ನೆಲಮಂಗಲ: ಎಟಿಎಂ ಹಣ ದೋಚಲು ವಿಫಲ ಯತ್ನ, ಸಾವಿರಾರು ರೂಪಾಯಿ ಬೆಂಕಿಗೆ ಆಹುತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​ ಬಳಿ ತಡರಾತ್ರಿ ಕಳ್ಳರು ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ವಿಫಕ ಯತ್ನ ಮಾಡಿದ್ದಾರೆ. ಕಟರ್ ಮೂಲಕ ಎಟಿಎಂ ಕಟ್ ಮಾಡುತ್ತಿದ್ದ ವೇಳೆ ಬೆಂಕಿ ತಗುಲಿದೆ. ಮಾಹಿತಿ ತಿಳಿದು ಕಟ್ಟಡದ ಮಾಲೀಕ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳ್ಳತನ ಯತ್ನ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಎಟಿಎಂ ಹಣ ದೋಚಲು ವಿಫಲ ಯತ್ನ, ಸಾವಿರಾರು ರೂಪಾಯಿ ಬೆಂಕಿಗೆ ಆಹುತಿ
ನೆಲಮಂಗಲ ಟೌನ್ ಬಳಿ ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಯತ್ನ
Follow us
| Updated By: Rakesh Nayak Manchi

Updated on:Dec 07, 2023 | 9:17 AM

ನೆಲಮಂಗಲ, ಡಿ.7: ಎಟಿಎಂ ಕಳ್ಳತನಕ್ಕೆ ವಿಫಲಯ ಯತ್ನ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ಟೌನ್ ಬಳಿ ತಡರಾತ್ರಿ ನಡೆದಿದೆ. ಮುಂಬೈ ಆಕ್ಸಿಸ್​​ ಬ್ಯಾಂಕ್​​ ಅಧಿಕಾರಿಗಳಿಂದ ಮಾಹಿತಿ ತಿಳಿದ ಕಟ್ಟಡದ ಮಾಲೀಕ ಸ್ಥಳಕ್ಕೆ ದೌಡಾಯಿಸಿದಾಗ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಇಬ್ಬರು ಕಳ್ಳರು ರಾತ್ರಿ 1:50ರ ಸುಮಾರಿಗೆ ನೆಲಮಂಗಲ ಟೌನ್ ಬಳಿ ಇರುವ ಎಟಿಎಂಗೆ ನುಗ್ಗಿ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಲು ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮುಂಬೈ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕಟ್ಟಡ ಮಾಲಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಟ್ಟಡದ ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಅವಧಿ ಮೀರಿದ ತಿಂಡಿ ಪ್ಯಾಕೇಟ್ ಮೇಲೆ ಹೊಸ ಎಕ್ಸ್​ಪೈರ್ ಡೇಟ್ ಮುದ್ರಿಸುತ್ತಿದ್ದ ಗೋಡೌನ್ ಮೇಲೆ ಪೊಲೀಸರ ದಾಳಿ

ಮಾಲಿಕರು ಸ್ಥಳಕ್ಕೆ ಬರುತ್ತಿಂದ ಕಳ್ಳರು ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನೆಲ್ಲ ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಆದರೆ, ಗ್ಯಾಸ್ ಕಟರ್ ಬಳಸಿ ಯಂತ್ರವನ್ನು ಕಟ್ ಮಾಡುವ ವೇಳೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನಲ್ಲಿ ಮಿತಿಮೀರಿದ ಸೇಂದಿ ದಂಧೆ, ಮಹಿಳೆಯರೇ ಮಾಸ್ಟರ್ ಮೈಂಡ್

ರಾಯಚೂರು: ತಾಲೂಕಿನಲ್ಲಿ ಮಹಿಳೆಯರು ಸೇಂದಿ ದಂಧೆ ನಡೆಸುತ್ತಿದ್ದ ಎರಡು ಸ್ಥಳಗಳ ಮೇಲೆ ಅಬಕಾರಿ ಮತ್ತು ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ಅಸ್ಕಿಹಾಳ ಹಾಗೂ ಯಕ್ಲಾಸಪುರದಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಓರ್ವ ವೃದ್ಧೆ ಹಾಗೂ ತಾಯಿ-ಮಗಳ ಸೇಂದಿ ದಂಧೆ ನಡೆಸುತ್ತಿದ್ದ ವಿಚಾರ ಬೆಳಿಕಿಗೆ ಬಂದಿದೆ.

ಯಕ್ಲಾಸಪುರದ ನಿರ್ಮಾಣ ಹಂತದ ಮನೆಯಲ್ಲಿ ಬ್ಯಾರಲ್​ಗಟ್ಟಲೆ ಸೇಂದಿ ಪತ್ತೆಯಾಗಿದೆ. ಅಬಕಾರಿ ಸಿಬ್ಬಂದಿ ದಾಳಿ ವೇಳೆ ಪ್ರೇಮಾ ಸಿಕ್ಕಿಬಿದ್ದಿದ್ದಾಳೆ. ತಾಯಿ ಇಂದ್ರಮ್ಮಳ ಜೊತೆ ಪ್ರೇಮಾ ಸೇಂದಿ ಮಾರಾಟ ಮಾಡುತ್ತಿದ್ದಳು. ಮತ್ತೊಂದು ಕಡೆ, ಪ್ಲಾಸಿಕ್ ಪ್ಯಾಕೆಟ್​ಗಳಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದ ಸೇಂದಿಯೂ ಪತ್ತೆಯಾಗಿದೆ. ಪರಿಶೀಲನೆ ವೇಳೆ ಅಬಕಾರಿ ಸಿಬ್ಬಂದಿ ಜೊತೆಗೆ ಆರೋಪಿತೆ ಪ್ರೇಮಾ ವಾಗ್ವಾದ ನಡೆಸಿದ್ದಾಳೆ.

ಆರೋಪಿಗಳು ಮನೆಯಲ್ಲಿ ನಾಯಿ ಸಾಕುವ ಮೂಲಕ ಅಪರಿಚಿತರು ಬರುವ ಮಾಹಿತಿ ಪಡೆಯುತ್ತಿದ್ದರು. ಸದ್ಯ ಪ್ರೇಮಾಳನ್ನು ವಶಕ್ಕೆ ಪಡೆದು 80 ಲಿಟರ್ ಸೇಂದಿ ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಸ್ಕಿಹಾಳ ಗ್ರಾಮದ ವೃದ್ಧೆ ತಿಮ್ಮಮ್ಮ ಎಂಬವರನ್ನು ವಶಕ್ಕೆ ಪಡೆದು ಮನೆಯಲ್ಲಿದ್ದ ಸುಮಾರು 80 ಲಿಟರ್ ಸೇಂದಿ ಜಪ್ತಿ ಮಾಡಲಾಗಿದೆ.

ಸಿಎಚ್ ಪೌಡರ್​ನಿಂದ ತಯಾರಿಸಲಾಗಿರುವ ಸೇಂದಿ ಕುಡಿದು ಯುವ ಜನತೆ ಹಾಳಾಗುತ್ತಿದ್ದಾರೆ. ಕೂಲಿ ಕಾರ್ಮಿಕ ವರ್ಗದ ಜನ, ಕೆಲ ರೈತಾಪಿ ಜನರೇ ಹೆಚ್ಚಾಗಿ ಸೇಂದಿ ಸೇವನೆ ಮಾಡುತ್ತಿದ್ದಾರೆ. ಅತಿ ಕಡಿಮೆ‌ ಬೆಲೆಗೆ ಸಿಗುವ ಸೇಂದಿಗೆ ಜನರು ದಾಸರಾಗಿದ್ದಾರೆ. ಈ ಹಿನ್ನೆಲೆ ಸ್ಥಾಯಿ ಸಮಿತಿ ಸಭೆಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಸೂಚಿಸಿದ್ದರು. ಈ ಹಿನ್ನೆಲೆ ಅಬಕಾರಿ ಇಲಾಖೆಯಿಂದ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 am, Thu, 7 December 23

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ