AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡ್ನಿ ವೈಫಲ್ಯದಿಂದ ವಿಚಲಿತನಾದ ಲಾರಿ ಡ್ರೈವರ್ ಹೆಂಡತಿಯನ್ನು ಕೊಚ್ಚಿಕೊಂದ: ಅವನ ಹತಾಶೆ ಏನಿತ್ತು? ಮುಂದೇನು?

ಎರಡೂ ಕಿಡ್ನಿ ವೈಫಲ್ಯವಾದಾಗ ವಿಚಲಿತನಾದ ಲಾರಿ ಡ್ರೈವರ್, ನಾನು ಹೇಗಿದ್ದರೂ ಸಾಯುತ್ತೇನೆ, ನನಗಿಂತ ಮೊದಲು ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ವಿಚಿತ್ರ ಬಯಸಿದ್ದಾನೆ. ಸಮಯಕ್ಕೆ ಕಾದಿದ್ದ ಆತ ಕೆಲಸದಿಂದ ಬಳಲಿಬಂದಿದ್ದ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಕಿಡ್ನಿ ವೈಫಲ್ಯದಿಂದ ವಿಚಲಿತನಾದ ಲಾರಿ ಡ್ರೈವರ್ ಹೆಂಡತಿಯನ್ನು ಕೊಚ್ಚಿಕೊಂದ: ಅವನ ಹತಾಶೆ ಏನಿತ್ತು? ಮುಂದೇನು?
ಕಿಡ್ನಿ ವೈಫಲ್ಯದಿಂದ ವಿಚಲಿತನಾದ ಲಾರಿ ಡ್ರೈವರ್ ಹೆಂಡತಿಯನ್ನ ಕೊಚ್ಚಿಕೊಂದ
ವಿನಾಯಕ ಬಡಿಗೇರ್​
| Updated By: ಸಾಧು ಶ್ರೀನಾಥ್​|

Updated on: Dec 06, 2023 | 3:52 PM

Share

ಆತ ಲಾರಿ ಡ್ರೈವರ್, ಬೆಂಗಳೂರಿನಲ್ಲಿ ಕೆಲ್ಸ ಮಾಡಿಕೊಂಡಿದ್ದ, ಚೆನ್ನಾಗಿ ದುಡ್ಡು ಕೂಡ ಮಾಡಿದ್ದ.. ಊರಲ್ಲಿ ಮಾಡಿರುವ ಸಾಲ ತೀರಿಸಬೇಕು, ಉತ್ತಮವಾಗಿ ಜೀವನ ಮಾಡಬೇಕು ಅಂತ ಸದುದ್ದೇಶದ ಯೋಚನೆ ಕೂಡ ಮಾಡಿದ್ದ.. ಆದರೆ ಇದ್ದಕ್ಕಿದ್ದಂತೆ ಅವನಿಗೆ ಕಿಡ್ನಿ ಸಮಸ್ಯೆ ಕಂಡು ಬಂದಿದೆ. ಆಗ ವೈದ್ಯರ ಬಳಿ ಹೋಗಿದ್ದಾನೆ. ಅವನಿಗೆ ಎರಡೂ ಕಿಡ್ನಿ ವೈಫಲ್ಯವಾಗಿರುವುದು ಗೊತ್ತಾಗುತ್ತೆ.. ಇದರಿಂದ ವಿಚಲಿತನಾಗಿದ್ದ ಆತ, ನಾನು ಹೇಗಿದ್ದರೂ ಸಾಯುತ್ತೇನೆ, ಆದರೆ ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ವಿಚಿತ್ರ ಬಯಸಿದ್ದಾನೆ. ಸಮಯಕ್ಕೆ ಕಾದಿದ್ದ ಆತ ಅವತ್ತು ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ… ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಅಂದಹಾಗೆ, ಈ ಕರುಣಾಜನಕ ಬೆಳವಣಿಗೆ ಕಂಡುಬಂದಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ (Siruguppa, Bellary) ತಾಲೂಕಿನ ಬಲಕುಂದಿ ಗ್ರಾಮದಲ್ಲಿ.

ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ರಸೂಲ್ ಸಾಬ್ ಎಂಬ ವ್ಯಕ್ತಿಯು ತನಗೆ ಎರಡು ಕಿಡ್ನಿ ವೈಫಲ್ಯ ಆಗಿದೆ, ತನ್ನ ಹೆಂಡತಿ ಮೈಬುನಾ ಬಿ. (35) ತನಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾನು ದುಡಿಯುವಾಗ ಎಲ್ಲಾ ಚೆನ್ನಾಗಿತ್ತು. ಈಗ ಹಾಸಿಗೆ ಹಿಡಿದಿದ್ದೇನೆ ಅಂತಾ ನನ್ನ ಆರೈಕೆ ಮಾಡುತ್ತಿಲ್ಲ ಎಂದು ಕೋಪಗೊಂಡು ಆಕೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ತೆಲೆಗೆ, ಕುತ್ತಿಗೆಗೆ ಕೊಡಲಿಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾನೆ. ನಡು ರಾತ್ರಿ ಕೊಲೆ ಮಾಡಿ ತನ್ನ ಎರಡು ಮಕ್ಕಳನ್ನ ಕರೆದುಕೊಂಡು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇನ್ನು ಮೃತ ದೇಹ ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿದ್ದರು. ಯಾಕೆ ಜಗಳ ಮಾಡಿಕೊಂಡರು ಅಂತ ಗೊತ್ತಿಲ್ಲ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾ ಸುಮ್ಮನಿದ್ವಿ.. ಆದರೆ ಆತ ಹೀಗೆ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

ಇನ್ನು ರಸೂಲ್ ಸಾಬ್ ಕಿಡ್ನಿ ಸಮಸ್ಯೆ ಆಗಿದ್ದರಿಂದ ದುಡಿಮೆ ಮಾಡುವುದನ್ನ ನಿಲ್ಲಿಸಿದ್ದ, ಹೀಗಾಗಿ ಸಂಸಾರ ಸಾಗಿಸುವುದು ಕಷ್ಟವಾಗಿತ್ತು.. ಆದ್ದರಿಂದ ಮೈಬುನಾ ಬಿ ನಿತ್ಯ ರೈತರ ಹೊಲಗಳಿಗೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಳು.. ಬಂದ ಕೂಲಿಯಲ್ಲಿ ಗಂಡನ ಆರೈಕೆ ಜೊತೆಗೆ‌ ಮನೆಗೆ ರೇಷನ್ ತಂದು ಜೀವನ ಮಾಡುತ್ತಿದ್ದಳು.. ಆದರೆ ಮೂರು ತಿಂಗಳಿನಿಂದ ಡಯಾಲಿಸಿಸ್ ಮಾಡುವುದನ್ನ ನಿಲ್ಲಿಸಿದ್ದ ರಸೂಲ್ ಸಾಬ್. ಕಾರಣ ಮನೆಯಲ್ಲಿ‌ ಹಣದ ಸಮಸ್ಯೆ ಎದುರಾಗಿತ್ತು.

Also Read: ತನ್ನದೆ ಕಿಡ್ನಿ ಕೊಟ್ಟು ಮಗನಿಗೆ ಮರು ಜನ್ಮ ನೀಡಲು ಮುಂದಾಗಿರುವ ಮಹಾತಾಯಿ, ಆದರೂ ವಿಘ್ನಗಳು ಎದುರಾಗಿವೆ, ನೆರವು ಬೇಕಿದೆ

ಒಂದು ಕಡೆ ಹಣ ಇಲ್ಲ ಮತ್ತೊಂದು ಕಡೆ ನಿತ್ಯ ಕೂಲಿ ಮಾಡಿ ಬಂದು ಗಂಡನ ಆರೈಕೆ ಮಾಡಬೇಕು ಅಂದ್ರೆ ಮೈಬುನಾ ಬಿ‌ ಗೂ ಬೇಸರ ತಂದಿತ್ತು. ಇದೆಲ್ಲವು ರಸೂಲ್‌ನಿಗೆ ಸಹಿಸಲು ಆಗಿಲ್ಲ.. ಜೊತೆಗೆ ನಾನು‌ ಹೇಗಿದ್ದರೂ ಸಾಯುತ್ತೇನೆ. ನನಗಿಂತ ಮೊದಲು ನನ್ನ ಹೆಂಡತಿ ಸಾಯಬೇಕು ಅಂತಾ ಯೋಚನೆ ಮಾಡಿದ್ದ ಕಿರಾತಕ ಸಮಯಕ್ಕೆ ಕಾಯುತ್ತಿದ್ದ. ನಿನ್ನೆ ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದ ಮೈಬುನಾ ಬಿ ಸುಸ್ತಾಗಿ ಬಂದು ಮಲಗಿದ್ದಾಳೆ. ಇದನ್ನೆ ನೋಡಿದ ರಸೂಲ್ ಕೊಡಲಿ ತೆಗೆದುಕೊಂಡು ಕೊಚ್ಚಿ ಕೊಲೆ ಮಾಡಿದ್ದಾನೆ.

ಒಟ್ಟಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಉತ್ತಮವಾಗಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಅನಾರೋಗ್ಯ ಸಮಸ್ಯೆ ಎದುರಾಗಿ. ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾ ಹೇಗಿದ್ದರೂ ಸಾಯುತ್ತೇನೆ, ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಕೊಲೆ ಮಾಡಿದ ಹತಾಶ ಗಂಡ, ಜೈಲು ಸೇರಿದ್ದಾನೆ. ಮಕ್ಕಳು ಮಾತ್ರ ತಂದೆಯೂ ಇಲ್ಲದೆ, ತಾಯಿನೂ ಇಲ್ಲದೆ ಅನಾಥವಾಗಿವೆ.

ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ