ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಅರ್ಚಕನ ವಿರುದ್ಧ ಕೆಪಿಸಿಸಿ ದೂರು
ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಹಾಗಾಗೇ ಕೆಲ ಸಂಘಟನೆಗಳು, ಹೋರಾಟಗಾರೆಂದು ಕರೆಸಿಕೊಳ್ಳುವವರ ಮೂಲಕ ಇಂಥ ಪೋಸ್ಟ್ಗಳನ್ನು ಹಾಕಿಸುತ್ತಾರೆ, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡುವುದು ಹೆಚ್ಚುತ್ತಿದೆ ಎಂದು ಲಕ್ಷ್ಮಣ ಹೇಳಿದರು.
ಮೈಸೂರು, ಆಗಸ್ಟ್ 30: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವಹೇಳನಕಾರಿ ಪದಗಳಿಂದ ಹೀಯಾಳಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಮಾಡಿರುವ ವೃತ್ತಿಯಲ್ಲಿ ಅರ್ಚಕನಾಗಿರುವ ವ್ಯಕ್ತಿಯೊಬ್ಬನ ವಿರುದ್ಧ ಕೆಪಿಸಿಸಿ ಮೈಸೂರು ಘಟಕವು ಮೈಸೂರು ಪೊಲೀಸ್ ಕಮೀಷನರ್ ಅವರಿಗೆ ದೂರೊಂದನ್ನು ಸಲ್ಲಿಸಿದೆ. ಆರೋಪಿಯು ಬೆಂಗಳೂರು ನಗರ ಕೆಂಗೇರಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಾರೆ, ತನ್ನ ಪೋಸ್ಟ್ನಲ್ಲಿ ಮುಖ್ಯಮಂತ್ರಿಯವರಿಗೆ ಮುಸುಂಡಿ, ತಲೆಹಿಡುಕ ಎಂಬ ಪದಗಳನ್ನು ಬಳಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದರು. ದಸರಾ ಉದ್ಘಾಟನೆಯನ್ನು ಸಿದ್ದರಾಮಯ್ಯನವರು ಬಾನು ಮುಷ್ತಾಕ್ ಅವರಿಂದ ಮಾಡಿಸುವುದು ಈ ಅರ್ಚಕನಿಗೆ ಇಷ್ಟವಿಲ್ಲ, ತನ್ನ ಅಸಮಾಧಾನವನ್ನು ಅವರು ಹೀಗೆ ಹೊರಹಾಕಿದ್ದಾರೆ ಎಂದು ಲಕ್ಷ್ಮಣ ಹೇಳಿದರು.
ಇದನ್ನೂ ಓದಿ: ಕನ್ನಡ ತನ್ನನ್ನು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಅನ್ನೋದಿಕ್ಕೆ ನಾನೇ ಸಾಕ್ಷಿ: ಬಾನು ಮುಷ್ತಾಕ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

