ಬಾನು ಮುಷ್ತಾಕ್ ತಮ್ಮ 2023ರ ಹೇಳಿಕೆಗೆ ಸ್ಪಷ್ಟನೆ ನೀಡಲಿ ಅಂತ ಹೇಳಿ ಗೊಂದಲ ಮೂಡಿಸಿದ ಯದುವೀರ್
ಮುಸ್ಲಿಂ ಧರ್ಮದ ಆಚಾರ ವಿಚಾರಗಳ ಬಗ್ಗೆ ತಾನು ಮಾತಾಡುವುದಿಲ್ಲ, ಅದರೆ ಬಾನು ಮುಷ್ತಾಕ್ ಅವರು ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ವೇದಿಕೆಯೊಂದರ ಮೇಲೆ ಮಾತಾಡಿದ್ದು ಹಿಂದೂಗಳ ಸೆಂಟಿಮೆಂಟ್ಸ್ಗೆ ಧಕ್ಕೆಯಾಗಿದೆ, ಅದನ್ನು ಅವರು ಅರ್ಥಮಾಡಿಕೊಳ್ಳಬೇಕು, ಪಕ್ಷದ ನಿಲುವು ಮತ್ತು ತನ್ನ ನಿಲುವು ಒಂದೇ ಆಗಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಯದುವೀರ್ ಹೇಳಿದರು.
ಮೈಸೂರು, ಆಗಸ್ಟ್ 29: ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣ್ದತ್ ಒಡೆಯರ್ ದ್ವಂದ್ವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಈಗಾಗಲೇ ವರದಿಯಾಗಿರುವಂತೆ, ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ದಸರಾ ಉತ್ಸವ ಉದ್ಘಾಟಿಸುವುದನ್ನು ಅವರು ಸ್ವಾಗತಿಸಿದ್ದರು ಮತ್ತು ಷರತ್ತು ವಿಧಿಸಿರಲಿಲ್ಲ. ಅದರೆ ಈಗ ಅವರು, 2023 ರಲ್ಲಿ ಕನ್ನಡ ವೇದಿಕೆಯೊಂದರಲ್ಲಿ ಬಾನು ಮುಷ್ತಾಕ್ ಕನ್ನಡಾಂಬೆಯ ಕುರಿತು ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಲಿ ಇಲ್ಲವೇ ಅಗಿನ ಹೇಳಿಕೆಯನ್ನು ವಾಪಸ್ಸು ಪಡೆಯಲಿ, ಇವರೆಡಲ್ಲಿ ಯಾವುದಾದರೂ ಒಂದನ್ನು ಅವರು ಮಾಡಿದರೆ ಅವರು ದಸರಾ ಮಹೋತ್ಸವ ಉದ್ಘಾಟಿಸಲು ಅಭ್ಯಂತರವಿಲ್ಲ ಎಂದು ಯದುವೀರ್ ಹೇಳಿದರು. ದಸರಾ ಉತ್ಸವವು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹೋಲಿಕೆ ಮಾಡಿದ ವಿಚಾರದಲ್ಲಿ ಕ್ಷಮೆ ಕೇಳೋದು ಬಿಡೋದು ಯತೀಂದ್ರ ವಿವೇಚನೆಗೆ ಬಿಟ್ಟ ವಿಚಾರ: ಯದುವೀರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

