ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿ ಬಗ್ಗೆ ಬಾನು ಮುಷ್ತಾಕ್ ಭಿನ್ನ ನಿಲುವು ತಳೆದಿದ್ದಾರೆ: ಡಾ ಮಂಜುನಾಥ್
ಚಾಮುಂಡಿ ಬೆಟ್ಟ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಸಲಿಗೆ ಚಾಮುಂಡಿ ಬೆಟ್ಟ ಯಾರದು ಅಂತ ಸಂಸದ ಡಾ ಸಿಎನ್ ಮಂಜುನಾಥ್ರನ್ನು ಕೇಳಿದಾಗ ಅವರು ಚಾಮುಂಡಿ ಬೆಟ್ಟ ದೇವರಿಗೆ ಸೇರಿದ್ದು ಅಂತ ಉತ್ತರಿಸಿದರು.
ತುಮಕೂರು, ಆಗಸ್ಟ್ 30: ತುಮಕೂರು ಪ್ರವಾಸದಲ್ಲಿದ್ದ ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ ಡಾ ಸಿಎನ್ ಮಂಜುನಾಥ್ ಅವರು, ಬಾನು ಮುಷ್ತಾಕ್ ಈ ಬಾರಿಯ ದಸರಾ ಉದ್ಘಾಟಿಸಲು ಬಿಜೆಪಿಯ ತಕರಾರೇನೂ ಇಲ್ಲ, ಆದರೆ ಅವರು ತಾಯಿ ಭುವನೇಶ್ವರಿ, ತಾಯಿ ಚಾಮುಂಡೇಶ್ವರಿ ಮತ್ತು ಕನ್ನಡ ಬಾವುಟದ ಬಗ್ಗೆ ತಮ್ಮದೇ ಅದ ನಿಲುವನ್ನು ತಳೆದಿದ್ದಾರೆ, ಹಾಗಾಗಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಹಿಂದೆಲ್ಲ ಹೇಗೆ ವಿಧಿವಿಧಾನಗಳನ್ನು ಅನುಸರಿಸಿ ದಸರಾ ಮಹೋತ್ಸವವನನ್ನು ಉದ್ಘಾಟಿಸಲಾಗುತ್ತಿತ್ತೋ ಹಾಗೆಯೇ ಅವರೂ ಉದ್ಘಾಟಿಸಿದರೆ ಅಭ್ಯಂತರವೇನೂ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಾನು ಮುಷ್ತಾಕ್ ತಮ್ಮ 2023ರ ಹೇಳಿಕೆಗೆ ಸ್ಪಷ್ಟನೆ ನೀಡಲಿ ಅಂತ ಹೇಳಿ ಗೊಂದಲ ಮೂಡಿಸಿದ ಯದುವೀರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

