿಯ ಮಸೀದಿಯೊಂದರಲ್ಲಿ ಸರಳವಾಗಿ ವಿವಾಹ ಮಾಡಿದ್ದರು. ಮದುವೆಯಾದ ಹೊಸತರಲ್ಲಿ ಊಟಿ , ಕೊಡೈಕೆನಾಲ್, ಹೊಗೇನಕಲ್ ಎಂದು ಸುತ್ತಾಡಿದ್ದ ಜೋಡಿ. ಜಾಲಿಯಾಗಿ ಜೀವನ ನಡೆಸಿದ್ದರು.

ಇದನ್ನೂ ಓದಿ:ಜಿಗೇನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕೊಂದು ಪತಿಯೂ ನೇಣಿಗೆ ಶರಣು; 5 ಮಕ್ಕಳು ಅನಾಥ

ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ಬಾಳಲ್ಲಿ ಆಗಿದ್ದೇನು?

ಹೀಗೆ ಅನ್ಯೂನ್ಯವಾಗಿದ್ದ ಜೋಡಿಗಳ ಮಧ್ಯೆ ಇತ್ತೀಚೆಗೆ ಐನೂರು ರೂಪಾಯಿ ಹಣಕ್ಕಾಗಿ ಮನಸ್ತಾಪ ಉಂಟಾಗಿತ್ತು. ಅದೇ ವಿಚಾರ ದೊಡ್ಡದಾಗಿ ಬೆಳೆದು ಕುಟುಂಬ ಕಲಹಕ್ಕೂ ಕಾರಣವಾಗಿತ್ತಂತೆ. ಇದೇ ವಿಚಾರದಿಂದ ನೊಂದು ತಮ್ಮ ಮಗಳು ಮೃತಪಟ್ಟಿದ್ದು, ಅದಕ್ಕೆ ಆಕೆಯ ಗಂಡನೆ ಕಾರಣ ಎಂದು ಮೃತಳ ಪೋಷಕರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಓದುವ ವಯಸ್ಸಿನಲ್ಲಿ ಪ್ರೀತಿಸಿ ವಿವಾಹವಾಗಿದ್ದ ಮುಸ್ಕಾನ್ ತಾಜ್, ಕ್ಷುಲ್ಲಕ ಕಾರಣಕ್ಕೆ ಗಂಡನ ಜೊತೆ ಮನಸ್ಥಾಪ ಮಾಡಿಕೊಂಡು ಸಾವಿನ ಮನೆ ಸೇರಿದ್ದು ಮಾತ್ರ ವಿಪರ್ಯಾಸವೆ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ